HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ನಾಯ್ಕಾಪಿನಲ್ಲಿ ಭಜನಾ ತರಬೇತಿ ಆರಂಭ- ಹೊಸ ತಲೆಮಾರಿನ ಮಕ್ಕಳಿಗೆ ಧಾಮರ್ಿಕ ಪ್ರಜ್ಞೆ, ಸಂಸ್ಕೃತಿ ಬಗೆಗಿನ ಅರಿವು ಬೆಳೆದರೆ ಸಂಸ್ಕಾರಯುತ ಭವಿಷ್ಯ ಸಾಧ್ಯ-ಹರಿದಾಸ ಜಯಾನಂದಕುಮಾರ್ ಹೊಸದುರ್ಗ
    ಕುಂಬಳೆ: ಆಧುನಿಕ ಜಗತ್ತಿನ ಮನುಷ್ಯ ಜೀವನ ಕ್ರಮದಲ್ಲಿ ಬದಲಾವಣೆಯಾಗಿದೆಯೇ ಹೊರತು ಸಮಯ, ಅವಕಾಶಗಳಲ್ಲಿ ಬದಲಾವಣೆಯಾಗಿಲ್ಲ. ಆಧ್ಯಾತ್ಮಿಕತೆಯನ್ನು ಬಿಟ್ಟು ಬದುಕು ಕಟ್ಟಹೊರಟಾಗ ಸಮಸ್ಯೆಗಳು ಹುಟ್ಟಿಕೊಂಡು ಅಶಾಂತಿ, ಅತೃಪ್ತಿಗಳಿಗೆ ಕರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ತಲೆಮಾರನ್ನು ಸಂಸ್ಕಾರ-ಸಂಸ್ಕೃತಿಯೊಂದಿಗೆ ಬೆಸೆವಂತೆ ಬೆಳೆಸಿದಾಗ ಯಶಸ್ಸು ಪ್ರಾಪ್ತಿಯಾಗುತ್ತದೆ ಎಂದು ಖ್ಯಾದ ದಾಸ ಸಂಕೀರ್ತನೆಕಾರ, ಹರಿದಾಸ ಜಯಾನಂದಕುಮಾರ್ ಹೊಸದುರ್ಗ ಅಭಿಪ್ರಾಯ ವ್ಯಕ್ತಪಡಿಸಿದರು.
   ಅವರು ನಾಯ್ಕಾಪು ಶ್ರೀರಾಮ ಭಜನಾ ಮಂದಿರದ ಆಶ್ರಯದಲ್ಲಿ ನೂತನವಾಗಿ ಆರಂಭಿಸಲಾಗುವ ಭಜನಾ ತರಬೇತಿ ಶಿಬಿರವನ್ನು ಭಾನುವಾರ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ಹೊಸ ತಲೆಮಾರಿನ ಮಕ್ಕಳಿಗೆ ಧಾಮರ್ಿಕ ಪ್ರಜ್ಞೆ, ಸಂಸ್ಕೃತಿ ಬಗೆಗಿನ ಅರಿವು ಬೆಳೆದರೆ ಸಂಸ್ಕಾರಯುತ ಭವಿಷ್ಯತ್ತನ್ನು ಕಾಣಬಹುದಾಗಿದೆ. ವ್ಯಾವಹಾರಿಕ ಜಗತ್ತು ನೆಮ್ಮದಿಯನ್ನು ಕಸಿದು ಬದುಕನ್ನು ಗೊಂದಲಗೊಳಿಸುವುದೇ ಹೊರತು ಶಾಶ್ವತ ಸಂಭ್ರಮಕ್ಕೆ ನೆರವಾಗದು ಎಂದ ಅವರು, ಜೀವನವನ್ನು ವಿವಿಧ ಕೋನಗಳಲ್ಲಿ ಬೆಳೆಸಿ ಅರಳಿಸುವ ಸಂಸ್ಕೃತಿ ನಮ್ಮದು ಎಂದು ತಿಳಿಸಿದರು.
   ಆಧುನಿಕ ಯುಗದಲ್ಲಿ ಜನರನ್ನು ಒಗ್ಗೂಡಿಸುವ, ಒಗ್ಗಟ್ಟಿನಲ್ಲಿ ಕೊಂಡೊಯ್ಯುವ ಮತ್ತು ಭಗವತ್ ಕೃಪೆಗೆ ಕಾರಣವಾಗುವ ಶಕ್ತಿ ಭಜನೆಯಿಂದ ಮಾತ್ರ ಸಾಧ್ಯ ಎಂದ ಅವರು, ಮನಸ್ಸು, ಬುದ್ದಿಗಳಿಗೆ ಧನಾತ್ಮಕತೆಯನ್ನು ಉದ್ದೀಪಿಸಲು ಭಜನೆ ಸಹಕಾರಿಯಾಗುತ್ತದೆ ಎಂದರು.
   ಈ ಸಂದರ್ಭ ಉಪಸ್ಥಿತರಿದ್ದು ಮಾತನಾಡಿದ ಪತ್ರಕರ್ತ ರವಿ ನಾಯ್ಕಾಪು ರವರು, ಪ್ರತಿಯೊಬ್ಬರೂ ಭಜನಾ ಸತ್ಸಂಗದ ಮೂಲಕ ಪ್ರಜ್ಞಾವಂತ ಸಮಾಜ ನಿಮರ್ಾಣದಲ್ಲಿ ಮುಂದಡಿಯಿಡಬೇಕಿದ್ದು, ಯುವ ತಲೆಮಾರುಗಳ ಸಂಸ್ಕಾರ, ಆಂತರಿಕ ಶಕ್ತಿಯನ್ನು ಬೆಳೆಸುವ ಭಜನಾ ಸಂಕೀರ್ತನೆಗಳಿಗೆ ಬೆಂಬಲ ನೀಡಬೇಕು ಎಂದು ತಿಳಿಸಿದರು.
   ನಾಯ್ಕಾಪು ಶ್ರೀರಾಮ ಭಜನಾ ಮಂದಿರದ ಕೋಶಾಧಿಕಾರಿ ಮೋಹನ್ ಕುಮಾರ್ ಮಾತನಾಡಿ, ಏಕತೆ, ಮನಸ್ಸಿನ ಏಕಾಗ್ರತೆ ಮತ್ತು ಭಗವಂತನ ಸಂಪ್ರೀತಿಯ ಗಳಿಕೆಗಾಗಿ ಸಂಕೀರ್ತನೆ ಸತ್ಸಂಗಗಳಿಗೆ ತೊಡಗಿಸಿಕೊಳ್ಳಬೇಕು ಎಂದರು.
   ಸದಾಶಿವ ಗಟ್ಟಿ, ರವಿಚಂದ್ರ, ದೇವದಾಸ್, ಸಂಜೀವ ಶೆಟ್ಟಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
  ಬಳಿಕ ಜನಾನಂದ ಕುಮಾರ್ ತರಬೇತಿದಾರರಿಗೆ ಭಜನಾ ಸಂಕೀರ್ತನೆಯ ಉಗಮ, ಮಹತ್ವ ಮತ್ತು ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿ, ಭಜನಾ ಪ್ರಾತ್ಯಕ್ಷಿಕಾ ತರಬೇತಿ ನೀಡಿದರು.
 
   
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries