ಮದರು ಮಹಾಮಾತೆ ಮೊಗೇರ ಸಮಾಜದ ಕಾರ್ಯ ಶ್ಲಾಘನೀಯ-ಕೆ.ಎಲ್ ಪುಂಡರೀಕಾಕ್ಷ
ಕುಂಬಳೆ: ಮದರು ಮಹಾಮಾತೆಗೆ ಸೂಕ್ತ ಸ್ಥಾನಮಾನ ಲಭಿಸಲು ಶ್ರೀಮದರು ಮಹಾಮಾತೆ ಮೊಗೇರ ಸಮಾಜ ಕೈಗೆತ್ತಿಕೊಂಡಿರುವ ಯೋಜನೆಗಳಿಗೆ ಎಲ್ಲಾ ಮೊಗೇರ ಬಾಂಧವರು ಪೂರ್ಣ ಸಹಕಾರ ನೀಡಬೇಕೆಂದು ಕುಂಬಳೆ ಗ್ರಾ.ಪಂ.ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ ಕರೆನೀಡಿದರು.
ಅವರು ಇತ್ತೀಚೆಗೆ ಕಿದೂರು ಕುಂಟಂಗೇರಡ್ಕದಲ್ಲಿ ಆಯೋಜಿಸಲಾಗಿದ್ದ ಮದರು ಮಹಾಮಾತೆ ಮೊಗೇರ ಸಮಾಜದ ಪ್ರಾದೇಶಿಕ ಸಮಿತಿ ರೂಪೀಕರಣ ಸಭೆ ಉದ್ಘಾಟಿಸಿ ಮಾತನಾಡಿದರು.
ದೈವಾಂಶ ಸಂಭೂತೆಯಾದ ಮದರು ಮಹಾಮಾತೆಯ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಆದರೆ ಮದರು ಮಹಾಮಾತೆಗೆ ಸೂಕ್ತಸ್ಥಾನಮಾನ ಲಭಿಸುವಲ್ಲಿ ಯಾರೂ ಮುತುವಜರ್ಿ ವಹಿಸದಿರುವುದು ದೌಭರ್ಾಗ್ಯಕರವಾಗಿದ್ದು, ಪ್ರಚಾರದ ತೆವಲಿನಿಂದ ಆಗೀಗ ಆ ಬಗ್ಗೆ ಧ್ವನಿಯೆತ್ತಲಷ್ಟೆ ಸಾಧ್ಯವಾಗಿದೆ. ಆದರೆ ಮೊಗೇರ ಸಮುದಾಯ ಈ ಬಗ್ಗೆ ಕ್ರಿಯಾತ್ಮಕವಾಗಿ ಚಟುವಟಿಕೆ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅವರು ತಿಳಿಸಿದರು. ಇತಿಹಾಸವನ್ನು ತಿರುಚುವ ಯತ್ನಗಳು ಹೆಚ್ಚು ಕಾಲ ಫಲ ನೀಡದು. ನ್ಯಾಯಯುತ ದಾಖಲೆಗಳನ್ನು ಮಾನ್ಯಮಾಡಿ ಮದರು ಮಹಾಮಾತೆಗೆ ಸೂಕ್ತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಸಮಿತಿಯು ಕೈಗೊಂಡಿರುವ ಕಾರ್ಯಯೋಜನೆಗಳಿಗೆ ಎಲ್ಲರೂ ಒಗ್ಗಟ್ಟಿನ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಗನ್ನಾಥ ಅಧ್ಯಕ್ಷತೆ ವಹಿಸಿದ್ದರು. ಮದರು ಮಹಾಮಾತೆ ಸಮಿತಿಯ ಮುಖಂಡರಾದ ಆನಂದ ಕೆ.ಮವ್ವಾರು, ರಾಮಪ್ಪ ಮಂಜೇಶ್ವರ, ಶಂಕರ ಡಿ, ಚಂದ್ರ ಕಾಜೂರು, ಸುರೇಶ ಅಜಕ್ಕೋಡು, ಕೃಷ್ಣ ಡಿ, ಸುಂದರ ಮಾಲಂಗೈ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.ಕುಂಟಂಗೇರಡ್ಕ ಪ್ರಾದೇಶಿಕ ಸಮಿತಿಯ ನೂತನ ಪದಾಧಿಕಾರಿಗಳಾಗಿ ಚಂದ್ರ ಕಾಜೂರು(ಗೌರವಾಧ್ಯಕ್ಷ), ಜಗನ್ನಾಥ(ಅಧ್ಯಕ್ಷ), ನವೀನ್ ಕೆ.(ಉಪಾಧ್ಯಕ್ಷ), ಅಶೋಕ(ಕಾರ್ಯದಶರ್ಿ), ಮನೋರಾಜ್(ಜೊತೆ ಕಾರ್ಯದಶರ್ಿ), ಅನೀಶ್(ಕೋಶಾಧಿಕಾರಿ) ಮತ್ತು ಇತರ ಆರು ಮಂದಿಗಳ ಕಾರ್ಯಕಾರಿ ಸಮಿತಿ ರಚಿಸಲಾಯಿತು.