HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                               


ಕೊಂಡೆವೂರಿನಲ್ಲಿ ಮಾತೃಪೂಜನ
   ಉಪ್ಪಳ: ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸುವ ನಿಟ್ಟಿನ ಪ್ರಯತ್ನಗಳಾಗಬೇಕು. ಭಾರತೀಯ ಪರಂಪರೆಯಲ್ಲಿ ಹೆತ್ತ ಮಾತೆ ಹಾಗೂ ಗುರುವಿಗೆ ವಿಶೇಷ ಸ್ಥಾನಮಾನ ನೀಡಲಾಗಿದ್ದು, ಇದು ಬದುಕಿನ ಸಮಗ್ರ ಸಂಸ್ಕಾರಯುತ ಜೀವನದ ಮಾರ್ಗದಶರ್ಿಯಾಗಿ ಶ್ರೀರಕ್ಷೆಯೊದಗಿಸುತ್ತದೆ ಎಂದು ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.
  ಕೊಂಡೆವೂರು ಶ್ರೀನಿತ್ಯಾನಂದ ವಿದ್ಯಾಪೀಠದಲ್ಲಿ ಶುಕ್ರವಾರ ನಡೆದ ಮಾತೃಪೂಜನ, ಮಾತೃಭೋಜನ ಹಾಗೂ ವಿವೇಕಾನಂದ ಜಯಂತಿ ಸಮರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
   ಶಿಕ್ಷಣ-ಸಂಸ್ಕಾರ ಜೊತೆಗೆ ಸಾಗುವುದು ಇಂದು ಮರೀಚಿಕೆಯಾಗುತ್ತಿದ್ದರೂ, ವಿದ್ಯಾಪೀಠಗಳಂತಹ ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು,
ಸ್ವಾಮಿ ವಿವೇಕಾನಂದರು ನಿದರ್ೇಶಿಸಿದ ಯುವ ಸಮಾಜ ನಿಮರ್ಾಣದಲ್ಲಿ ಇಂತಹ ಯತ್ನಗಳು ಫಲಪ್ರದವಾಗುವುದು ಎಂದು ಅವರು ತಿಳಿಸಿದರು.
   ವಿದ್ಯಾಲಯ ಸಮಿತಿಯ ಅಧ್ಯಕ್ಷ ರಾಮಚಂದ್ರ ಚೆರುಗೋಳಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಡಾ. ವೀಣಾ ಮಂಜುನಾಥ್ , ಗೋಪಾಲ್ ಬಂದ್ಯೋಡ್, ಪದ್ಮಾವತಿ ಅಮ್ಮ, ಮಾತೃಸಮಿತಿ ಅಧ್ಯಕ್ಷೆ ರತಿಕಲಾ, ಶಿಶುವಾಟಿಕಾ ಮಾತೃಸಮಿತಿ ಅಧ್ಯಕ್ಷೆ ಸುಮನಾ, ಶಾಲಾ ಪ್ರಾಂಶುಪಾಲ ರಘು ಕೆ.ಎನ್ ಉಪಸ್ಥಿತರಿದ್ದರು. ರೇಖಾಪ್ರದೀಪ್ ಸ್ವಾಗತಿಸಿ,  ಮಲ್ಲಿಕಾ ವಂದಿಸಿದರು. ಶಾಲಾ ಮುಖ್ಯಶಿಕ್ಷಕಿ ಪ್ರತಿಭಾಶ್ರೀಧರ್ ಹಾಗೂ ಶಿಕ್ಷಕ ಸಂಜಯ ಬೇಕಲ್ ನಿರೂಪಿಸಿದರು.
   ವಿದ್ಯಾಥರ್ಿಗಳು ತಮ್ಮ ತಾಯಂದಿರ ಪಾದಪೂಜೆಯನ್ನು ಮಾಡುವುದರ ಮೂಲಕ ಮಾತೃಪೂಜನವನ್ನು, ತಾಯಂದಿರು ಮಕ್ಕಳಿಗೆ ಕೈತುತ್ತು ನೀಡುವುದರ ಮೂಲಕ ಮಾತೃಭೋಜನ ಹಾಗೂ ವಿವೇಕಾನಂದರ ವೇಷಭೂಷಣ ಧರಿಸಿ ಸೇವಾನಿಧಿ ಸಮಪರ್ಿಸುವ ಮೂಲಕ ವಿವೇಕಾನಂದ ಜಯಂತಿಯನ್ನು ಆಚರಿಸಲಾಯಿತು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries