HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಕನ್ನಡವನ್ನು ಕಡೆಗಣಿಸುವ ರಾಜಕೀಯಪಕ್ಷಗಳ ಮೆರವಣಿಗೆಯ ಚಿತ್ರ ಕನ್ನಡ ಪತ್ರಿಕೆಗಳಲ್ಲಿ ಪ್ರಕಟಗೊಳ್ಳಬೇಕೆ?
   ಡಾ.ನರೇಶ್ ಮುಳ್ಳೇರಿಯ:
     ಕಾಸರಗೋಡು ಮತ್ತು ಮಂಜೇಶ್ವರ ತಾಲೂಕು ಸಂಪೂರ್ಣವಾಗಿ ಕೇರಳ ಸರಕಾರ ಅಂಗೀಕರಿಸಿದ  ಕನ್ನಡ ಭಾಷಾ ಅಲ್ಪಸಂಖ್ಯಾಕ ಪ್ರದೇಶವಾಗಿದೆ. ಇಲ್ಲಿ ನಾಮಫಲಕ-ಸೂಚನಾಫಲಕಗಳನ್ನು ಕನ್ನಡದಲ್ಲೂ ಪ್ರದಶರ್ಿಸಬೇಕೆಂದು ಹಾಗೆಯೇ ಸಾರ್ವಜನಿಕ ಮಾಹಿತಿಗಳನ್ನು ಕನ್ನಡದಲ್ಲಿ ಒದಗಿಸಬೇಕೆಂದು ಸರಕಾರಿ ಆದೇಶವಿದ್ದರೂ ಸರಕಾರಿ ಅಧಿಕಾರಿಳು ಇದನ್ನು ಉಲ್ಲಂಘಿಸುತ್ತಿರುವುದು ಕಂಡುಬರುತ್ತದೆ. ರಾಜ್ಯಭಾಷೆಯಾದ ಮಲಯಾಳದಲ್ಲಿ ಮಾಹಿತಿಯನ್ನು ನೀಡಬಾರದೆಂದು ಹಾಗೂ ಕನ್ನಡದಲ್ಲಿ ಮಾತ್ರ ಮಾಹಿತಿ ನೀಡಬೇಕೆಂದು ನಾವು ಯಾರೂ  ಒತ್ತಾಯಿಸುತ್ತಿಲ್ಲ. ಭಾಷಾ ಸೌಹಾರ್ಧವನ್ನು ಕಾಪಾಡುವ ದೃಷ್ಟಿಯಿಂದ, ಎಲ್ಲ ಜನರಿಗೂ ಮಾಹಿತಿ ತಲಪಬೇಕೆಂಬ ಉದ್ದೇಶದಿಂದ, ವ್ಯಾವಹಾರಿಕವಾಗಿ-ಸಾಂಸ್ಕೃತಿಕವಾಗಿ-ಶೈಕ್ಷಣಿಕವಾಗಿ ಅಲ್ಪಸಂಖ್ಯಾಕ ಭಾಷೆಯನ್ನು ಉಳಿಸುವ ಧ್ಯೇಯದಿಂದ, ಸಂವಿಧಾನದ ಆಶಯವನ್ನು ಗೌರವಿಸುವ ಮೌಲ್ಯವನ್ನು ಪಾಲಿಸುವ ಕಾಳಜಿಯಿಂದ ಮಲಯಾಳದೊಂದಿಗೆ  ಕನ್ನಡದಲ್ಲೂ ಮಾಹಿತಿಯನ್ನು ನೀಡಬೇಕೆಂದು ಮಾತ್ರ  ನಾವು ಕೇಳಿಕೊಳ್ಳುತ್ತಿದ್ದೇವೆ. ಸಂವಿಧಾನಕ್ಕೆ ಬದ್ಧವಾದ ನಮ್ಮ ಮುಖ್ಯ ರಾಜಕೀಯ ಪಕ್ಷಗಳಾದ  ಎಡಪಕ್ಷಗಳು, ಕಾಂಗ್ರೆಸ್, ಬಿ,ಜೆ.ಪಿ, ಮುಸ್ಲಿಂಲೀಗ್ ಗಳಿಗೆ  ಸಂವಿಧಾನೋಕ್ತವಾದ ಭಾಷಾ ಅಲ್ಪಸಂಖ್ಯಾಕರ ಹಿತರಕ್ಷಣೆಯನ್ನು ಮಾನಿಸುವ ಜವಾಬ್ದಾರಿಯಿದೆ. ಆದರೆ ಈ ರಾಜಕೀಯಪಕ್ಷಗಳಲ್ಲಿ ಯಾವುವು ತಮ್ಮ ಸಭೆ, ಮೆರವಣಿಗೆ, ಬ್ಯಾನರ್, ಮಾಹಿತಿಪತ್ರಗಳಲ್ಲಿ ಕನ್ನಡವನ್ನು ಬಳಸುತ್ತವೆ? ತಮ್ಮ ಆಡಳಿತವಿರುವ ಹಣಕಾಸು ಸಂಸ್ಥೆ, ಸಹಕಾರ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಕನ್ನಡಕ್ಕೆ ಬೆಲೆ ನೀಡುತ್ತವೆ? ಇದನ್ನು ಜನರು ಗಮನಿಸುತ್ತಿದ್ದಾರೆಂಬುದು ಅವುಗಳಿಗೆ ತಿಳಿದಿರಲಿ. ಕಾಸರಗೋಡಿನಂತಹ ಜಿಲ್ಲಾಕೇಂದ್ರದಲ್ಲಿ ಸಭೆ. ಸಮ್ಮೇಳನ, ಸಮಾರಂಭ ಧರಣಿ, ಮೆರವಣಿಗೆ ನಡೆಸುವಾಗ ಮಲಯಾಳದೊಂದಿಗೆ ಕನ್ನಡದಲ್ಲೂ ಬ್ಯಾನರ್, ಮಾಹಿತಿಪತ್ರ ಮೊದಲಾದವನ್ನು ಪ್ರಕಟಿಸಲು ಏನು ಅಡ್ಡಿ? ಈ ರಾಜಕೀಯ ಪಕ್ಷಗಳಿಗೆ ಕನ್ನಡದಲ್ಲಿ ಬ್ಯಾನರ್ ಬರೆಸಲು ದುಡ್ಡಿನ ಕೊರತೆಯಿದೆಯೆ? ಈ ಪಕ್ಷಗಳಲ್ಲಿ ಕನ್ನಡಿಗ ಧುರೀಣರು ಹಾಗೂ ಕಾರ್ಯಕರ್ತರಿಲ್ಲವೆ?ಅದಕ್ಕಿಂತ ಹೆಚ್ಚಿನ ದುರಂತವೆಂದರೆ ಕನ್ನಡವನ್ನು ಕಸಕ್ಕಿಂತ ಕಡೆಯಾಗಿ ಕಡೆಗಣಿಸಿದ ಈ  ರಾಜಕೀಯ ಪಕ್ಷಗಳ ಮೆರವಣಿಗೆಯ ಫೊಟೋ ವರದಿ ಪ್ರಕಟವಾಗಲು ಕನ್ನಡ ಪತ್ರಿಕೆಗಳು ಬೇಕು!   ದುಡ್ಡುಕೊಟ್ಟು ಕನ್ನಡಪತ್ರಿಕೆಗಳನ್ನು ಓದುವ ಕನ್ನಡಿಗರಿಗೆ ಕನ್ನಡವನ್ನು ಅವಮಾನಿಸಿದ ಈ ರಾಜಕೀಯಪಕ್ಷಗಳ ಚಿತ್ರವನ್ನು ನೋಡುವ ದುರ್ಗತಿ.
   ಕನ್ನಡದಲ್ಲಿ ಬ್ಯಾನರ್ ಪ್ರದಶರ್ಿಸದ ರಾಜಕೀಯ ಪಕ್ಷಗಳ ಧರಣಿ ಮೆರವಣಿಗೆಗಳ ಚಿತ್ರವನ್ನು ಪ್ರಕಟಿಸಬಾರದೆಂದು ಕಾಸರಗೋಡಿನ ಕನ್ನಡ ಪತ್ರಿಕೆಗಳನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ. ಕನ್ನಡವನ್ನು ಅವಮಾನಿಸುವ ರಾಜಕೀಯಪಕ್ಷಗಳ ಮೆರವಣಿಗೆಯ ಚಿತ್ರವನ್ನು ಕನ್ನಡಪತ್ರಿಕೆಗಳಲ್ಲಿ ನೋಡುವುದು ಅನಿವಾರ್ಯವೆಂದಾದರೆ ಇನ್ನು ಮುಂದೆ ಪತ್ರಿಕೆಗಳನ್ನು ಕೊಂಡುಕೊಳ್ಳುವುದನ್ನೇ ಬಿಟ್ಟುಬಿಡುತ್ತೇನೆ. ಕಾಸರಗೋಡಿನ ರಾಜಕೀಯ ಪಕ್ಷಗಳು ಇನ್ನಾದರೂ ಈ ಎಚ್ಚೆತ್ತುಕೊಂಡು ಇಲ್ಲಿ ನಡೆಯುವ ತಮ್ಮ ಸಮ್ಮೇಳನ, ಸಭೆ, ಧರಣಿ ಮೆರವಣಿಗೆ ಮೊದಲಾದವುಗಳಲ್ಲಿ ಕನ್ನಡಕ್ಕೂ ಸ್ಥಾನ ಕಲ್ಪಿಸುವ ಮೂಲಕ `ಸಪ್ತಭಾಷಾ ಸಂಗಮಭೂಮಿ' ಎಂಬ ತಮ್ಮ ಹಾಸ್ಯಾಸ್ಪದವಾದ ಮಂತ್ರಕ್ಕೆ ಗೌರವವನ್ನು ನೀಡಲಿ ಎಂದು ಹಾರೈಸುತ್ತೇನೆ.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries