ಚಿರತೆಯ ದೃಶ್ಯ ಸಿ ಸಿ ಟಿವಿಯಲ್ಲಿ: ಸ್ಥಳೀಯರು ಭೀತಿಯಲ್ಲಿ
ಕುಂಬಳೆ: ಕುಂಬಳೆ ಕುಂಟಂಗೇರಡ್ಕ ಮಸೀದಿಯಲ್ಲಿ ಸ್ಥಾಪಿಸಲಾಗಿದ್ದ ಸಿ ಸಿ ಟಿ ವಿ ಕ್ಯಾಮರಾದಲ್ಲಿ ಚಿರತೆಯಂದು ನಡೆಕೊಂಡು ಹೋಗುತ್ತಿರುವ ದೃಶ್ಯವೊಂದು ಸೆರೆಯಾಗಿರುವುದು ವ್ಯಾಪಕ ಆತಂಕಕ್ಕೆ ಕಾರಣವಾಗಿದೆ.
ಮಂಗಳವಾರ ಅಂಗಡಿ ಮುಚ್ಚಿ ಕಾರಿನಲ್ಲಿ ಮನೆಯ ಕಡೆಗೆ ತೆರಳುತಿದ್ದ ವ್ಯಾಪಾರಿಯೊಬ್ಬರಿಗೆ ಚಿರತೆ ಕಂಡಿರುವ ಬಗ್ಗೆ ಸುದ್ದಿಯಾಗಿತ್ತು. ಕಾರಿನ ಪ್ರಕಾಶದಿಂದ ಚಿರತೆ ಸಮೀಪದ ಗೋಡೆಯೊಂದರಿಂದ ಹಾರಿ ಹೋಗಿರುವುದಾಗಿ ವ್ಯಾಪಾರ ಹೇಳಿಕೆ ನೀಡಿದ್ದರು.
ಆದರೆ ಇದೀಗ ಸಿ ಸಿ ಟಿ ವಿಯಲ್ಲಿ ಚಿರತೆಯನ್ನು ಕಂಡ ಹಿನ್ನೆಲೆಯಲ್ಲಿ ಸ್ಥಳೀಯರ ಭೀತಿ ಇಮ್ಮಡಿಯಾಗಿದೆ. ಸಿ ಸಿ ಟಿವಿ ಇರುವ ಮಸೀದಿಯ ಸಮೀಪ ಕಾಡಿರುವ ಪ್ರದೇಶವಾಗಿದೆ. ಈ ಬಗ್ಗೆ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರೂ ಯಾರೂ ಇತ್ತ ಕಡೆ ತಿರುಗಿಯೂ ನೋಡಿಲ್ಲವೆಂಬ ಆರೋಪ ಕೇಳಿ ಬಂದಿದೆ.