ಐತಿಹಾಸಿಕ ಕುಂಬಳೆ ಬೆಡಿ ಪ್ರದರ್ಶನ ಇಂದು(ಬುಧವಾರ): ಪೊಲೀಸ್ ಸರ್ಪಗಾವಲಿನಲ್ಲಿ ಸಿದ್ದತೆ
ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ವಾಷರ್ಿಕ ಜಾತ್ರೆಯ ಅಂಗವಾಗಿ ಬೆಡಿ ಮಹೋತ್ಸವ ಇಂದು ನಡೆಯಲಿದೆ. ಭಾರೀ ಸಂಖ್ಯೆಯಲ್ಲಿ ಭಕ್ತರು ತಲುಪಲಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ತೀವ್ರ ನಿಗಾ ವಹಿಸುತ್ತಿದ್ದಾರೆ.
ಕ್ಷೇತ್ರ ಪರಿಸರ, ಪೊಲೀಸ್ ಠಾಣೆ ರಸ್ತೆ, ಕುಂಬಳೆ ಪೇಟೆ, ಶಾಲೆ ಮೈದಾನ, ಬದಿಯಡ್ಕ ರಸ್ತೆ ಸಹಿತ ಹಲವೆಡೆ ಗುಪ್ತ ಕ್ಯಾಮರಾಗಳನ್ನು ಅಳವಡಿಸಿದ್ದು ಜನರ ಚಲನವಲನಗಳನ್ನು ಪೊಲೀಸರು ನಿರೀಕ್ಷಿಸುತ್ತಿದ್ದಾರೆ. ಹೆಲಿಕ್ಯಾಮರಾಗಳನ್ನು ಬಳಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಕುಂಬಳೆ ಸಿ.ಐ ಪ್ರೇಂಸದನ್, ಎಸ್.ಐ. ಜಯಶಂಕರ್, ಅಡಿಶನಲ್ ಎಸ್.ಐ.ಗಳಾದ ಶಿವದಾಸನ್, ಬಾಬು ಥೋಮಸ್ ನೇತೃತ್ವದಲ್ಲಿ ಪೊಲೀಸರು ಬಿಗುಬಂದೋಬಸ್ತು ಏರ್ಪಡಿಸಲಾಗುವುದು. ಇದಲ್ಲದೆ ಮಂಜೇಶ್ವರ, ಬದಿಯಡ್ಕ, ಕಾಸರಗೋಡು ಠಾಣೆಗಳ ಎಸ್.ಐ.ಗಳು, ಸಿ.ಐ ಕೂಡಾ ಬಂದೋಬಸ್ತು ನೇತೃತ್ವ ವಹಿಸುತ್ತಿದ್ದಾರೆ. ಎ.ಆರ್. ಕ್ಯಾಂಪ್ನ ಪೊಲೀಸರನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲಾಗುವುದು. ಸಮವಸ್ತ್ರಧಾರಿಗಳಾಗಿಯೂ, ಮಫ್ತಿಯಲ್ಲೂ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ.
ಈ ಹಿಂದಿನ ವರ್ಷಗಳಲ್ಲಿ ನಡೆದ ಕೆಲವು ಅಹಿತಕರ ಘಟನೆಗಳನ್ನು ಪರಿಗಣಿಸಿ ಈ ಬಾರಿ ಬಿಗುಭದ್ರತೆ ಏರ್ಪಡಿಸಲಾಗಿದೆ.
20 ಕ್ಕೂ ಮಿಕ್ಕಿದ ಕ್ಯಾಮರಾ ಕಣ್ಣು:
ಸ್ಥಳೀಯ ವಿವಿಧ ಕ್ಲಬ್ ಗಳ ಸಹಕಾರದೊಂದಿಗೆ ಕುಂಬಳೆ ಕಣಿಪುರ ಕ್ಷೇತ್ರ, ಮೈದಾನ, ಪೆಟೆ ಪ್ರದೇಶಗಳನ್ನು ಕೇಂದ್ರೀಕರಿಸಿ 20ಕ್ಕಿಂತಲೂ ಮಿಕ್ಕಿದ ಸಿಸಿ ಕ್ಯಾಮರಾ ಈ ಬಾರಿ ಮೊತ್ತಮೊದಲ ಬಾರಿಗೆ ಅಳವಡಿಸಲಾಗುತ್ತಿದೆ. ಜೊತೆಗೆ ಹೆಲಿ ಕ್ಯಾಮರಾವೂ ಕಾಯರ್ಾಚರಿಸಿ ಹದ್ದು ಕಣ್ಣುಗಳೊಂದಿಗೆ ಸಮಧಾನದ ಉತ್ಸವಕ್ಕೆ ನೆರವಾಗಲಿದೆ.
ಮಂಗಳವಾರ ಬೆಳಿಗ್ಗೆ 6 ರಿಂದ ಉತ್ಸವ ಶ್ರೀಭೂತಬಲಿ, 8.30 ರಿಂದ ಭಜನೆ, 10.30 ರಿಂದ ತುಲಾಭಾರ ಸೇವೆ, 12.30 ಕ್ಕೆ ಮಹಾಪೂಜೆ, ಶ್ರೀಬಲಿ, ಅನ್ನದಾನ, ಸಂಜೆ 4.30ಕ್ಕೆ ನಡೆತೆರೆಯುವುದು, 6.30ಕ್ಕೆ ವಿಶ್ವರೂಪ ದರ್ಶನ ನಡೆಯಿತು. ಬಳಿಕ ವಿಶಾಲ್ ಹೆಗಡೆ ಧಾರವಾಡ ಮತ್ತು ತಂಡದವರಿಂದ ಹಿಂದೂಸ್ಥಾನಿ ಸಂತವಾಣಿ ಹಾಗೂ ದಾಸವಾಣಿ, ರಾತ್ರಿ 8.45 ರಿಂದ ನಡುದೀಪೋತ್ಸವ, ದರ್ಶನ ಬಲಿ, ಪೂಜೆ ನಡೆಯಿತು.
ಜ.17 ರಂದು ಬುಧವಾರ ಬೆಳಿಗ್ಗೆ 6 ರಿಂದ ಉತ್ಸವ, ಶ್ರೀಭೂತಬಲಿ, 8.30 ರಿಂದ ಭಜನೆ, 10.30 ರಿಂದ ತುಲಾಭಾರ ಸೇವೆ,ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನದಾನ, ಸಂಜೆ 4ಕ್ಕೆ ನಡೆತೆರೆಯುವುದು, 5.30 ರಿಂದ ವಿದುಷಿಃ ಯೋಗೀಶ್ವರಿ ಜಯಪ್ರಕಾಶ್ ಶಿಷ್ಯಂದಿರಿಂದ ನೃತ್ಯ ರೂಪಕ, 6ಕ್ಕೆ ತಾಯಂಬಕ, 6.30ಕ್ಕೆ ದೀಪಾರಾಧನೆ, 8.30 ರಿಂದ ಉತ್ಸವ, ರಾತ್ರಿ 9.45ರ ಬಳಿಕ ವಿಶೇಷ ಬೆಡಿ ಉತ್ಸವ, ಮಧ್ಯರಾತ್ರಿಯ ಬಳಿಕ 2.45ಕ್ಕೆ ಶಯನ, ಕವಾಟ ಬಂಧನ ನಡೆಯಲಿದೆ.
ಜ.18 ರಂದು ಗುರುವಾರ ಬೆಳಿಗ್ಗೆ 6ಕ್ಕೆ ಕವಾಟೋದ್ಘಾಟನೆ, 8.30 ರಿಂದ ಭಜನೆ, 10.30 ರಿಂದ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ಅನ್ನದಾನ, ಸಂಜೆ 4.30ಕ್ಕೆ ನಡೆತೆರೆಯುವುದು, 6.30ಕ್ಕೆ ದೀಪಾರಾಧನೆ, ಸಂಜೆ 4.30 ರಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಕುಂಬಳೆ ಘಟಕದ ವತಿಯಿಂದ ವಿಶೇಷ ಯಕ್ಷಸಂವಾದ-ಸನ್ಮಾನ ನಡೆಯಲಿದೆ. ರಾತ್ರಿ 8.30 ರಿಂದ ಉತ್ಸವ ಪ್ರದಕ್ಷಿಣಾ ಬಲಿ, ಘೋಷಯಾತ್ರೆ, ಶೇಡಿಗುಮ್ಮೆಗೆ ಅವಭೃತ ಸ್ನಾನಕ್ಕೆ ತೆರಳುವುದು, 10 ರಿಂದ ಯಕ್ಷಮಿತ್ರರು ಮುಜುಂಗಾವು ತಮಡದವರಿಂದ ಯಕ್ಷಗಾನ ಬಯಲಾಟ, ರಾತ್ರಿ 12.30 ರಿಂದ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣದೊಂದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.