HEALTH TIPS

ಯಾವುದೇ ಶೀರ್ಷಿಕೆಯಿಲ್ಲ

     ದಾಸ ಸಂಕೀರ್ತನೆಯ ಪ್ರಸರಿಸುವಿಕೆಗೆ ಶ್ರೀನಿವಾಸ ಮಂಗಳೋತ್ಸವ ಪೂರಕ-ಮಾಣಿಲಶ್ರೀ
   ಪೆರ್ಲ:  ಭಕ್ತಿಯ ಶಕ್ತಿಯನ್ನು ಜಗತ್ತಿಗೆ ಪಸರಿಸುವಲ್ಲಿ ದಾಸವರೇಣ್ಯರ ಕೊಡುಗೆ ಅತ್ಯಭ್ದುತ ಪವಾಡಶಾಲಿಯಾಗಿ ಬೆಳೆದುಬಂದಿದ್ದು, ಹೊಸ ತಲೆಮಾರಿನ ಈ ಕಾಲಘಟ್ಟದಲ್ಲಿ ಪರಿಚಯಿಸುವ ದಾಸ ಪ್ರಚಾರ ಅಭಿಯಾನ ಶ್ಲಾಘನೀಯ ಎಂದು ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
     ಭಾನುವಾರ ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಶ್ರೀನಿವಾಸ ಮಹಾಮಂಗಳೋತ್ಸವ ಮತ್ತು ಸಂಕೀರ್ತನೆಕಾರ ರಾಮಕೃಷ್ಣರ ದಾಸ ಸಂಕೀರ್ತನ ಯಾನದ 500 ನೇ ಸಂಭ್ರಮದ ಲೋಕಾರ್ಪಣೆಯ ಯಶಸ್ವಿಗಾಗಿ  ಪೂರ್ವ ಸಿದ್ಧತೆಯ ಮಹಾಸಭೆಯಲ್ಲಿ ಉಪಸ್ಥಿತರಿದ್ದು ಮಾರ್ಗದಶರ್ಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
   ಭಜಕರ ಸಹಕಾರದೊಂದಿಗೆ  ನಡೆಯ ಶ್ರೀನಿವಾಸ ಮಹಾಮಂಗಲೋತ್ಸ   ಜೊತೆಗೆ ದಾಸ ಸಂಕೀರ್ತನೆಯ ಐನೂರರ ಸಂಭ್ರಮದಲ್ಲಿ ಭಾಗವಹಿಸುವುದು ಕಣ್ಣಾರೆ ಕಾಣುವಂತಹ ಪುಣ್ಯ ನಮ್ಮ ಬದುಕಿನ ಯೋಗ ಭಾಗ್ಯವೆಂದೇ ಭಾವಿಸಬೇಕು. ಯುವ ಸಮೂಹಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಕಾರ್ಯತತ್ಪರರಾಗಿ ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದರು.
  ರಾಮಕೃಷ್ಣರು ದಾಸ ಸಂಕೀರ್ತನೆಯ ಮೂಲಕ ಆ ಸಾಹಿತ್ಯದ ಅಭಿರುಚಿಯ ಮೂಲಕ ಮಾನಸಿಕವಾದಂತಹ ಪ್ರಬುದ್ಧತೆ ಮತ್ತು ಭಕ್ತಿಯ ಭಾವಾನಾತ್ಮಕವಾದ  ತನ್ಮತೆಯನ್ನು ಸಾರುವಂತಹ  ಅದ್ಭುತ ಕಾರ್ಯವನ್ನು ಹಲವು ವರುಷಗಳಿಂತ ಸತತವಾಗಿ ನಡೆಸಿಕೊಮಡು ಬರುತ್ತಿರುವುದು ಶ್ಲಾಘನೀಯ. ಭಜನೆಯಿಂದ ತಾಯಂದಿರ ಮೂಲಕ  ಮನೆ ಮನಗಳಲ್ಲಿ  ಸದ್ಭಾವನೆಯನ್ನು ಪ್ರತಿಬಿಂಬಿಸಿ, ಪುರಂದರದಾಸರ ಅದೇ ರೀತಿ ದಾಸವರೇನ್ಯರ ಸಾಹಿತ್ಯದ ಮೂಲಕ ಜೀವನದ ಅತೀ ಅಮೂಲ್ಯವಾದ ಸಾತ್ವಿಕತೆಗೆ ಉತ್ಕೃಷ್ಟವಾದ ಶಕ್ತಿ ಕೊಡುವಂತಹ ಕಾರ್ಯ ಸಂಸ್ಕಾರ ಮತ್ತು ಸನಾತನ ಧರ್ಮ ಜಾಗೃತಿಯ ಕಾರ್ಯ ಕೂಡ.ಶ್ರೀನಿವಾಸ ಮಹಾಮಂಗಲೋತ್ಸವೆಂದರೆ ಅದು ಪುಣ್ಯದ ಕಾರ್ಯ ವೈವಿಧ್ಯ ಪೂರ್ಣವಾದುದು.ದಾಸ ಸಾಹಿತ್ಯದಲ್ಲಿರುವ ಸಮಾಜಿಕ ಚಿಂತನೆಯನ್ನು ತಮ್ಮ ದಾಸಸಂಕೀರ್ತನೆಯ ಬಗೆಯಲ್ಲಿ ಸಮಾಜವನ್ನು ಪರಿವತರ್ಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಶ್ರೀಗಳು ತಿಳಿಸಿದರು.
  ಸಮಾಜದಲ್ಲಿರುವ ಲೋಪದೋಷಗಳನ್ನು ತಿದ್ದುವಂತಹ ಮನುಷ್ಯ ಮನಸ್ಸುಗಳನ್ನು ದೈವತ್ವಕ್ಕೆ ಸಾಮೀಪ್ಯ ಹೊಂದುವಂತಹ ಭಜನಾ ಸಂಸ್ಕೃತಿಯನ್ನು ಪಸರಿಸುವಂತಹ ಕೈಂಕರ್ಯ ಬಹುದೊಡ್ಡ ಸಾಧನೆ.ಇಂತಹ ಉದ್ದೇಶಗಳನ್ನೆಲ್ಲ ಇಟ್ಟುಕೊಂಡು ನಡೆಯುತ್ತಿರುವಂತಹ ಈ ಶ್ರೀನಿವಾಸ ಮಂಗಲೋತ್ಸವದಂತಹ  . ಲೋಕಕಲ್ಯಾಣರ್ಥ ಕೈಗೊಂಡ ಪುಣ್ಯ ಕಾರ್ಯದಲ್ಲಿ ಎಲ್ಲಾ ಭಗವದ್ಭಕ್ತರು ಕೈಜೋಡಿಸಬೇಕಾದುದು ಅನಿವಾರ್ಯ. ಈ ಕಾರ್ಯಕ್ಕೆ ತನು-ಮನ-ಧನ ಜೊತೆ ಎಲ್ಲಾ ಸರ್ವವಿಧ ಸಹಕಾರನ್ನು ಎಲ್ಲರೂ ನೀಡಬೇಕು ಎಂದರು.
    ಕಾರ್ಯಕ್ರಮದ ಗೌರವ ಮಾರ್ಗದಶರ್ಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಕಾರ್ಯದಶರ್ಿ ಜಯರಾಮ ನೆಲ್ಲಿತ್ತಾಯ ಪೂರ್ವಭಾವಿ ಸಮಿತಿಗಳ ಅವಲೋಕನ ಮಾಡಿದರು.
   ಶ್ರೀ ಮಹಾಲಂಗೇಶ್ವರ ಕ್ಷೇತ್ರ ಪುತ್ತೂರು ಇದರ ಮಾಜಿ ಮೊಕ್ತೇಸರ ನನ್ಯ ಅಚ್ಯುತ ಮೂಡಿತ್ತಾಯ ಮತನಾಡಿ 5 ದಿನಗಳಲ್ಲಿ ನಡೆಯುವ ಈ ಶ್ರೀಮಹಾಮಂಗಲೋತ್ಸವ ಒಂದು ಇತಿಹಾಸ ನಿಮರ್ಿಸುವಂತಹ ಕಾರ್ಯಕ್ರಮ. ನಾನು ಎನ್ನುವಂತಹ ಅಹಂಭಾವವಿಲ್ಲದೆ ನಾವು ಎನ್ನುವ ಭಾವಕ್ಕೆ ಭಗವತ್ ಸಂಕಲ್ಪ ಪ್ರೇರಣೆ ನೀಡುತ್ತದೆ. ಇಂತಹ  ಕಾರ್ಯಕ್ರಮದಲ್ಲಿ ಎಲ್ಲ ಸಮಿತಿಗಳ ಸದಸ್ಯರು ಸಮಯ ಪ್ರಜ್ಞೆ -ಶಿಸ್ತು ಸ್ವಚ್ಚತೆ ಆದ್ಯತೆಯನ್ನು ಕೊಟ್ಟು ಅರ್ಪಣಾ ಮನೋಭಾವ ಮತ್ತು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳೋಣ ಎಂದು ಕರೆಯಿತ್ತರು.
  ಬ್ರಹ್ಮ ಶ್ರೀರವೀಶ ತಂತ್ರಿ ಮಾತನಾಡಿ "ಭಜನಾ ಸಂಸ್ಕಾರವನ್ನು ಮನೆ ಮನಗಳಲ್ಲಿ ವ್ಯಾಪಿಸುವುದರ ಜೊತೆಗೆ ನಮ್ಮ ಆಚಾರಗಳನ್ನು ನಾಳಿನ ಪೀಳಿಗೆಗೆ ಹಸ್ತಾಂತರಿಸುವಂತಹ ರಾಮಕೃಷ್ಣರ ಸೇವೆ ಅದು ಸ್ತುತ್ಯರ್ಹ . ನಾಡಿದ್ದು ನಡೆಯುವ ಶ್ರೀನಿವಾಸ ಮಹಾಮಂಗಳೋತ್ಸವ ಕಾರ್ಯ ಲೋಕಕಲ್ಯಾಣಾರ್ತವಾದುದು.ಹಾದಿ ತಪ್ಪುತ್ತಿರುವ ನಮ್ಮ ಈಗಿನ ಸಮಾಜವನ್ನು ಸರಿದಾರಿಗೆ ತರುವಂತಹ ಇಂಥ ಧರ್ಮ ಕಾರ್ಯಗಳಲ್ಲಿ ಕೈಜೋಡಿಸಬೇಕಾದುದು ಪ್ರತಿಯೊಬ್ಬರ ಕರ್ತವ್ಯವೆಂದು ನುಡಿದರು.ಕೆಡಂಜಿ ಶ್ರೀಮಹಾವಿಷ್ಣು ಕ್ಷೇತ್ರದ ಅಧ್ಯಕ್ಷರಾದ ವಸಂತ ಪೈ ಮಾತನಾಡಿ  ಭಕ್ತಿಯಿದ್ದರೆ ಸಾಲದು ಅದರಲ್ಲಿ ಶ್ರಧ್ಧಯೂ ಬೇಕು.  ಉತ್ತಮ ವಿಚಾರ , ಉತ್ತಮ ವಿಚಾರವಿದ್ದರೆ ಸಾಕೆ ಅದರ ಆಚಾರ, ಅ ಆಚಾರದ ಜೊತೆ  ಪ್ರಚಾರವಾಗಬೇಕು ಆಗ ಸದಾಚಾರ ನಮ್ಮಲ್ಲಿ ಜಾಗೃತಗೊಳ್ಳುತ್ತದೆ. ಅದೇ ರೀತಿ ವಿದ್ಯೆ ಬುದ್ಧಿ ಸಿದ್ಧಿ ಪ್ರಸಿಧ್ಧಿ ಕೂಡ ಬೇಕಾಗತ್ತದೆ.  ವಿದ್ಯೆಯ ಜೊತೆಗೆ   ಬುದ್ಧಿ  ಬೇಕಾಗುತ್ತದೆ. ಬುದ್ದಿಯ ಜೊತೆಗೆ ಸಿದ್ಧಿ ಬೇಕಾಗುತ್ತದೆ. ಸಿದ್ಧಿಯಿಂದ ಪ್ರಸಿಧ್ಧಿ ಲಭ್ಯವಾಗುತ್ತದೆ. ಹಾಗಾಗಿ  ಲೋಕಕಲ್ಯಾಣಾರ್ತ ನಡೆಯುವ ಶ್ರೀನಿವಾಸ ಮಹಾಮಂಗಲೋತ್ಸವ ಕಾರ್ಯದಲ್ಲಿ ನಮ್ಮಿಂದಾಗುವ ರೀತಿಯಲ್ಲಿ ಅದು ವಸ್ತು ರೂಪವಾದರೂ , ಧನ ರೂಪವಾದರೂ ಅಥವಾ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಕೂಡಾ ಪುಣ್ಯ ಪ್ರಾಪ್ತಿಯಾಗುವಂತದ್ದು. ದೇವರ ಕಾರ್ಯದಲ್ಲಿ ಭಾಗವಹಿಸುವುದೆಂದರೆ ಅದರಷ್ಟು ಭಾಗ್ಯ ಬೇರಾವುದು ಇಲ್ಲ ಹಾಗಾಗಿ ಇದು ನಮ್ಮೂರಿನ ಭಾಗ್ಯ ಅದನ್ನು ಯಶಸ್ವಿಗೊಳಿಸಿ ಬೆಳಗಬೇಕಾದುದು ಪ್ರತಿಯೊಬ್ಬರ ಕರ್ತವ್ಯವೆಂಬಂತೆ ಪರಿಗಣಿಸಬೇಕೆಂದು ನುಡಿದರು.
   ಕಾಸರಗೋಡು ವಲಯ  ಮಹಾದೇವಿ ಮಹಿಳಾ ಭಜನಾ ಸಂಘದ ಅಧ್ಯಕ್ಷ ಉಷಾ ಶಿವರಾಮ್ ಭಟ್ ಮತ್ತು ದುಗರ್ಾಶ್ರೀ ಭಜನಾ ಮಂಡಳಿ ಪುತ್ತೂರು , ಬಲ್ನಾಡು ಇದರ ಅಧ್ಯಕ್ಷೆ ಪರಮೇಶ್ವರಿ ತಮ್ಮ ವಲಯಗಳ ಪೂರ್ವಸಿದ್ಧತೆಗಳ ಬಗ್ಗೆ ಮಾತನಾಡಿದರು.
   ಕಿರಣ್ ಕುಮಾರ್  ರೈ ಕಬ್ಬಿನ ಹಿತ್ತಿಲು, ಬಲ್ನಾಡು, ಪುತ್ತೂರು, ಸುಬ್ರಾಯ ದೇವಸ್ಥಾನ ಕಾಟುಕುಕ್ಕೆ ಇದರ ಆಡಳಿತ ಮೊಕ್ತೇಸರರಾದ ವಿಷ್ಣು ಪ್ರಕಾಶ್ ಪಿಲಿಂಗಲ್ಲು, ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶಿವರಾಮ ಭಟ್ ಹಳೆಮನೆ , ಅರಿಕ್ಕಾಡಿ ಕೋಟೆ ಶ್ರೀವೀರಾಂಜನೇಯ ದೇವಸ್ಥಾನದ ಅಧ್ಯಕ್ಷ ಉಮೇಶ್ ರಾವ್, ಸ್ಥಾನೀಯ ಸಮಿತಿಯ ಪ್ರಧಾನ ಕಾರ್ಯದಶರ್ಿಗಳಾದ ಕಿಶೋರ್ ಪೆರ್ಲ, ರಾಮಚಂದ್ರ ಮಣಿಯಾಣಿ   ಉಪಸ್ಥಿತರಿದ್ದರು.ಮಿತ್ತೂರು ಪುರುಷೋತ್ತ ಭಟ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು. ಶ್ರೀ ಪುರಂದರದಾಸರ ಆರಾಧನೋತ್ಸವ ಸಮಿತಿ  ಅಧ್ಯಕ್ಷರು , ಪ್ರಧಾನ ಸಂಚಾಲಕರಾದ ರಾಮಕೃಷ್ಣ ಕಾಟುಕುಕ್ಕೆ ಸ್ವಾಗತಿಸಿ, ಗೋವಿಂದ ಭಟ್ ಖಂಡೇರಿ ವಂದಿಸಿದರು. ಮಹಾದೇವಿ ಭಜನಾ ಮಂಡಳಿ ಕಳತ್ತೂರು ಇದರ ಸದಸ್ಯೆಯರು ಪ್ರಾರ್ಥನೆ ಹಾಡಿದರು.ಹಿರಿಯ ಪತ್ರಕರ್ತರಾದ ಎಂ.ನಾ ಚಂಬಲ್ತಿಮಾರ್ ಕಾರ್ಯಕ್ರಮ  ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries