HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಯೋಗಾಚಾರ್ಯ ಪುಂಡರೀಕಾಕ್ಷರ `ಅಷ್ಟಾದಶ ಯೋಗದರ್ಶನ' ಪುಸ್ತಕ ಬಿಡುಗಡೆ
    ಬದಿಯಡ್ಕ : ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ 18 ವರ್ಷಗಳಿಂದ ಯೋಗ ಶಿಕ್ಷಕರಾಗಿದ್ದ ಪುಂಡರೀಕಾಕ್ಷ ಬೆಳ್ಳೂರು ಇವರ `ಅಷ್ಟಾದಶ ಯೋಗ ದರ್ಶನ' ಎಂಬ ಪುಸ್ತಕವನ್ನು ಶಾಲಾ ವಸಂತೋತ್ಸವದ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಲೀಲಾವತಿ ಕನಕಪ್ಪಾಡಿ ಬಿಡುಗಡೆಗೊಳಿಸಿ ಮಾತನಾಡಿ, ಮಕ್ಕಳಿಗೆ ಜೀವನದಲ್ಲಿ ಶಿಸ್ತು, ಏಕಾಗ್ರತೆ ಮೊದಲಾದವುಗಳನ್ನು ಅಭಿವೃದ್ಧಿಪಡಿಸುತ್ತಾ ಸಾಮಾಜಿಕವಾಗಿಯೂ ಹಲವಾರು ಯೋಗ ಪ್ರದರ್ಶನವನ್ನು ಮಕ್ಕಳ ಮೂಲಕ ನೀಡುತ್ತಾ ಯೋಗವನ್ನು ಜಿಲ್ಲೆಯಾದ್ಯಂತ ಪಸರಿಸಿದವರು ಪುಂಡರೀಕಾಕ್ಷರು. ಅವರು ಬರೆದ ಈ ಪುಸ್ತಕ ಪ್ರತಿಯೊಂದು ಮನೆಯಲ್ಲಿಯೂ ಅಗತ್ಯವಾಗಿ ಇರಬೇಕಾದ ಪ್ರತಿಯಾಗಿದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಶಾಲೆಗಳಲ್ಲಿ ಯೋಗದ ಶಿಕ್ಷಣವನ್ನು ಪಠ್ಯಕ್ರಮಕ್ಕೆ ಅಳವಡಿಸಿದ ಮೊತ್ತಮೊದಲ ಶಾಲೆ ನಮ್ಮದಾಗಿದೆ. ಇದರ ಹೆಗ್ಗಳಿಕೆ ಸಂಪೂರ್ಣವಾಗಿ ಯೋಗಾಚಾರ್ಯರೆಂದೇ ಪ್ರಸಿದ್ಧರಾದ ಪುಂಡರೀಕಾಕ್ಷರಿಗೇ ಸಲ್ಲತಕ್ಕದ್ದು. ದೀಪ ಪೂಜನ, ಮೇಧಾ ಸರಸ್ವತೀ ಕ್ರೀಯಾ ಯೋಗ, ಪ್ರಾಣಾಯಾಮ ಇವೇ ಮೊದಲಾದ ಕಾರ್ಯಕ್ರಮಗಳನ್ನು, ಅಷ್ಟಾದಶ ಯೋಗದ ಪರಿಚಯವನ್ನು ಯೋಗಾಚಾರ್ಯರು ಸಮಾಜಕ್ಕೆ ಮಾಡಿಕೊಟ್ಟಿದ್ದಾರೆ. ಪಾಲಕರಿಗಾಗಿ ಮಕ್ಕಳ ಸವರ್ಾಂಗೀಣ ಅಭಿವೃದ್ಧಿಯ ಹಲವಾರು ಉಪಯುಕ್ತ ತರಗತಿಗಳನ್ನು ಶಾಲೆಯಲ್ಲಿ ಹಮ್ಮಿಕೊಂಡಿದ್ದರು. ವಿಶೇಷವಾಗಿ ಹತ್ತನೇ ತರಗತಿಯ ವಿದ್ಯಾಥರ್ಿಗಳಿಗೆ ಆಪ್ತ ಸಲಹೆಯನ್ನು ನೀಡುತ್ತಿದ್ದರು. ಹಲವಾರು ಸಂಸ್ಕಾರಭರಿತ ಜೀವನಕ್ಕೆ ಉಪಯುಕ್ತವಾದ ವಿಚಾರಗಳನ್ನೊಳಗೊಂಡಿರುವ, ಅನುಭವೀ ಹಿರಿಯರ ಮತ್ತು ಯೋಗ ವಿದ್ಯಾಥರ್ಿಗಳ ಲೇಖನಗಳು, ವಿವಿಧ ಆಸನಗಳ ಪರಿಚಯ ಎಂಬಿತ್ಯಾದಿಗಳನ್ನೊಳಗೊಂಡ ಆಕರ್ಷಕ ಮುಖಪುಟವನ್ನೊಳಗೊಂಡಿರುವ ಉತ್ತಮ ಪುಸ್ತಕವಿದಾಗಿದೆ ಎಂದರು. ಶಾಲಾ ವ್ಯವಸ್ಥಾಪಕ ಜಯಪ್ರಕಾಶ ಪಜಿಲ ಉಪಸ್ಥಿತರಿದ್ದು ಶುಭಹಾರೈಸಿದರು.
   ಏನಂದರು:
ನನ್ನನ್ನು ಯೋಗಾಚಾರ್ಯನನ್ನಾಗಿ ಮಾಡಿರುವುದು ಶ್ರೀ ಭಾರತೀ ವಿದ್ಯಾಪೀಠವೇ ಆಗಿದೆ. ಪೂಜ್ಯ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಆಶೀವರ್ಾದದಿಂದ ನನಗೆ ಇದು ಸಾಧ್ಯವಾಯಿತು. ಸಂಸ್ಥೆಯು ನನಗೆ ಎಲ್ಲಾ ರೀತಿಯ ಪ್ರೋತ್ಸಾಹ ಸಹಕಾರವನ್ನು ನೀಡಿರುವುದಕ್ಕೆ ನಾನು ಚಿರಋಣಿ. ವರ್ಷದಲ್ಲಿ ಎರಡು ದಿನಗಳ ಕಾಲ ಈ ಸಂಸ್ಥೆಗಾಗಿ ಸಮಯವನ್ನು ನೀಡಲು ಸಿದ್ಧನಿದ್ದೇನೆ.
     - ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries