HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಬಳ್ಳಪದವು ಮಾಧವ ಉಪಾಧ್ಯಾಯರಿಗೆ ಗೌರವ ಡಾಕ್ಟರೇಟ್-ತಾಂತ್ರಿಕ ವಿದ್ಯಾ ತಿಲಕರಿಗೆ ಒಲಿದ ಮಹಾನ್ ಗೌರವ
   ಬದಿಯಡ್ಕ: ಕರಾವಳಿಯ ಮಹಾನ್ ತಾಂತ್ರಿಕ ವಿದ್ಯಾ ತಿಲಕ, ಬಳ್ಳಪದವು ಮಾಧವ ಉಪಾಧ್ಯಾಯರಿಗೆ ತಿರುಪತಿಯ ಸಂಸ್ಕೃತ ಮಹಾ ವಿದ್ಯಾಲಯದ ಗೌರವ ಡಾಕ್ಟರೇಟ್ ಒಲಿದು ಬಂುದಿದೆ.
  ಮಾಧವ ಉಪಾಧ್ಯಾಯರು ವೇದ ಮತ್ತು ಸಂಗೀತಗಳನ್ನು ವಿಶಿಷ್ಟವಾಗಿ ಅಭ್ಯಸಿಸಿದ ಸಾಧಕರು. ಇವರು ಋಗ್ವೇದವನ್ನು ದಾಳಿಶ್ರೀ ಭೀಮ ಭಟ್ ಗಣಪತಿಯವರಿಂದ ಅಭ್ಯಸಿಸದ್ದರು.ಬಳಿಕ ಬೆಂಗಳೂರಿನ ವಿದ್ಯಾವಾರಿಧಿ ಪಾಠಶಾಟ್ದ ಬ್ರಹ್ಮಶ್ರೀ ರಾಮಚಂದ್ರ ಶಾಸ್ತ್ರಿಯವರಿಂದ ಪೂರ್ಣ ವೇದಾಂತವನ್ನು ಕಲಿತರು.ಬೋಳೂರು ವೇದಬ್ರಹ್ಮ ರಾಮ ಭಟ್ ರವರಿಂದ  ಮೀಮಾಂಸ ಶಾಸ್ತ್ರ, ದಿವಾಕರ ನಂಬೂದಿರಿಯವರಿಂದ ಆಗಮ ಶಾಸ್ತ್ರ, ಕನರ್ಾಘಟಕ ಶಾಸ್ತ್ರೀಯ ಸಂಗೀತ ಮತ್ತು ವೀಣಾ ವಾದನವನ್ನು ವೆಂಕಟೇಶಯ್ಯ ಮತ್ತು ಶೃಂಗೇರಿ ಲಕ್ಷ್ಮಣ ಶಾಸ್ತ್ರಿಯವರಿಂದಲೂ ಅಭ್ಯಸಿಸಿರುವರು. ಜೊತೆಗೆ ಡಾ.ಜಿ.ಎನ್ ಬಿಡೆಯವರಿಂದ ಆಯುವರ್ೇಧ ಶಾಸ್ತ್ರವನ್ನು ಅಭ್ಯಸಿಸಿದ್ದರು.
  ಉಪಾಧ್ಯಾಯರು ಶೃಂಗೇರಿ ಶಾರದಾ ಪೀಠದ ಪಂಡಿತ ಪ್ರವರ ಪ್ರಶಸ್ತಿ ಪಡೆದಿದ್ದು, ಸಂಸ್ಕೃತದಲ್ಲಿ  ಹಲವು ಹತ್ತು ಕೃತಿಗಳನ್ನೂ ಸ್ವ ರಚಿಸಿರುವರು.
  ವೇದ-ವೇದಾಂತ ಆಗಮಗಳನ್ನು ಸಂಗೀಥದೊಂದಿಗೆ ಸಂಕಲಿಸಿ ವೇದಿಕ್ ತಾಂತ್ರಿಕ್  ವಿದ್ಯಾಪೀಠವನ್ನು ಬಳ್ಳಪದವಿನಲ್ಲಿ ನಿಮರ್ಿಸಿ, ವೇದ, ಸಂಗೀತಗಳ ಸಮ್ಮಿಲನದ ನೂತನ ಅವಿಷ್ಕಾರಕ್ಕೆ ಕಾರಣಕರ್ತರಾಗಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries