HEALTH TIPS

No title

               ಪರೀಕ್ಷಾ ತರಬೇತಿ- ಪರೀಕ್ಷೆ-ನಿರೀಕ್ಷೆ
     ಮಧೂರು: ಹವ್ಯಕ ಮಹಾ ಮಂಡಲದ ಮುಳ್ಳೇರಿಯಾ ಮಂಡಲ ವಿದ್ಯಾಥರ್ಿ ವಾಹಿನಿ  ಸಹಕಾರದೊಂದಿಗೆ ಕಾಸರಗೋಡು ವಲಯ ವಿದ್ಯಾಥರ್ಿವಾಹಿನಿಯ ಪ್ರಾಯೋಜಕತ್ವದಲ್ಲಿ ಕೂಡ್ಲು ರಾಮದಾಸ ನಗರದ  ಶ್ರೀ ಗೋಪಾಲಕೃಷ್ಣ ಹೈಸ್ಕೂಲ್ನಲ್ಲಿ ಇತ್ತೀಚೆಗೆ ಹತ್ತನೇ ತರಗತಿಯ ವಿದ್ಯಾಥರ್ಿಗಳಿಗಾಗಿ ಪರೀಕ್ಷಾ ತರಬೇತಿ- ಪರೀಕ್ಷೆ-ನಿರೀಕ್ಷೆ ಕಾರ್ಯಕ್ರಮ ನಡೆಯಿತು.
       ಶಾಲಾ ಮುಖ್ಯೋಪಾಧ್ಯಾಯ   ಶ್ರೀಹರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಸರಗೋಡು ವಲಯ ಅಧ್ಯಕ್ಷ ರಮೇಶ ಭಟ್ ವೈ ವಿ  ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು.
 ಉಂಡೆಮನೆ ವಿಶ್ವೇಶ್ವರ ಭಟ್ ಮಾತನಾಡಿ ಈಗಲೇ ಪರೀಕ್ಷಾ ತಯಾರಿ ನಡೆಸಿದರೆ ಸಾಮಾನ್ಯ ದಿನಕ್ಕೆ ನಾಲ್ಕು ಗಂಟೆ ತಯಾರಿ ಸಾಕಾಗುತ್ತದೆ. ದಿನ ಕಳೆದಂತೆ ತಯಾರಿ ಆರಂಭಿಸಿದರೆ ಕಲಿಕೆಯ ವೇಗ ಹೆಚ್ಚಾಗಿ ವಿಷಯಗಳನ್ನು ಸರಿಯಾಗಿ ಮನನ ಮಾಡದೆ ಎಡವುವ ಸಾಧ್ಯತೆ ಹೆಚ್ಚು. ಆದ್ದರಿಂದ ಸಾಕಷ್ಟು ಮೊದಲೇ ತಯಾರಿ ಅಗತ್ಯ ಎಂದರು. ಅಧ್ಯಯನ ಮಾಡುವಾಗ ಸರಿಯಾಗಿ ಅಥರ್ೈಸಿಕೊಂಡು ಮಾಡುವುದು ಬಹು ಮುಖ್ಯ ಅಂಶ ಎಂಬುದನ್ನು ನೆನಪಿಸಿದರು. ಪರೀಕ್ಷೆಯ ತಯಾರಿ, ಪ್ರಶ್ನೆ ಪತ್ರಿಕೆಯ ಅಧ್ಯಯನ, ಉತ್ತರಿಸಬೇಕಾದ ರೀತಿ, ಸಮಯ ಪರಿಪಾಲನೇಯನ್ನು  ಮಾಡುವುದರಿಂದ ಉತ್ತಮ ಅಂಕಗಳಿಸಲು ಸಾಧ್ಯ, ಹತ್ತನೇ ತರಗತಿಯ ಅನಂತರ ಪಿ. ಯು. ಸಿ ಯಲ್ಲಿ ಯಾವ ವಿಭಾಗವನ್ನು ತೆಗೆದುಕೊಂಡರೆ ಮುಂದಿನ ಶೈಕ್ಷಣಿಕ ಜೀವನದಲ್ಲಿ ಉನ್ನತಿ ಸಾಧಿಸಬಹುದು ಎಂಬುದನ್ನು ವಿದ್ಯಾಥರ್ಿಗಳಿಗೆ ಮನದಟ್ಟು ಮಾಡಿದರು. 
  ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಭಟ್ ರನ್ನು ಗೌರವಿಸಲಾಯಿತು. ಸಹಕರಿಸಿದ ಶೀ ಗೋಪಾಲಕೃಷ್ಣ ಹೈಸ್ಕೂಲ್ ನ ಆಡಳಿತ ವರ್ಗವನ್ನು ಕಾಸರಗೋಡು ವಲಯ ವತಿಯಿಂದ ಮುಳ್ಳೇರಿಯ ಮಂಡಲ ವೃತ್ತಿ ನಿರತ ವಿಭಾಗದ ವೈ. ಕೆ ಗೋವಿಂದ ಭಟ್ ಅವರು ಸ್ಮರಣಿಕೆ ಇತ್ತು ಗೌರವಿಸಿದರು. ಹವ್ಯಕ ಮಹಾಮಂಡಲ ಉಲ್ಲೇಖ ವಿಭಾಗದ ಬಳ್ಳಮೂಲೆ ಗೋವಿಂದ ಭಟ್, ಪ್ರಾಧ್ಯಾಪಕ  ತಲ್ಪಣಾಜೆ ವೆಂಕಟ್ರಮಣ ಭಟ್, ತರಬೇತಿಗೆ ಸಹಾಯ ನೀಡಿದ ಕಂಪ್ಯೂಟರ್ ಅಧ್ಯಾಪಕ ಕೃಷ್ಣ ಉಪಸ್ಥಿತರಿದ್ದರು.
   ಕಾಸರಗೋಡು ವಲಯ ಕಾರ್ಯದಶರ್ಿ ಉಳುವಾನ ಈಶ್ವರ ಭಟ್ ವಂದಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries