HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ರಾಷ್ಟ್ರೀಯ ಬೊಂಬೆಯಾಟ ಉತ್ಸವದಲ್ಲಿ ತೆಂಕುತಿಟ್ಟು ಯಕ್ಷಗಾನ ಬೊಂಬೆಯಾಟ
             ಕೊಚ್ಚಿಯಲ್ಲಿ ಅಭಿಮಾನಿಗಳನ್ನು ಹೆಚ್ಚಿಸಿದ ಕಾಸರಗೋಡಿನ ಬೊಂಬೆಗಳು
   ಕಾಸರಗೋಡು:  ಅರಬೀ ಸಮುದ್ರದ ರಾಣಿಯೆಂದೇ ಖ್ಯಾತಿವೆತ್ತ ಕೇರಳದ ಸಾಂಸ್ಕೃತಿಕ ನಗರಿ ಕೊಚ್ಚಿಯಲ್ಲಿ ತೆಂಕುತಿಟ್ಟು ಯಕ್ಷಗಾನ ಬೊಂಬೆಯಾಟ ಜನಮೆಚ್ಚುಗೆ ಗಳಿಸಿದೆ.
  ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಸಂಗೀತ ನಾಟಕ ಅಕಾಡೆಮಿ ವತಿಯಿಂದ ನಡೆದ `ಪುತುಲ್ ಯಾತ್ರಾ-ಕೇರಳ' ರಾಷ್ಟ್ರೀಯ ಬೊಂಬೆಯಾಟ ಉತ್ಸವದಲ್ಲಿ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ ಪ್ರಸ್ತುತಪಡಿಸಿದ `ನರಕಾಸುರ ವಧೆ' ಪ್ರಸಂಗದ ಬೊಂಬೆಯಾಟ ನೆರೆದ ಬೃಹತ್ ಜನಸ್ತೋಮವನ್ನು ರಂಜಿಸಿತಲ್ಲದೆ ಯಕ್ಷಗಾನದ ಅಭಿಮಾನಿಗಳನ್ನು ಹೆಚ್ಚಿಸಿತು.
ಕೇರಳದಲ್ಲಿ ಪ್ರಥಮ ಬಾರಿ ನಡೆದ ಈ ಉತ್ಸವಕ್ಕೆ ಕೇರಳ ಫೈನ್ ಆಟ್ಸರ್್ ಸೊಸೈಟಿ ಪೂರ್ಣ ಸಹಕಾರ ನೀಡಿತ್ತು. ಕೆ.ವಿ.ರಮೇಶ ನಿದರ್ೇಶಕರಾಗಿ ಮತ್ತು ಪ್ರಧಾನ ಸೂತ್ರಧಾರರಾಗಿರುವ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದಲ್ಲಿ ಸೂತ್ರಧಾರರಾಗಿ ಡಾ.ಓಂಪ್ರಕಾಶ್ ಕೆ.ವಿ, ಶ್ರೀವತ್ಸ ಕೆ.ವಿ, ತಿರುಮಲೇಶ್ ಕೆ.ವಿ, ಸುದರ್ಶನ ಕೆ.ವಿ, ಗೀತಾ ಕೆ, ಅನೀಶ್ ಪಿ, ದೀಕ್ಷಾ ಸಹಕರಿಸಿದರು.  ಕೇರಳ, ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಲ, ಗುಜರಾತ್, ತ್ರಿಪುರ, ರಾಜಸ್ಥಾನ, ಮಹಾರಾಷ್ಟ್ರ ಮೊದಲಾದೆಡೆಗಳ ಬೊಂಬೆಯಾಟ ತಂಡಗಳು ರಾಷ್ಟ್ರೀಯ ಬೊಂಬೆಯಾಟ ಉತ್ಸವದಲ್ಲಿ ಪ್ರದರ್ಶನ ನೀಡಿದ್ದುವು.
  ಕೇರಳ ಫೈನ್ ಆಟ್ಸರ್್ ಸೊಸೈಟಿ ಅಧ್ಯಕ್ಷ ಸುಕುಮಾರನ್ ಅವರು ಕಲಾವಿದರನ್ನು ಗೌರವಿಸಿದರು. ಸೊಸೈಟಿಯ ರಾಜ್ಯ ಸಂಘಟಕ ಹಾಗೂ ಅಂತಾರಾಷ್ಟ್ರೀಯ ಮಟ್ಟದ ತೊಗಲು ಬೊಂಬೆಯಾಟ ಕಲಾವಿದ ರಾಮಚಂದ್ರ ಪುಲವರ್, ರಾಜ್ಯ ಸಂಯೋಜಕ ರಾಜೀವ್ ಪುಲವರ್, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಬೊಂಬೆಯಾಟ ಕಲಾ ವಿಭಾಗದ ಸಂಯೋಜಕಿ ಶುಭಾ ಸಕ್ಸೇನಾ ಅಭಿನಂದಿಸಿದರು. ಹಲವಾರು ಅಂತಾರಾಷ್ಟ್ರೀಯ ಉತ್ಸವಗಳಲ್ಲಿ ಪಾಲ್ಗೊಂಡು ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದುಕೊಂಡಿರುವ ಶ್ರೀಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘವು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ರಾಷ್ಟ್ರೀಯ ಬೊಂಬೆಯಾಟ ಉತ್ಸವದಲ್ಲಿ ಕಳೆದ ಐದಾರು ವರ್ಷಗಳಿಂದ ಭಾಗವಹಿಸುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries