ಸುಧೀಂದ್ರ ತೀರ್ಥ ಆರಾಧನಾ ಉತ್ಸವ
ಮಂಜೇಶ್ವರ: ಶ್ರೀಕಾಶೀಮಠ ಸಂಸ್ಥಾನದ ಶ್ರೀಸುಧೀಂದ್ರತೀರ್ಥ ಸ್ವಾಮೀಜಿಯವರ ದ್ವಿತೀಯ ಪುಣ್ಯತಿಥಿ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲಿ ಕಾಶೀಮಠದ ಪರವಾಗಿ ಇತ್ತೀಚೆಗೆ ವಿವಿಧ ಕಾರ್ಯಕ್ರಮಗಳು ನಡೆಯಿತು.
ಆರಾಧನೋತ್ಸವದ ಅಂಗವಾಗಿ ಮಧ್ಯಾಹ್ನ ವಿಶೇಷ ಮಹಾಪೂಜೆ, ಸಮಾರಾಧನೆ, ಸಂಜೆ ಊರ ಸಮಾಜ ಬಾಂಧವರಿಂದ ಭಜನಾ ಸೇವೆಗಳು ನೆರವೇರಿತು. ಭಜನಾ ಕಾರ್ಯಕ್ರಮವನ್ನು ಶ್ರೀಮದ್ ಅನಂತೇಶ್ವರ ದೇವಾಲಯದ ಆಡಳಿತ ಮೊಕ್ತೇಸರ ದಿನೇಶ್ ಶೆಣೈ, ಪುರುಷೋತ್ತಮ ಆಚರ್, ವೇದಮೂತರ್ಿ ಸುರೇಶ್ ಭಟ್, ಕಾಶೀಮಠದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಜೆ.ಕಿಣಿ ಸಂಯುಕ್ತರಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರೇಮಚಂದ್ ಭಗತ್, ವಿಠಲದಾಸ್ ಭಟ್, ಸತೀಶ್ ಭಟ್ ಉಪಸ್ಥಿತರಿದ್ದರು. ಎಂ.ಜೆ.ಕಿಣಿ ಈ ಸಂದರ್ಭ ಪೂಜ್ಯ ಸುಧೀಂದ್ರ ತೀರ್ಥರ ಗುಣಗಾನ ಮಾಡಿ ನಮನ ಸಲ್ಲಿಸಿದರು. ಭಜನಾ ಕಾರ್ಯಕ್ರಮದ ಬಳಿಕ ಉತ್ಸವ ಪೂಜೆ,ಪ್ರಸಾದ ವಿತರಣೆ ನಡೆಯಿತು.