HEALTH TIPS

No title

                       ಖಗ್ರಾಸ ಚಂದ್ರಗ್ರಹಣ : ಶತಮಾನದ ಕೌತುಕಕ್ಕೆ ತೆರೆ
    ಬೆಂಗಳೂರು: ನಭೋಮಂಡಲದ ಶತಮಾನದ ಕೌತುಕಕ್ಕೆ ತೆರೆ ಬಿದ್ದಿದೆ. ವಿಶ್ವಾದ್ಯಂತ ಗೋಚರಿಸಿದ ಖಗ್ರಾಸ ಚಂದ್ರಗ್ರಹಣ ಅಂತ್ಯವಾಗಿದೆ. ಸಂಜೆ 5.20ಕ್ಕೆ   ಆರಂಭಗೊಂಡ ಚಂದ್ರಗ್ರಹಣ ರಾತ್ರಿ 8.45ಕ್ಕೆ ಮೋಕ್ಷವಾಗಿದೆ.
   ಎಲ್ಲಾ ದೇವಸ್ಥಾನಗಳಲ್ಲಿ ಶುದ್ಧೀಕರಣ ಕಾರ್ಯ ಆರಂಭವಾಗಿದ್ದು, ಗ್ರಹಣದ ಬಳಿಕ ಎಲ್ಲಾ ದೇಗುಲಗಳಲ್ಲಿ ಪೂಜೆ ಪುನಸ್ಕಾರ ನಡೆಯುತ್ತಿದೆ.  152 ವರ್ಷಗಳ ಬಳಿಕ ಸಂಪೂರ್ಣ ಚಂದ್ರಗ್ರಹಣ ಗೋಚರವಾಗಿದೆ. 1866ರ ಮಾಚರ್್ 31ರಂದು ಇಂಥದ್ದೇ ಅಪರೂಪದ ಚಂದ್ರಗ್ರಹಣ ಸಂಭವಿಸಿತ್ತು. ಪ್ರಸಕ್ತ ವರ್ಷದಲ್ಲಿ ಸಂಭವಿಸುತ್ತಿರುವ ಮೊದಲ ಗ್ರಹಣ ಇದಾಗಿದೆ.
  ಈ ವೇಳೆ ಚಂದ್ರ ಕೆಲ ಪ್ರದೇಶಗಳಲ್ಲಿ ಕಿತ್ತಳೆ ವರ್ಣದಲ್ಲಿ ಗೋಚರಿಸಿದರೆ ಮತ್ತೆ ಕೆಲವೆಡೆ ರಕ್ತವರ್ಣದಲ್ಲಿ ಕಾಣಿಸಿದ್ದಾನೆ.
   ನವದೆಹಲಿ: ಬಾನಂಗಳದಲ್ಲಿ ಅಪರೂಪದ ಗ್ರಹಣ ಸಂಭವಿಸಿದ್ದು, ಹುಣ್ಣಿಮೆಯ ದಿನದಂದು ಶ್ವೇತ ವರ್ಣದಲ್ಲಿ ಕಂಗೊಳಿಸುವ ಚಂದ್ರ ಈ ದಿನ ಕೆಂಪು ಬಣ್ಣಕ್ಕೆ ತಿರುಗಿದ್ದ.
35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೂಪರ್ ಬ್ಲೂ ಬ್ಲಡ್ ಮೂನ್ ಕಾಣಿಸಿಕೊಂಡಿದ್ದು, ಭಾರತದಲ್ಲಷ್ಟೇ ಅಲ್ಲದೇ ಪಶ್ಚಿಮ ಅಮೆರಿಕ, ಈಸ್ಟ್ ಕೋಸ್ಟ್, ರಷ್ಯಾ, ಯುರೋಪ್, ದಕ್ಷಿಣ ಅಮೆರಿಕದ ಬಹುತೇಕ ಪ್ರದೇಶ, ಆಫ್ರಿಕಗಳಲ್ಲಿಯೂ ಸೂಪರ್ ಬ್ಲೂ ಬ್ಲಡ್ ಮೂನ್ ಕಾಣಿಸಿಕೊಂಡಿದೆ.
   35 ವರ್ಷಗಳ ಬಳಿಕ ಮೊದಲ ಬಾರಿಗೆ ಸಂಪೂರ್ಣ ಚಂದ್ರಗ್ರಹಣ ಗೋಚರಿಸುತ್ತಿದ್ದು, ವಿಶೇಷ ಚಂದ್ರ ಗ್ರಹಣವನ್ನು ನಾಸಾ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಿತ್ತು. ಇಂತಹ ಚಂದ್ರಗ್ರಹಣ  ಕೊನೆಯ ಬಾರಿಗೆ 1866ರ ಮಾಚರ್್ 31 ರಂದು ಘಟಿಸಿತ್ತು. ಇದಾದ ಬಳಿಕ 150 ವರ್ಷಗಳ ಬಳಿಕ ಘಟಿಸಿದೆ. ಇಂತಹ ಮತ್ತೊಂದು ಚಂದ್ರಗ್ರಹಣ 2037ಕ್ಕೆ ಸಂಭವಿಸುತ್ತದೆ ಎಂದು ವಿಜ್ಞಾನಿಗಳು  ತಿಳಿಸಿದ್ದಾರೆ



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries