ಮದ್ಯದಮಲಿನಲ್ಲಿ ಜೊತೆಗಾರರಲ್ಲಿ ಘರ್ಷಣೆ-ಪುಣ್ಯ ಕ್ಷೇತ್ರ ದರ್ಶನಗೈದು ಮರಳುವಾಗ ಫುಲ್ ಲೋಡ್
ಬದಿಯಡ್ಕ: ಪ್ರಸಿದ್ದ ಕ್ಷೇತ್ರ ಶ್ರೀಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ಊರಿಗೆ ಮರಳುತ್ತಿರುವಾಗ ಪರಸ್ಪರ ಹೈಕೈ ನಡೆಸಿ ಗಾಯಗೊಂಡು ಬಳಿಕ ಪೋಲೀಸರು ಆಗಮಿಸಿ ವಶಕ್ಕೆ ತೆಗೆದ ಘಟನೆ ಭಾನುವಾರ ಅಪರಾಹ್ನ ನೀಚರ್ಾಲು ಸಮೀಪದ ಮಾನ್ಯದಲ್ಲಿ ನಡೆದಿದೆ.
ಘಟನೆಯಲ್ಲಿ ಕಾಸರಗೋಡು ಅಡ್ಕತ್ತಬೈಲು ನಿವಾಸಿಗಳಾದ ಮೋಹನ್ ಕುಮಾರ್(40) ಹಾಗೂ ರಮೇಶ್ (61) ರ ಮೇಲೆ ಪೋಲೀಸರು ದುರು ದಾಖಲಿಸಿ ಮುಚ್ಚಳಿಕೆಯ ಮೇಲೆ ಜಾಮೀನು ನೀಡಿ ಬಿಡುಗಡೆಗೊಳಿಸಿರುವರು.
ಭಾನುವಾರ ಕಾಸರಗೋಡು ಅಡ್ಕತ್ತಬೈಲಿನ ಮೋಹನ್ ಕುಮಾರ್, ರಮೇಶ್ ಸಹಿತ ಇತರ ಐವರು ಮಿತ್ರರು ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಮರಳುತ್ತಿದ್ದಾಗ ಅಪರಿಮಿತವಾಗಿ ಮದ್ಯ ಸೇವಿಸಿದ್ದು, ಹಾದಿ ತಪ್ಪಿ ಮುಳ್ಳೇರಿಯ-ಬದಿಯಡ್ಕ, ಮಾನ್ಯ ರಸ್ತೆಯಲ್ಲಿ ತೆರಳುತ್ತಿದ್ದರು. ಮಾನ್ಯ ಪರಿಸರದಲ್ಲಿ ಜೀಪಿನ ಮೂಲಕ ಹಾದುಹೋಗುತ್ತಿದ್ದಾಗ ಜೀಪಿನೊಳಗಿದ್ದ ಬೊಬ್ಬೆ ಗಲಾಟೆ ಕಂಡು ಮಾನ್ಯ ನಿವಾಸಿಗಳು ಕಿಡ್ನಾಪ್ ಆಗಿರಬಹುದೆಂದು ಆ ಜೀಪನ್ನು ತಡೆಯಲೆತ್ನಿಸಿದರೂ ಜೀಪು ನಿಲ್ಲಿಸದೆ ನೆಲ್ಲಿಕಟ್ಟೆ ರಸ್ತೆಯಲ್ಲಿ ಸಾಗುತ್ತಿರುವಂತೆ ಸ್ಥಳೀಯರು ಬದಿಯಡ್ಕ ಪೋಲೀಸರು ಮಾಹಿತಿ ನಿಡಿದರು. ತಕ್ಷಣ ಆಗಮಿಸಿದ ಪೋಲೀಸರು ಜೀಪನ್ನು ಪರಿಶೀಲಿಸಿದಾಗ ಅದು ಕುಡಿದ ಮತ್ತಿನಿಂದ ಎಮದು ತಿಳಿದುಬಂತು. ಜೀಪು ಚಾಲಕ ಸಹಿತ ಎಲ್ಲರೂ ಅಪರಿಮಿತವಾಗಿ ಮದ್ಯ ಸೇವಿಸಿದ್ದು ಕಂಡುಬಂದಿದೆ. ಕುಡಿದ ಮತ್ತಿನಲ್ಲಿ ಪರಸ್ಪರ ನಡೆಸಿದ ಗಲಾಟೆಯಲಲಿ ಇಬ್ಬರು ಗಾಯಗೊಂಡಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.