ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದಿಂದ ಧರಣಿ
ಕಾಸರಗೋಡು: ಕೇರಳ ಸರಕಾರದ ಶಿಕ್ಷಣ ಇಲಾಖೆಯು ಕಳೆದ ಎರಡು ವರ್ಷಗಳಿಂದ ಕಾಸರಗೋಡಿನ ಕನ್ನಡ ಜಿಲ್ಲಾ ಶಿಕ್ಷಣಾಧಿಕಾರಿಯನ್ನು ನೇಮಕ ಮಾಡದೆ ಕನ್ನಡಿಗರ ಮನವಿಗಳಿಗೆ ಸ್ಪಂದಿಸದೆ ಅವಗಣನೆ ಮಾಡುತ್ತಿರುವುದನ್ನು ಪ್ರತಿಭಟಿಸಿ ಜ.23 ರಂದು ಮಂಗಳವಾರ ಬೆಳಗ್ಗೆ 10 ರಿಂದ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಮಧ್ಯಾಹ್ನದ ವರೆಗೆ ಧರಣಿ ಮುಷ್ಕರವನ್ನು ನಡೆಸಲಿದೆ. ಎಲ್ಲಾ ಕನ್ನಡ ಅಧ್ಯಾಪಕರು ಮತ್ತು ಕನ್ನಡಾಭಿಮಾನಿಗಳು ಧರಣಿ ಮುಷ್ಕರದಲ್ಲಿ ಭಾಗವಹಿಸಿ ಕನ್ನಡಿಗರ ಪ್ರತಿಭಟನೆಯನ್ನು ಸರಕಾರಕ್ಕೆ ತಿಳಿಸಬೇಕಾಗಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ವಿನಂತಿಸಿದೆ.