ದೀಪ ಅಜ್ಞಾನವನ್ನು ಕಳೆದು ಜ್ಞಾನದ ಬೆಳಕು ನಿಡುತ್ತದೆ-ಮಾಣಿಲಶ್ರೀ
ಪೆರ್ಲ: ಶ್ರೀನಿವಾಸ ಕಲ್ಯಾಣ ಲೋಕಹಿತಕ್ಕಾಗಿ ನಡೆಯುವ ಕಾರ್ಯ.ಸಜ್ಜನರು ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಸಹಕರಿಸಿದಾಗ ನೆಮ್ಮದಿಯ ಸಮಾಜ ನಿಮರ್ಾಣ ಸಾಧ್ಯ.ದೀಪ ಬೆಳಕಿನ ಮತ್ತು ಜ್ಞಾನದ ಸಂಕೇತವಾಗಿದ್ದು, ನಮ್ಮೊಳಗಿನ ಅಜ್ಞಾನವನ್ನು ಕಣ್ಣು ತೆರೆಸಿ ಜ್ಞಾನದೆಡೆಗೆ ನಡೆಯುವ ಮಹತ್ತರ ಸಂದೇಶವನ್ನು ಸಾರುತ್ತದೆ ಎಂದು ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಶ್ರೀಗಳು ಆಶೀರ್ವಚನ ನೀಡಿದರು.
ಶ್ರೀ ಪುರಂದರ ದಾಸ ಆರಾಧನೋತ್ಸವ ಸಮಿತಿ ಇದರ ದಶಮಾನೋತ್ಸವ ಪ್ರಯುಕ್ತ ಶ್ರೀನಿವಾಸ ಮಹಾಮಂಗಲೋತ್ಸವ ಮತ್ತು ಶ್ರೀಯುತ ರಾಮಕೃಷ್ಣ ಕಾಟುಕುಕ್ಕೆ ಅವರ ದಾಸ ಸಂಕೀರ್ತನಾ ಯಾನದ 500ನೇ ಲೋಕಾರ್ಪಣೆಯ ಅಂಗವಾಗಿ ಗುರುವಾರ ಮುಂಜಾನೆ ಕಾಟುಕುಕ್ಕೆ ಶ್ರೀಸುಬ್ರಾಯ ದೇವರ ಸನ್ನಿಧಾನದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರದ ಅರ್ಚಕ ನಾರಾಯಣ ಮಯ್ಯ ದೀಪ ಪ್ರಜ್ವಲಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಆಡಳಿತ ಮೊಕ್ತೇಸರರಾದ ವಿಷ್ಣುಪ್ರಕಾಶ್ ಪಿಲಿಂಗಲ್ಲು, ಊರ ಪರವೂರ ಭಕ್ತಜನ , ವಿವಿಧ ಭಜನಾ ಮಂಡಳಿಗಳು, ಶ್ರೀನಿವಾಸ ಮಹಾಮಂಗಲೋತ್ಸವದ ಸ್ಥಾನೀಯ ಸಮಿತಿ ಕಾಟುಕುಕ್ಕೆ ಉಪಸ್ಥಿತರಿದ್ದರು.