ಕೃಷಿಯಲ್ಲಿ ಖುಷಿ-ಡಾ.ಪ್ರಕಾಶ್ ವೈ.ಎಚ್
ಬದಿಯಡ್ಕ: ಕೃಷಿ ಜೀವನಕ್ಕೆ ಹೆಚ್ಚು ಹೆಚ್ಚು ಹೊಂದಿಕೊಂಡರೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.ಖುಷಿ ಹೆಚ್ಚಾಗುತ್ತದೆ ಎಂದು ಡಾ.ಪ್ರಕಾಶ್ ವೈ.ಎಚ್ ಹೇಳಿದರು.
ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಏತಡ್ಕ ಸಮಾಜ ಮಂದಿರದಲ್ಲಿ ಇತ್ತೀಚೆಗೆ ಜರಗಿದ ಕೃಷಿ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಸ್ಯ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದು ಸುಮಾರು ಒಂದು ದಶಕದ ಕಾಲ ಉಪನ್ಯಾಸಕರಾಗಿ ದುಡಿದ ತನಗೆ ು ಕೈ ತುಂಬಾ ವರಮಾನ ತರಬಹುದಾಗಿದ್ದ ವೃತ್ತಿಯನ್ನು ಕೈ ಬಿಟ್ಟು ಕುಲ ಕಸುಬಾದ ಕೃಷಿ ರಂಗಕ್ಕೆ ಬಂದ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದರು.
ಕೃಷಿಯಲ್ಲಿ ಏಕ ಬೆಳೆಗಿಂತ ಮಿಶ್ರ ಬೆಳೆ ಹೆಚ್ಚು ಲಾಭದಾಯಕ. ಕೃಷಿ ಪುಸ್ತಕದ ಬದನೆಕಾಯಿಯಲ್ಲ. ಅದು ನೋಡಿ ಕಲಿ,ಮಾಡಿ ತಿಳಿಯಬೇಕಾದದ್ದು. ಕೃಷಿ ಪ್ರವಾಸ ಬಹಳ ಅಗತ್ಯ.ಈಸ ಬೇಕು.ಇದ್ದು ಜಯಿಸಬೇಕು ಎಂದು ಅವರು ಹೇಳಿದರು.ಯೋಚನೆ,ಯೋಜನೆ,ಬಂಡವಾಳ ಹೂಡಿಕೆ,ಕಾರ್ಯ ನಿರ್ವಹಣೆ ಕೃಷಿ ಕ್ಷೇತ್ರದ ವಿವಿಧ ಹಂತಗಳು.ಉಪ ಕಸುಬಾಗಿ ಜೇನು ವ್ಯವಸಾಯ,ಹೈನುಗಾರಿಕೆ ಮೊದಲಾದುವುಗಳ ಆವಶ್ಯಕತೆಯನ್ನು ಅವರು ಒತ್ತಿ ಹೇಳಿದರು.
ಬಳಿಕ ಸಂವಾದ ಜರಗಿತು.ಕೃಷಿಯಲ್ಲಿ ಯಾಂತ್ರೀಕರಣ,ಕಾಡು ಬೆಳೆಸುವಿಕೆ, ಅಧಿಕ ನೀರಾವರಿ,ತೆಂಗಿಗೆ ಉಪ್ಪು ಬಳಸುವಿಕೆ, ಕೀಟ ರೋಗಗಳು ಮೊದಲಾದುವುಗಳ ಕುರಿತು ಚಚರ್ಿಸಲಾಯಿತು.
ಅಧ್ಯಕ್ಷತೆ ವಹಿಸಿದ ಕೆ.ಶ್ಯಾಮ ಭಟ್ ಚಚರ್ೆಯಲ್ಲಿ ಭಾಗವಹಿಸಿ ಮಾತನಾಡಿದರು.ಕೆ. ನರಸಿಂಹ ಭಟ್ ಏತಡ್ಕ ಸ್ವಾಗತಿಸಿ, ಸುಬ್ರಹ್ಮಣ್ಯ ಭಟ್ ಕೆ ವಂದಿಸಿದರು.