HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ದೇಶಭಕ್ತಿ ಶಿಕ್ಷಣವನ್ನು ಬೋಧಿಸುವ ವ್ಯವಸ್ಥೆಯೇ ಬಾಲಗೋಕುಲ : ಸುರೇಶ ಪರ್ಕಳ
  ಕುಂಬಳೆ: ವಿಶ್ವದಲ್ಲಿ ಹಿಂದೂ ಧರ್ಮದ ವಿಜಯಪತಾಕೆ ಬಾನೆತ್ತರಕ್ಕೆ ಹಾರಾಡಲು ಹಿಂದೂ ಸಮಾಜದ ಸವರ್ಾಂಗೀಣ ಉನ್ನತಿಯೇ ರಾಜಮಾರ್ಗ. ಅದಕ್ಕಾಗಿ ಮನೆ ಮನೆಗಳಲ್ಲಿ ದೇಶ ಭಕ್ತಿ, ಸ್ವಾಭಿಮಾನ ಹಾಗೂ ಸ್ವಾವಲಂಬನೆಯ ವಿಚಾರಗಳು ಮೂಡಿಬರಬೇಕು. ಉತ್ತಮ ಜೀವನ, ಸಾಮಾಜಿಕ ಚಿಂತನೆ ಹಾಗೂ ಸನಾತನ ಸಂಸ್ಕೃತಿಗಳ ಕುರಿತು ಬಾಲ್ಯದಲ್ಲೇ ಮಾರ್ಗದರ್ಶನ ನೀಡಬೇಕು. ಮಾನವೀಯ ಮೌಲ್ಯ ಬೆಳೆಸುವ ಮತ್ತು ದೇಶಭಕ್ತಿ ಮೂಡಿಸುವ ಸಾಂಸ್ಕೃತಿಕ ಶಿಕ್ಷಣವನ್ನು ಬೋಧಿಸುವ ವ್ಯವಸ್ಥೆಯೇ ಬಾಲಗೋಕುಲಗಳಾಗಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಕಾರ್ಯಕಾರಿಣಿ ಸದಸ್ಯರಾಗಿರುವ ಸುರೇಶ ಪರ್ಕಳ ಹೇಳಿದರು.
   ಅವರು ಬೆದ್ರಡ್ಕ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಪರಿಸರದಲ್ಲಿ ಜರಗಿದ ಮೊಗ್ರಾಲ್ ಪುತ್ತೂರು ಮಂಡಲ ವ್ಯಾಪ್ತಿಯಲ್ಲಿರುವ ಎಲ್ಲಾ ಬಾಲಗೋಕುಲಗಳ `ಗೋಕುಲೋತ್ಸವ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
   ಹಿಂದೂ ಸಂಪ್ರದಾಯಗಳ ಆಚಾರ, ವಿಚಾರಗಳನ್ನು ತಿಳಿಸಿ, ಸಮಾಜ ಹಿತದ ಕೆಲಸಗಳಿಗೆ ಪ್ರೇರಣೆ ನೀಡಿ, ಪ್ರತಿಭೆ ಮತ್ತು ನಾಯಕತ್ವವನ್ನು ಬೆಳೆಸಿ ಸಶಕ್ತ ಸಮಾಜ ನಿಮರ್ಾಣದ ಸದುದ್ದೇಶವೇ ಗೋಕುಲೋತ್ಸವ ಎಂದರು.
   ಹುಡ್ಕೋದ ಮಾಜಿ ನಿದರ್ೇಶಕ ಮತ್ತು ಸಲಹೆಗಾರ ಕೆ.ರವೀಂದ್ರ ಆಳ್ವ ಕಂಬಾರು ಉದ್ಘಾಟಿಸಿದರು. ಮಧೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯ ರವೀಂದ್ರ ರೈ ಸಿರಿಬಾಗಿಲು ಅಧ್ಯಕ್ಷತೆ ವಹಿಸಿದರು. ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಮೊಕ್ತೇಸರ ಎ.ಮಂಜುನಾಥ ರೈ  ಉಪಸ್ಥಿತರಿದ್ದರು.
   ಸಭಾ ಕಾರ್ಯಕ್ರಮದ ಬಳಿಕ ಬಾಲಗೋಕುಲ ವಿದ್ಯಾಥರ್ಿ-ವಿದ್ಯಾಥರ್ಿನಿಯರಿಂದ ನಿರ್ಧರಿತ ಬೌದ್ಧಿಕ ಹಾಗೂ ಶಾರೀರಿಕ ಪ್ರತಿಭಾ ಪ್ರದರ್ಶನ ನಡೆಯಿತು. ಆರಂಭದಲ್ಲಿ ದೇಶಮಂಗಲದ ಶ್ರೀ ಕಾಳಿಕಾ ವಿಶ್ವಕರ್ಮ ಭಜನಾ ಮಂದಿರ ಪರಿಸರದಲ್ಲಿ ಶೋಭಾಯಾತ್ರೆ ನಡೆಯಿತು.
   ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಾಲಗೋಕುಲ ಕಾಸರಗೋಡು ತಾಲೂಕು ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಖ್ಯಾತ ಶಿಲ್ಪಿ ರಮೇಶ ಕಾರಂತ ಬೆದ್ರಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries