ಪೆಟ್ರೋಲಿಯಂ ಉತ್ಪನ್ನಗಳಿಗೆ ಜಿಎಸ್ಟಿ
ರಾಜ್ಯ ಸರಕಾರ ಸಿದ್ಧವಾಗಬೇಕು : ಕೆ.ಸುರೇಂದ್ರನ್
ಕಾಸರಗೋಡು: ಬಿಜೆಪಿ ಆಡಳಿತ ನಡೆಸುವ ರಾಜ್ಯಗಳು ಪೆಟ್ರೋಲಿಯಂ ಉತ್ಪನ್ನಗಳಿಗೆ ಜಿಎಸ್ಟಿ ಏರ್ಪಡಿಸಲು ಸಿದ್ಧರಾಗುವಾಗ ಕೇರಳ ಮಾತ್ರವೇ ಅದನ್ನು ಎದುರಿಸುತ್ತಿರುವುದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದಶರ್ಿ ಕೆ.ಸುರೇಂದ್ರನ್ ಹೇಳಿದ್ದಾರೆ.
ಬಿಜೆಪಿ ಜಿಲ್ಲಾ ನೇತೃತ್ವ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪೆಟ್ರೋಲಿಯಂ ಉತ್ಪನ್ನಗಳಿಗೆ ಜಿಎಸ್ಟಿ ಏರ್ಪಡಿಸಿದರೆ 40 ರೂ.ಗೆ ಪೆಟ್ರೋಲ್ ರಾಜ್ಯದಲ್ಲಿ ಲಭಿಸಬಹುದು. ರಾಜ್ಯ ಸರಕಾರ ಪೆಟ್ರೋಲಿಯಂ ಉತ್ಪನ್ನಗಳಿಂದ ಲಭಿಸುವ ತೆರಿಗೆ ಆದಾಯ ಬೇಡವೆನ್ನದೆ ಜನರನ್ನು ಕೊಳ್ಳೆ ಹೊಡೆಯುತ್ತಿದೆ. ರಾಜ್ಯ ಸರಕಾರವು ಬೆಂಬಲ ನೀಡಿದರೆ ಮಾತ್ರವೇ ಪೆಟ್ರೋಲ್ ಸೇರಿದಂತೆ ಇಂಧನಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಸಾಧ್ಯವಿದೆ. ಇದಕ್ಕೆ ಸಿದ್ಧರಾಗದೆ ಕೇಂದ್ರ ಸರಕಾರವನ್ನು ದೂರಿ, ಕೇಂದ್ರದ ಯೋಜನೆಗಳನ್ನು ರಾಜ್ಯ ಸರಕಾರ ಬುಡಮೇಲುಗೊಳಿಸುತ್ತಿದೆ ಎಂದು ಆರೋಪಿಸಿದರು.
ಭಾರತವನ್ನು ಸಾಮ್ರಾಜ್ಯಶಾಹಿ ಎಂದು ಹೇಳಿ ಚೀನಾ ಪರವಾದ ಹೇಳಿಕೆಯನ್ನು ನೀಡುತ್ತಿರುವ ಸಿಪಿಎಂ ರಾಜ್ಯ ಕಾರ್ಯದಶರ್ಿ ಕೊಡಿಯೇರಿ ಬಾಲಕೃಷ್ಣನ್ ಭಾರತದ ಪೌರತ್ವ ಬೇಡವೆಂದು ತೀಮರ್ಾನಿಸಲು ಸಿದ್ಧರಾಗಬೇಕೆಂದು ಸುರೇಂದ್ರನ್ ಆಗ್ರಹಿಸಿದರು.
ಜಿಲ್ಲಾ ಅಧ್ಯಕ್ಷ ಕೆ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಉಪಾಧ್ಯಕ್ಷೆ ಪ್ರಮೀಳಾ ಸಿ.ನಾಕ್, ರಾಜ್ಯ ಕಾರ್ಯದಶರ್ಿ ವಿ.ಕೆ.ಸಜೀವನ್, ಉತ್ತರ ವಲಯ ರಾಜ್ಯ ಕಾರ್ಯದಶರ್ಿ ಸುರೇಶ್, ರಾಷ್ಟ್ರೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಎ.ವೇಲಾಯುಧನ್, ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು ಮಾತನಾಡಿದರು.