HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಮನೆಮನಗಳಲ್ಲಿ ಧಾಮರ್ಿಕತೆ ತುಂಬಬೇಕು-ಪಳ್ಳತ್ತಡ್ಕ ಪರಮೇಶ್ವರ ಭಟ್
    ಬದಿಯಡ್ಕ:  ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ. ಪ್ರತಿಯೊರ್ವ ವ್ಯಕ್ತಿಯ ಅಳಿಲು ಸೇವೆಯಿದ್ದರೆ ಊರನ್ನು ಪ್ರಗತಿಯತ್ತ ಕೊಂಡೊಯ್ಯಬಹುದು ಎಂದು ವೇದಮೂತರ್ಿ ಪಳ್ಳತ್ತಡ್ಕ ಪರಮೇಶ್ವರ ಭಟ್ಟರು ಅಭಿಪ್ರಾಯಪಟ್ಟರು.
ಬುಧವಾರ ರಾತ್ರಿ ಏತಡ್ಕ ಕೀರಿಕ್ಕಾಡು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ವತಿಯಿಂದ ನಡೆದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
   ಜನರು ಧಾಮರ್ಿಕತೆಯತ್ತ ಒಲವು ತೋರಬೇಕು. ಪ್ರತೀ ಮನೆಯಲ್ಲೂ ಧಾಮರ್ಿಕ ಚಟುವಟಿಕೆಗಳು ನಡೆಯುತ್ತಿದ್ದರೆ ಮಾತ್ರ ಮಕ್ಕಳು ಉತ್ತಮರಾಗಲು ಸಾಧ್ಯ. ಕಠಿಣ ಪರಿಶ್ರಮವಿದ್ದರೆ ಮಾತ್ರ ಒಂದು ಸಮಾರಂಭವನ್ನು ಯಶಸ್ವಿಯಾಗಿ ನಡೆಸಬಹುದು. ಅದನ್ನು ಊರಿನ ಯುವಕರು ಸಾಧಿಸಿ ತೋರಿಸಿದ್ದಾರೆ ಎಂದರು. ನೆಮ್ಮದಿಯ ಸಮಾಜ ನಿಮರ್ಾಣದಲ್ಲಿ ಮನೆಮನಗಳಲ್ಲಿ ಧಾಮರ್ಿಕ ಪ್ರಜ್ಞೆ ಜಾಗೃತವಾಗಿದ್ದಾಗ ಸಾಧ್ಯವಿದೆ. ಅಂತರಂಗದ ಭಕ್ತಿ,ಶ್ರದ್ದೆಗಳು ಋಣಾತ್ಮಕತೆಗೆ ಅವಕಾಶವೀಯುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. 
ಸಮಿತಿಯ ಅಧ್ಯಕ್ಷ ಓಡಂಗಲ್ಲು ಶ್ಯಾಮ ಭಟ್ ಶಾಲುಹೊದೆಸಿ ಗೌರವಿಸಿದರೆ ಸಮಿತಿಯ ಸಲಹಾಧ್ಯಕ್ಷ ಅಜ್ಜಿಮೂಲೆ ಕೃಷ್ಣ ಭಟ್ ಫಲಪುಷ್ಪಗಳನ್ನಿತ್ತರು. ಅಧ್ಯಾಪಕ ಗೀರೀಶ್ ನಾಂದ್ರೋಡು ನಿರೂಪಣೆಗೈದರು. ಈ ಸಂದರ್ಭದಲ್ಲಿ ಕಟೀಲು 1ನೇ ಮೇಳದ ವ್ಯವಸ್ಥಾಪಕ ರಘುನಾಥ ಶೆಟ್ಟಿ ಬಾಯಾರು ಉಪಸ್ಥಿತರಿದ್ದರು.
ಸಮಿತಿಯ ವತಿಯಿಂದ ಬೆಳಗ್ಗೆ ಮಹಾಗಣಪತಿ ಹೋಮ, ಸಂಜೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ಕಟೀಲು ಶ್ರೀ ದುಗರ್ಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಸತ್ಯನಾರಾಯಣ ಪೂಜೆಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡು ಪುನೀತರಾದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries