ಶ್ರೀನಿವಾಸ ಮಹಾಮಂಗಳೋತ್ಸವಕ್ಕೆ ವಿದ್ಯುಕ್ತ ಚಾಲನೆ
ಪೆರ್ಲ: ಶ್ರೀ ಪುರಂದರ ದಾಸ ಆರಾಧನೋತ್ಸವ ಸಮಿತಿ ಇದರ ದಶಮಾನೋತ್ಸವ ಪ್ರಯುಕ್ತ ಶ್ರೀನಿವಾಸ ಮಹಾಮಂಗಲೋತ್ಸವ ಮತ್ತು ಶ್ರೀಯುತ ರಾಮಕೃಷ್ಣ ಕಾಟುಕುಕ್ಕೆ ಅವರ ದಾಸ ಸಂಕೀರ್ತನಾ ಯಾನದ 500ನೇ ಲೋಕಾರ್ಪಣೆಯ ಅಂಗವಾಗಿ ಇಂದು ಮುಂಜಾನೆ 7ಗಂಟೆಗೆ ಕಾಟುಕುಕ್ಕೆ ಶ್ರೀಸುಬ್ರಾಯ ದೇವರ ಸನ್ನಿಧಾನದಲ್ಲಿ ದೇವರ ಮುಂದೆ ವಿಶೇಷ ಪ್ರಾರ್ಥನೆ ನೆರವೇರಿಸಿ , ಅರ್ಚಕರಾದ ನಾರಾಯಣ ಮಯ್ಯ ದೀಪ ಪ್ರಜ್ವಲಿಸಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಲೋಕ ಕಲ್ಯಾಣಾರ್ಥವಾಗಿ ನಡೆಯುವ ಶ್ರೀನಿವಾಸ ಕಲ್ಯಾಣ ಸಜ್ಜನರ ಸೌಖ್ಯ ಸಮಾಧಾನಕ್ಕೆ ಬಲ ನೀಡಲಿದೆ. ಪುಣ್ಯ ಕಾರ್ಯದಲ್ಲಿ ಒಂದಾಗಬೇಕು ಎಂದರು.ದೀಪ ಬೆಳಕಿನ ಮತ್ತು ಜ್ಞಾನದ ಸಂಕೇತವಾಗಿದ್ದು, ನಮ್ಮೊಳಗಿನ ಅಜ್ಞಾನವನ್ನು ಕಳೆದು ಜ್ಞಾನದ ಕಣ್ಣು ತೆರೆಸಿ ಸುಜ್ಞಾನದೆಡೆಗೆ ನಡೆಯುವ ಮಹತ್ತರ ಸಂದೇಶವನ್ನು ದಾಸ ಸಂಕೀರ್ತನೆ ಸಾರುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆಡಳಿತ ಮೊಕ್ತೇಸರ ವಿಷ್ಣುಪ್ರಕಾಶ್ ಪಿಲಿಂಗಲ್ಲು, ಊರ ಪರವೂರ ಭಕ್ತಜನ , ವಿವಿಧ ಭಜನಾ ಮಂಡಳಿಗಳು, ಶ್ರೀನಿವಾಸ ಮಹಾಮಂಗಲೋತ್ಸವದ ಸ್ಥಾನೀಯ ಸಮಿತಿ ಕಾಟುಕುಕ್ಕೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಕೀರ್ತನಕಾರ ರಾಮಕೃಷ್ಣ ಕಟುಕುಕ್ಕೆ ಕಾರ್ಯಕ್ರಮ ಸಂಯೋಜಿಸಿದರು.