HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಕೇವಲ ಟೀಟ್ ಗೆ ಕೇಂದ್ರ ಸಚಿವರ ಅಪೂರ್ವ ಸ್ಪಂಧನ-ನಿಮಿಷಗಳಲ್ಲಿ ಸಚಿವರ ಉತ್ತರ-ಪರಿಹಾರ-ಸರ್ವತ್ರ ಅಭಿನಂದನೆ
   ಕುಂಬಳೆ: ಜನಸಾಮಾನ್ಯರ ಸಮಸ್ಯೆಗಳಿಗೆ ಜನ ನಾಯಕರು ಸ್ಪಂಧಿಸಬೇಕೆಂಬುದು ನಿಯಮವಾಗಿದ್ದರೂ ನೈಜವಾಗಿ ಹಾಗಾಗುವುದು ಅಪೂರ್ವ. ಜನರ ಬೇಡಿಕೆಗಳಿಗೆ ಸ್ಥಳೀಯ ಗ್ರಾ.ಪಂ. ಪ್ರತಿನಿಧಿಯಿಂದ ತೊಡಗಿ ಮಿಕ್ಕುಳಿದವರೆಲ್ಲ ಬೇಡಿಕೆ ಈಡೇರಿಕೆಗೆ ವರ್ಷಗಟ್ಟಲೆ ಕಾಯಿಸಿ ಬೆಂುಡಾಗಿಸುವ ಮಧ್ಯೆ ಕೇಂದ್ರ ಸಚಿವರೊಬ್ಬರು ನಿಮಿಷಗಳಲ್ಲಿ ಸಮಸ್ಯೆಗೆ ಸ್ಪಂದಿಸಿದ ಪರಿ ಜನಸಾಮಾನ್ಯರ ಅಭಿನಂದನೆಗಳಿಗೆ ಕಾರಣವಾಯಿತು.
   ನಡೆದದ್ದೇನು:
   ಮಂಜೇಶ್ವರ ತಾಲೂಕು ವಕರ್ಾಡಿ ಕೋಳ್ಯೂರು ವಾರಣಾಸಿ ನಿವಾಸಿ ಅಮೇರಿಕಾದಲ್ಲಿ ನೆಲೆಸಿರುವ ಕೃಷ್ಣ ಭಟ್ ಹಾಗೂ ಕಳಿಯೂರು ಗ್ರಾಮದ ಅರಂತಾಡಿಯ ಗೋಪಾಲಕೃಷ್ಣ ಭಟ್ ಜ.  15 ರಂದು ಶಬರಿಮಲೆ ಯಾತ್ರಾಥರ್ಿಗಳಾಗಿ ಅವರು  ಮಧ್ಯಾಹ್ನ 2.50 ಕ್ಕೆ ಕುಂಬಳೆಯಲ್ಲಿ ತಿರುವನಂತಪುರ  ಎಕ್ಸ್ ಪ್ರೆಸ್ ರೈಲನ್ನು ಹತ್ತಿದ್ದರು.   ಮುಂಗಡವಾಗಿ ಸೀಟು ಕಾಯ್ದಿರಿಸಿದ ಇವರೀರ್ವರಿಗೆ 11ನೇ ಬೋಗಿಯ 15 ಹಾಗೂ 16 ಸೀಟುಗಳು ಲಭಿಸಿದ್ದವು. ಆದರೆ ಆ ಬೋಗಿಯ ಟಾಯಿಲೆಟ್ ಬಹುವಾಗಿ ದುರ್ಗಂಧವನ್ನು ಬೀರುತ್ತಿರುವ ಕಾರಣ ಬಹಳ ಹಿಂಸೆಯಾಗುತ್ತಿದೆ ಎಂದು ಈರ್ವರೂ ಫೋನ್ ಮುಖಾಂತರ ಪಕ್ಷದ ಬಿಜೆಪಿ ಕಾರ್ತಕರ್ತ ಗಣೇಶ್ ಭಟ್ ಅವರಿಗೆ  ತಿಳಿಸಿದರು. ಹಾಗಾಗಿ ಆ ಬೋಗಿಯ  ಶೌಚಾಲಯವನ್ನು ಶುಚಿಗೊಳಿಸಲು ರೈಲ್ವೇ ಇಲಾಖೆಯನ್ನು ಕೋರಲು ನಿರ್ಧರಿಸಿ ರೈಲ್ವೇ ಇಲಾಖೆಗೆ ಟ್ವೀಟ್ ಮಾಡಲಾಯಿತು. ಜೊತೆಗೆ  ಕೇಂದ್ರ ರೈಲ್ವೇ ಮಂತ್ರಿ ಪೀಯೂಷ್ ಗೋಯೆಲ್ ಗೂ. ಟ್ವೀಟ್ ಮಾಡಿದ ಸ್ವಲ್ಪ ಹೊತ್ತಿನಲ್ಲಿ ಈ ದೂರನ್ನು ರೈಲ್ವೇಯ ಪಾಲಕ್ಕಾಡ್ ಡಿವಿಜನ್ ಗೆ ವಗರ್ಾಯಿಸಲಾಗಿದೆ ಎಂಬ ಟ್ವೀಟ್ ರಿಪ್ಲೈ ಬಂತು. ನಂತರ ಕಣ್ಣೂರಿನಲ್ಲಿ ಆ ಬೋಗಿಯ ಟಾಯಿಲೆಟ್ಟನ್ನು ಶುಚಿಗೊಳಿಸಲಾಗುವುದು ಎಂಬ ರೆಪ್ಲೈ ಬಂತು. ಕಣ್ಣನೂರು ರೈಲ್ವೇ ಸ್ಟೇಶನ್ನಲ್ಲಿ ರೈಲ್ವೇ ಸಿಬ್ಬಂದಿಗಳು ಟಾಯಿಲೆಟ್ನ್ನು ಶುಚಿಗೊಳಿಸಿದರು ಹಾಗೂ ದುರ್ಗಂಧ ಸ್ವಚ್ಛ ಗೋಳಿಸಲಾಯಿತು. ಜಡಭರಿತ ಸರಕಾರೀ ವ್ಯವಸ್ಥೆಯು ಜನಸಾಮಾನ್ಯನ ಟ್ವೀಟ್ ಗೆ ಸಕಾರಾತ್ಮಕವಾಗಿ ಸ್ಪಂದಿಸಲು ತೊಡಗಿದೆಯೆಂದರೆ ಅಚ್ಛೇ ದಿನ್ ಶುರುವಾಗಿದೆ ಎಂದು  ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಭಿಪ್ರಾಯಪಟ್ಟಿದೆ. ಕೇಂದ್ರ ಸರಕಾರದ ಇಂಥ ಕಾರ್ಯಗಳೆ ಬಿಜೆಪಿಯನ್ನು ಜನತೆಯ ಆತ್ಮೀಯತೆ ಇನ್ನು ಬಲಿಷ್ಠ ಗೊಳಿಸಿದೆ ಎಂದು ಮಂಡಲ ಕಾರ್ಯದಶರ್ಿ ಆದಶರ್್ ಬಿಎಂ ಹರ್ಷ ವ್ಯಕ್ಪಡಿಸಿ ರೈಲ್ವೆ ಸಚಿವರಿಗೆ ಮಂಡಲ ಸಮಿತಿಯ ಅಭಿನಂದನೆ ಸಲ್ಲಿಸಿದದ್ದಾರೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries