ಮಂಗಳೂರು- ಬಾಯಾರು-ಮುಳಿಗದ್ದೆ ಬಸ್ ಆರಂಭ
ಉಪ್ಪಳ: ಅಂತರ್ ರಾಜ್ಯ ಸಂಪರ್ಕದ ಗ್ರಾಮೀಣ ಪ್ರದೇಶವಾದ ಬಾಯಾರಿನಿಂದ ಮಂಗಳೂರಿಗೆ ಕನರ್ಾಟಕ ಸಾರಿಗೆ ಸಂಸ್ಥೆ ಬಹುಕಾಲದ ಜನಬೇಡಿಕೆಗೆ ಸ್ಪಂದಿಸಿ ಸೋಮವಾರದಿಂದ ಬಸ್ ಸಂಪರ್ಕ ಒದಗಿಸಿದೆ.ಮಂಗಳೂರಿನಿಂದ ತಲಪಾಡಿ - ಕೈಕಂಬ - ಬಾಯಾರು ದಾರಿಯಾಗಿ ಮುಳಿಗದ್ದೆಗೆ ಬಸ್ ಸಂಚಾರ ನಿಗದಿಗೊಳಿಸಲಾಗಿದೆ. ಬೆಳಿಗ್ಗೆ 6.25ಕ್ಕೆ ಮಂಗಳೂರಿನಿಂದ ಸಂಚಾರ ಆರಂಭಿಸಿ ಬಳಿಕ 8ಗಂಟೆಗೆ ಮುಳಿಗದ್ದೆಯಿಂದ ಹೊರಡಲಿದೆ.
ನಂತರ 10.10ಕ್ಕೆ ಮಂಗಳೂರಿನಿಂದ ಹೊರಟು, ಮಧ್ಯಾಹ್ನ 12ಗಂಟೆಗೆ ಮುಳಿಗದ್ದೆಯಿಂದ ಸಂಚಾರ ಆರಂಭಿಸಲಿದೆ. ಅಪರಾಹ್ನ 2.30ಕ್ಕೆ ಮಂಗಳೂರಿನಿಂದ ಹೊರಟು, ಸಂಜೆ 4.30ಕ್ಕೆ ಮುಳಿಗದ್ದೆಯಿಂದ ಹೊರಡಲಿದೆ. ಈ ರೂಟ್ನ ಹಾಗೂ ಆಸುಪಾಸಿನ ಪ್ರದೇಶಗಳ ಜನರ ಬಹುಕಾಲದ ಬೇಡಿಕೆಗೆ ಕನರ್ಾಟಕ ಸಾರಿಗೆ ಇಲಾಖೆ ಸ್ಪಂದಿಸಿದ್ದು , ಈ ಬಸ್ ಸಂಚಾರ ಆರಂಭವಾಗುವುದರೊಂದಿಗೆ ಕನಸು ನನಸಾಗಿದೆ.
ಕಳೆದ ವಾರವಷ್ಟೇ ಮಂಗಳೂರು-ಬಂದ್ಯೋಡು-ಧರ್ಮತ್ತಡ್ಕ ಬಸ್ ಸೇವೆ ಆರಂಭಗೊಂಡಿದ್ದು, ಇದೀಗ ಈ ಬಾಯಾರು ಭಾಗದ ಜನರಿಗೂ ಬಸ್ ಸೌಲಭ್ಯ ದೊರೆತದ್ದರಿಂದ ನಾಗರಿಕರು ಸಂತಸಗೊಂಡಿದ್ದಾರೆ.
ಬೇಡಿಕೆ ಬಹುಕಾಲದ್ದು: ಮೊದಲು ಬಾಯಾರು ಮಂಗಳೂರು ಬಸ್ ಸೇವೆಗೆ ಬೇಡಿಕೆ ಬಹಳ ವರ್ಷಗಳಿಂದ ಕೇಳಿಬರುತ್ತಿತ್ತು. ಈ ಮಧ್ಯೆ ಧರ್ಮತ್ತಡ್ಕ ಬಂದ್ಯೋಡು ಮೂಲಕ ಮಂಗಳೂರಿಗೆ ಎರಡು ವಾರಗಳ ಹಿಂದೆ ಬಸ್ ಆರಂಭಿಸಲಾಯಿತು. ಈ ಬಗ್ಗೆ ವಿಜಯವಾಣಿ ಓದುಗರ ಪತ್ರದಲ್ಲಿ ಶಿವಕೃಷ್ಣ ನಿಡುವಜೆ ಬೇಡಿಕೆಯ ಬಗ್ಗೆ ಎಚ್ಚರಿಸಿದ್ದರು.
ಪೈವಳಿಕೆಯಲ್ಲೂ ಸ್ವಾಗತ:
ಬಾಯಾರು ಮುಳಿಗದ್ದೆಯಿಂದ ಮಂಗಳೂರಿಗೆ ಸೋಮವಾರದಿಂದ ಆರಂಭಗೊಂಡ ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸಿಗೆ ಪೈವಳಿಕೆನಗರದಲ್ಲಿ ಊರ ನಾಗರಿಕರ ವತಿಯಿಂದ ಸ್ವಾಗತ ನೀಡಲಾಯಿತು. ಪೈವಳಿಕೆನಗರದ ವಿವಿಧ ಸಂಘ ಸಂಸ್ಥೆಗಳ, ವ್ಯಾಪಾರ ಸಂಸ್ಥೆಗಳ, ಕ್ಲಬ್ಗಳ ಪ್ರಮುಖರು ಉಪಸ್ಥಿತರಿದ್ದರು.