HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಟಕರ್ಿ: ರನ್ವೇಯಿಂದ ಜಾರಿ ಸಮುದ್ರದತ್ತ ನುಗ್ಗಿದ ವಿಮಾನ, ತಪ್ಪಿದ ಭಾರೀ ದುರಂತ
    ಅಂಕಾರ(ಟಕರ್ಿ): ಉತ್ತರ ಟಕರ್ಿಯ ಟ್ರಬ್ಜೊನ್ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಭೂಸ್ಪರ್ಶದ ಬಳಿಕ ರನ್ ವೇಯಿಂದ ಜಾರಿ ಕೆಲವು ಅಡಿಗಳಷ್ಟು ತಗ್ಗು ಪ್ರದೇಶಕ್ಕೆ ನುಗ್ಗಿದ್ದು ಸಮುದ್ರಕ್ಕೆ ಬೀಳುವುದರಿಂದ ಸ್ಪಲ್ಪದರಲ್ಲೇ ಪಾರಾದ ಘಟನೆ ಭಾನುವಾರ ನಡೆದಿದೆ. 
   ಪೆಗಾಸಸ್ ಏರ್ ಲೈನ್ಸ್ ಗೆ ಸೇರಿದ ವಿಮಾನದಲ್ಲಿ 162 ಮಂದಿ ಪ್ರಯಾಣಿಸುತ್ತಿದ್ದು ಇಬ್ಬರು ಪೈಲಟ್ ಮತ್ತು ನಾಲ್ವರು ಸಿಬ್ಬಂದಿ ಇದ್ದರು. ವಿಮಾನ ಸಮುದ್ರಕ್ಕೆ ಬೀಳದಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದೆ. ಈ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಎಲ್ಲರನ್ನೂ ವಿಮಾನದಿಂದ ಸುರಕ್ಷಿತವಾಗಿ ಹೊರ ಕರೆತರಲಾಗಿದೆ.
  ರನ್ ವೇಯಿಂದ ಜಾರಿದ ವಿಮಾ ತಲೆಕೆಳಗಾಗಿ ಸಮುದ್ರದತ್ತ ಜಾರಿದ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ವಿಮಾನದ ಚಕ್ರಗಳು ಮಣ್ಣಿನಲ್ಲಿ ಹೂತಿವೆ. ಇಲ್ಲದಿದ್ದಲ್ಲಿ ವಿಮಾನ ಸಮುದ್ರಕ್ಕೆ ಬೀಳುವ ಅಪಾಯವಿತ್ತು.
   ಈ ವಿಮಾನ ಅಂಕಾರದಿಂದ ಹೊರಟು ಟ್ರಬ್ಜೊನ್ ನಿಲ್ದಾಣದಲ್ಲಿ ಭೂಸ್ಪರ್ಷ ಮಾಡಿತ್ತು. ಘಟನೆಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಟ್ರಬ್ಜೊನ್ ಗವರ್ನರ್ ಕಚೇರಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries