HEALTH TIPS

ಯಾವುದೇ ಶೀರ್ಷಿಕೆಯಿಲ್ಲ

      ಉಪ್ಪು ನೀರು ಸೇರಿ ಕೃಷಿ ನಾಶ
  ಕುಂಬಳೆ: ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಭತ್ತದ ಗದ್ದೆಗಳಿಗೆ ಉಪ್ಪು ನೀರು ಸೇರಿ ವ್ಯಾಪಕ ನಾಶನಷ್ಟ ಸಂಭವಿಸಿರುವುದು ಇದೀಗ ಭಾರೀ ಆತಂಕಕ್ಕೆ ಕಾರಣವಾಗಿದೆ.
   ಕುಂಬಳೆ ಗ್ರಾ.ಪಂ. ವ್ಯಾಪ್ತಿಯ ಪೇರಾಲು ಪರಿಸರದ ಎಕ್ರೆಗಟ್ಟಲೆ ಕಯ್ಲಿಗೆ ಸಿದ್ದವಾದ ಭತ್ತದ ಗದ್ದೆಗಳಿಗೆ ಉಪ್ಪು ನೀರು ಬೆರೆತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತರು ಹತಾಶರಾಗಿದ್ದಾರೆ.
  ಬೇಸಿಗೆ ಕಾಲ ಆರಂಭವಾಗುತ್ತಿರುವಂತೆ ಸಮದ್ರದಿಂದ ಅತಿ ಸನಿಹದಲ್ಲಿರುವ ಮೊಗ್ರಾಲ್ ಹೊಳೆಗೆ ಸಮುದ್ರ ನೀರು ಸೇರಿಕೊಳ್ಳುತ್ತಿದ್ದು, ಇದು ವ್ಯಾಪಕ ಲವಣಾಂಶಯುಕ್ತವಾಗಿರುವುದರಿಂದ ಆ ನೀರು ಹರಿದು ಭತ್ತದ ಪೈರುಗಳು ಕರುಟತೊಡಗಿದೆ.
  ಉಪ್ಪುನೀರು ಕೃಷಿ ಪ್ರದೇಶಕ್ಕೆ ನುಗ್ಗದಂತೆ ಪ್ರತಿವರ್ಷ ಪೇರಾಲು ಕೋಟಕುಂಜೆ ಅಣೆಕಟ್ಟಿನ ಇಬ್ಬದಿಗಳಲ್ಲೂ ಹಲಿಗೆ ಹಾಸಿ ಮಣ್ಣು ತುಂಬಿಸಿ ಅಣೆಕಟ್ಟು ನಿಮರ್ಿಸಲಾಗುತ್ತದೆ. ಸರಕಾರದ ನೆರವಿನೊಂದಿಗೆ ನಡೆಸಲಾಗುವ ಇಂತಹ ಅಣೆಕಟ್ಟು ನಿಮರ್ಾಣಕ್ಕೆ 5 ಲಕ್ಷ ರೂ.ಗಳನ್ನು ಈ ವರ್ಷವೂ ಮೀಸಲಿರಿಸಲಾಗಿತ್ತು. ಈ ಯೋಜನೆ ಜಾರಿಗೊಳಿಸುವ ನೀರಾವರಿ ಇಲಾಖೆ(ಮೈನರ್ ಇರಿಗೇಶನ್) ಈ ಅಣೆಕಟ್ಟು ನಿಮರ್ಾಣವನ್ನು ಗುತ್ತಿಗೆದಾರನಿಗೆ ಜವಾಬ್ದಾರಿ ನೀಡಿತ್ತು. ಗುತ್ತಿಗೆದಾರನು ಅಣೆಕಟ್ಟಿನ ಒಂದು ಭಾಗಕ್ಕೆ ಹಲಿಗೆ ಹಾಸಿ, ಮಣ್ಣು ತುಂಬಿಸಿದರೆ ಮತ್ತೊಂದು ಭಾಗಕ್ಕೆ ಗೋಣಿಚೀಲದಲ್ಲಿ ಮಣ್ಣು ತುಂಬಿಸಿ ಪೇರಿಸಿ ಇರಿಸಿದ್ದರು. ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಗುತ್ತಿಗೆದಾರನಿಗೆ 5 ಲಕ್ಷ ರೂ.ಗಳ ಯೋಜನಾ ಮೊತ್ತ ಹಸ್ತಾಂತರಿಸಿದ್ದರು. ಆದರೆ ತೋರಿಕೆಯ ಇಂತಹ ಕಾಮಗಾರಿಯಿಂದ ಪ್ರಯೋಜನವಾಗದೆ ಉಪ್ಪು ನೀರು ಗದ್ದೆಗಳೆಡೆಗೆ ನುಗ್ಗಿ ಬರುವಂತ ಸ್ಥಿತಿ ನಿಮರ್ಾಣವಾಯಿತು. ಪೇರಾಲು, ಪೇರಾಲು-ಕಣ್ಣೂರು, ಕೂಟಕುಂಜ, ಕಂಬಾರ್, ದೇಶಮಂಗಲ ಪರಿಸರದ ಭತ್ತದ ಗದ್ದೆಗೆ ಉಪ್ಪುನೀರು ಸೇರಿಕೊಂಡು ಸಾವಿರಾರು ಎಕ್ರೆ ಭತ್ತದ ಗದ್ದೆ ನಾಶವಾಗಲು ಕಾರಣವಾಯಿತು.
   ಕುಂಬಳೆ ಪೆಟೆಯ ತರಕಾರಿ ಮಾರುಕಟ್ಟೆಗೆ ಇದೇ ಪರಿಸರದ ತರಕಾರಿಗಳು ಬರುತ್ತವೆ.ಈ ಬಾರಿ ತರಕಾರಿ ಬೇಸಾಯವೂ ನಾಶಗೊಂಡಿರುವುದರಿಂದ ಮಾರುಕಟ್ಟೆಯಲ್ಲಿ ವಸ್ತುಗಳ ಅಲಭ್ಯತೆ ಕಂಡುಬಂದಿದೆ. ತರಕಾರಿಯೂ ನಾಶಗೊಂಡಿರುವುದರಿಂದ ಬಯಲು ಬಂಜರುಭೂಮಿಯಾದಂತೆ ಕಂಡುಬರುತ್ತಿದೆ. ಅಸಹಾಯಕ ಕೃಷಿಕರು ಅಣೆಕಟ್ಟಿನಿಂದಾದ ಅವ್ಯವಸ್ಥೆಗೆ ಮರುಕಪಡುತ್ತಿದ್ದು, ಈ ವರ್ಷದ ಜೀವನಾದಾಯದ ತೀವ್ರ ಹಿನ್ನಡೆಯಿಂದ ದಿಕ್ಕುತೋಚದೆ ಪರಿತಪಿಸುತ್ತಿರುವುದು ಕಂಡುಬಂದಿದೆ.
    ಬಂಬ್ರಾಣ ಪರಿಸರದ ಪ್ರದೇಶದಲ್ಲೂ ಸೀರೆಹೊಳೆಯಿಂದ ಇದೇ ರೀತಿಯಲ್ಲಿ ಉಪ್ಪುನೀರು ಹರಿದು ವ್ಯಾಪಕ ನಾಶ ನಡೆದಿದ್ದು, ಪೇರಾಲು ಪರಿಸರದ ಸ್ಥಿತಿ ಇರುವ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
   ಏನಂತಾರೆ ಕೇಳಿ:
  ಕರಾವಳಿ ಪರಿಸರದ ಗದ್ದೆಗಳಲ್ಲಿ ಇಂತಹ ಸಮಸ್ಯೆಗಳು ಎದುರಾಗುತ್ತಿದ್ದು, ಈ ಬಗ್ಗೆ ನೀರಾವರಿ ಇಲಾಖೆಯ ಅಧಿಕೃತರಿರಿಗೆ ಹಲವು ಬಾರಿ ಮಾಹಿತಿ ನೀಡಲಾಗಿದೆ. ಜೊತೆಗೆ ಮಂಜೇಶ್ವರ ಶಾಸಕರ ನೇತೃತ್ವದಲ್ಲಿ ಮಂಜೇಶ್ವರ ತಾಲೂಕಿನ ಹಲವು ಗ್ರಾ.ಪಂ. ಅಧ್ಯಕ್ಷರುಗಳು ಈಗಾಗಲೇ ಸಭೆ ನಡೆಸಿ ಈ ಬಗ್ಗೆಯೂ ನೀರಾವರಿ ಇಲಾಖೆಗೆ ಮನವಿ ನಿಡಲಾಗಿದ್ದು, ನೀರಾವರಿ ಇಲಾಖೆಯ ಅಧಿಕೃತರು ಸ್ಥಳ ಪರಿಶೀಲನೆ ಕೂಡಾ ಈವರೆಗೆ ಮಾಡದೆ ನಿರ್ಲಕ್ಷ್ಯವಹಿಸಿರುವರು. ಆದ್ದರಿಂದ ಈ ಬಗ್ಗೆ ಕಾನೂನು ಹೋರಾಟಕ್ಕೆ ಶೀಘ್ರ ಚಿಂತಿಸಿ ಅನುಷ್ಠಾನಗೊಳಿಸಲಾಗುವುದು.
            ಪುಂಡರೀಕಾಕ್ಷ ಕೆ.ಎಲ್.
         ಅಧ್ಯಕ್ಷರು, ಕುಂಬಳೆ ಗ್ರಾಮ ಪಂಚಾಯತು. 
       

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries