ರಾಜ್ಯಮಟ್ಟದ ಕಲೋತ್ಸವದ ಯಕ್ಷಗಾನ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನ ಮುಡಿಗೇರಿಸಿದ ನವಜೀವನ ಶಾಲಾ ಜಿಲ್ಲಾ ತಂಡ
ಬದಿಯಡ್ಕ: ಶುಕ್ರವಾರದಿಂದ ತ್ರಿಶೂರಿನಲ್ಲಿ ಆರಂಭಗೊಂಡಿರುವ ಕೇರಳ ರಾಜ್ಯ ಮಟ್ಟದ ಕಲೋತ್ಸವದ ಯಕ್ಷಗಾನ ಸ್ಪಧರ್ೆಯಲ್ಲಿ ಜಿಲ್ಲೆಯನ್ನು ಪ್ರತಿನಿಧೀಕರಿಸಿದ ಬದಿಯಡ್ಕ ಪೆರಡಾಲದ ನವಜೀವನ ಶಾಲಾ ತಂಡ ಅತ್ಯಧಿಕ ಅಂಕಗಳೊಂದಿಗೆ ಪ್ರಥಮ ಸ್ಥಾನ ದಾಖಲಿಸುವುದರೊಂದಿಗೆ ಯಕ್ಷಗಾನ ಮಣ್ಣಿನ ಋಣವನ್ನು ಉಳಿಸುವಲ್ಲಿ ಸಫಲವಾಗಿದೆ.
ಶನಿವಾರ ಪ್ರಧಾನ ವೇದಿಕೆಯಲ್ಲಿ ಯಕ್ಷಗಾನ ಸ್ಪಧರ್ೆ ಏರ್ಪಡಿಸಲಾಗಿತ್ತು. ಸ್ಪಧರ್ೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 18 ತಂಡಗಳು ಭಾಗವಹಿಸಿದ್ದವು. ಭಾರೀ ಪೈಪೋಟಿ ನೀಡಿದ ಸ್ಪಧರ್ೆಯಲ್ಲಿ ನವಜೀವನ ಶಾಲೆಯ ಚಿನ್ಮಯಕೃಷ್ಣ ಕಡಂದೇಲು ನಾಯಕನಾಗಿರುವ ತಂಡ ಪ್ರಥಮ ಬಹುಮಾನ ಪಡೆಯುವಲ್ಲಿ ಸಫಲವಾಯಿತು. ಪ್ರದರ್ಶನದಲ್ಲಿ ಭಾಗವಹಿಸಿದ ಎಂಟು ತಂಡಗಳು ಎ ಗ್ರೇಡ್ ಪಡೆದಿದ್ದು, ನವಜೀವನ ಶಾಲಾ ತಂಡ ಅತ್ಯಧಿಕ ಅಂಕಪಡೆದು ಪ್ರಥಮ ಸ್ಥಾನ ಪಡೆಯಿತು.
ಈ ತಂಡಕ್ಕೆ ದ.ಕ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ, ಪೆರ್ಲದ ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಪ್ರಾಚಾರ್ಯ ಸಬ್ಬಣಕೋಡಿ ರಾಮ ಭಟ್ ನಿದರ್ೇಶನವನ್ನು ನೀಡಿದ್ದಾರೆ.
ತಂಡದಲ್ಲಿ ವಿದ್ಯಾಥರ್ಿಗಳಾದ ಚಿನ್ಮಯಕೃಷ್ಣ ಕಡಂದೇಲು(ತಂಡದ ನಾಯಕ), ಧ್ಯಾನ್ ರೈ, ಶಶಾಂಕ್ ಶಂಕರ್, ದತ್ತೇಶ್, ವಿಕಾಸ್, ವೃಥ್ವಿಗಣಪತಿ ಭಟ್, ಸಂದೇಶ್ ಕುಮಾರ್ ವೀರ ಬಬ್ರುವಾಹನ ಪ್ರಸಂಗವನ್ನು ಪ್ರದಶರ್ಿಸಿದರು. ಸತೀಶ್ ಪುಣಿಚಿತ್ತಾಯ ಪೆರ್ಲ, ಬಾಲಕೃಷ್ಣ ಏಳ್ಕಾನ, ಅಂಬೆಮೂಲೆ ಶಿವಶಂಕರ ಭಟ್,ಶಿಕ್ಷಕಿ ಜ್ಯೋಸ್ನ್ಯಾ ಕಡಂದೇಲು ಸಹಕಾರ ನೀಡಿದರು. ಸ್ಪಧರ್ೆಯಲ್ಲಿ ನಿಣರ್ಾಯಕರಾಗಿ ಹಿರಿಯ ಯಕ್ಷಗಾನ ಕಲಾವಿದ ದಿವಾಣ ಶಿವಶಂಕರ ಭಟ್, ಹಾಸ್ಯಗಾರ ಮಹಾಬಲೇಶ್ವರ ಭಟ್ ಕೊಮ್ಮೆ ಹಾಗೂ ಪ್ರೊ.ಎ.ಶ್ರೀನಾಥ್ ಸಹಕರಿಸಿದ್ದರು.
ತೀಪರ್ುಗಾರರ ಅಭಿಮತ:
ಯಕ್ಷಗಾನ ಸ್ಪಧರ್ೆಗೆಂದು ಕಾಸರಗೊಡಿನಿಂದ ಮುಂದೆ ತಂಡಗಳು ತೆರಳುವಾಗ ತೀರ ಎಚ್ಚರಿಕೆ ವಹಿಸುವ ಅಗತ್ಯವಿದೆ. ಯಾಕೆಂದರೆ ಕೇರಳದ ಇತರೆಡೆಗಳಲ್ಲಿನ ತಂಡ ಅತ್ಯುತ್ತಮ ರೀತಿಯ ಗುಣಮಟ್ಟದ ಪ್ರದರ್ಶನ ನೀಡುವಲ್ಲಿ ಸಫಲವಾಗುತ್ತಿದೆ.ಯಕ್ಷಗಾನದ ಸ್ಪಧರ್ೆಯಲ್ಲಿ ಪ್ರದರ್ಶನ ನೀಡುವಲ್ಲಿ ರಂಗಭೂಮಿಯ ಪ್ರಜ್ಞೆಯ ಅಗತ್ಯವಿದ್ದು, ಅದರ ಕೊರತೆ ಕಾಣುತ್ತಿದೆ. ಕೇರಳದ ಮಲೆಯಾಳಿ ತಂಡಗಳು ಆಳವಾದ ಅಧ್ಯಯನ, ರಂಗ ಪರಿಚಲನವನ್ನು ಅಭ್ಯಸಿಸುತ್ತಿರುವುದು ಮುಂದೆ ಸವಾಲಾಗುವ ಸಾಧ್ಯತೆಗಳಿವೆ.
ದಿವಾಣ ಶಿವಶಂಕರ ಭಟ್.
ಹಿರಿಯ ಯಕ್ಷಗಾನ ಕಲಾವಿದ, ನಾಟ್ಯ ಗುರು.