HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಕಾಂಗ್ರೆಸ್ಸ್ ನಿಂದ ಬದಿಯಡ್ಕದಲ್ಲಿ ಪ್ರತಿಭಟನೆ
    ಬದಿಯಡ್ಕ : ಇಂಧನ, ನಿತ್ಯೋಪಯೋಗಿ ಸಾಮಾಗ್ರಿಗಳ ಬೆಲೆ ಹೆಚ್ಚಳ ಹಾಗೂ ರಸ್ತೆ ದುರಸ್ತಿ ವಿಳಂಬವನ್ನು ಪ್ರತಿಭಟಿಸಿ ಕಾಂಗ್ರೆಸ್ ಪಕ್ಷವು ರಾಜ್ಯಾದ್ಯಂತ ಬ್ಲಾಕ್ ಸಮಿತಿಗಳ ಆಶ್ರಯದಲ್ಲಿ ಬುಧವಾರ ಪ್ರತಿಭಟನೆ ನಡೆಸಿವೆ.
ಕಾರಡ್ಕ ಬ್ಲಾಕ್ ವತಿಯಿಂದ ಬದಿಯಡ್ಕ ಲೋಕೋಪಯೋಗಿ ಕಛೇರಿಯ ಮುಂಭಾಗದಲ್ಲಿ ನಡೆದ ಮುಷ್ಕರವನ್ನು ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದಶರ್ಿ ಕೆ.ನೀಲಕಂಠನ್ ಉದ್ಘಾಟಿಸಿದರು. ಅವರು ಮಾತನಾಡುತ್ತಾ ರಾಜ್ಯ ಸರಕಾರ ಹಾಗೂ ಕೇಂದ್ರಸರಕಾರವು ವಿವಿಧ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು ಜನರನ್ನು ವಂಚಿಸುತ್ತಿವೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಿನನಿತ್ಯ ಹೆಚ್ಚಳಗೊಳ್ಳುತ್ತಿದ್ದ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ನಿತ್ಯೋಪಯೋಗಿ ಸಾಮಾಗ್ರಿಗಳು ಜನರ ಕೈಗೆಟಕದಂತಾಗಿದೆ ಎಂದರು.
   ಬ್ಲಾಕ್ ಸಮಿತಿ ಅಧ್ಯಕ್ಷ ಕೆ.ವಾರಿಜಾಕ್ಷನ್ ಅಧ್ಯಕ್ಷತೆ ವಹಿಸಿದ್ದರು. ಬಿ.ರಾಮಪಾಟಾಳಿ, ಕೆ.ಎನ್.ಕೃಷ್ಣ ಭಟ್, ಎ.ಕೆ.ಶಂಕರ, ಬಲರಾಮನ್ ನಂಬ್ಯಾರ್, ಎ.ಜಿ.ನಾಯರ್, ಶ್ಯಾಮಪ್ರಸಾದ ಮಾನ್ಯ, ಖಾದರ್ ಮಾನ್ಯ, ಕುಂಜಾರ್ ಮುಹಮ್ಮದ್ ಹಾಜಿ ಸಹಿತ ನೂರಾರು ಮಂದಿ ಭಾಗವಹಿಸಿದರು. ರಾಜ್ಯದಲ್ಲಿ ಅವಶ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದನ್ನು ತಡೆಯಲು ರಾಜ್ಯ ಸರಕಾರ ಸೋತಿದೆ. ರಸ್ತೆಗಳ ದುರಸ್ತಿ ನಡೆಯದ ಹಿನ್ನೆಲೆಯಲ್ಲಿ ವಾಹನ ಸಂಚಾರ ದುಸ್ತರ ಗೊಂಡಿದೆ ಎಂದು ನೇತಾರರು ಆಪಾದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries