HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಹೆತ್ತವರು ಮಕ್ಕಳಿಗಾಗಿ ಸಾವಿರ ಕನಸುಗಳನ್ನು ಕಟ್ಟಿ ಒತ್ತಡ ಸರಿಯಲ್ಲ-ಪ್ರಮೋದ್ ಪಂಡಿತ್
   ಕುಂಬಳೆ: ಮಕ್ಕಳೆಂದರೆ ದೇಶದ ಸಜೀವ ಸಂಪತ್ತು.ಅವರಲ್ಲಿ ಕೋಮಲತೆ,ಪ್ರಸನ್ನತೆಯಿದ್ದಂತೆ ಪ್ರತಿಭೆಯೂ ಇರುತ್ತದೆ.ಅವರವರ ಪ್ರತಿಭೆಯನ್ನು ಗುರುತಿಸಿ ಆ ಮುಖೇನ ಅವರಿಗೆ  ಪ್ರೋತ್ಸಾಹ ಕನೀಡಿ ಅವರೊಳಗೆ ಹುದುಗಿರುವ ಕನಸನ್ನು ನನಸಾಗಿಸಿ. ಅದಲ್ಲದೆ ಮಕ್ಕಳ ಹೆತ್ತವರು ತಮ್ಮ ಸಾವಿರ ಸಾವಿರ ಕನಸು ಕಟ್ಟಲು ಅವರ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ವಿದ್ಯಾವಿಭಾಗ ಕಾರ್ಯದಶರ್ಿ ಪ್ರಮೋದ್ ಪಂಡಿತ್ ಅಭಿಪ್ರಾಯ ವ್ಯಕ್ತಪಡಿಸಿದರು. 
   ಮುಜುಂಗಾವು ಶ್ರೀಭಾರತೀ ಶ್ರೀಭಾರತೀ ವಿದ್ಯಾಪೀಠದಲ್ಲಿ ಇತ್ತೀಚೆಗೆ ನಡೆದ  ವರ್ಧಂತ್ಯುತ್ಸವ ಹಾಗೂ ನೂತನ ಸಭಾ ಭವನ ಉದ್ಘಾಟಿಸಿ ಅವರು ಮಾತನಾಡಿದರು.
    ಸಭಾಕಾರ್ಯಕ್ರಮದಲ್ಲಿ  ಕುಂಬಳೆ ವಲಯಾಧ್ಯಕ್ಷ ಬಾಲಕೃಷ್ಣ ಶರ್ಮರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕಿ ಚಿತ್ರಾಸರಸ್ವತಿ ಪೆರಡಾನ ವಾಷರ್ಿಕ ವರದಿ ವಾಚನ ಮಾಡಿದರು. ನಿವೃತ್ತ ಅಧ್ಯಾಪಕ  ರಾಮಚಂದ್ರ ಭಟ್ ಗುಣಾಜೆ ಶಾಲೆಯ ಬಗ್ಗೆ ಕೆಲವು ಸ್ವರಚಿತ ಚುಟುಕ  ಪ್ರಸ್ತುತ ಪಡಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಉದ್ಯಮಿ, ಪ್ರಸಾದ್ ಗ್ರೂಫ್ ಹೋಟೆಲಿನ ಮಾಲಿಕ ರಾಮ ಪ್ರಸಾದ್ ಕಾಸರಗೋಡು, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಎನ್.ರಾವ್ ಮುನ್ನಿಪ್ಪಾಡಿ, ಶ್ರೀರಾಮಚಂದ್ರಾಪುರ ಮಠದ ಮಹಾಮಂಡಲಾಧ್ಯಕ್ಷೆ  ಈಶ್ವರೀ ಬೇರ್ಕಡವು, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಾದ ಶ್ರೀ ಕೈಲಾಸಮೂತರ್ಿ ಉಪಸ್ಥಿತರಿದ್ದು ಶುಭಹಾರೈಸಿದರು.
   ಈ ಸಂದರ್ಭ ದತ್ತಿನಿಧಿ ಪ್ರಶಸ್ತಿಗಳಾದ ವಿಜಯಾಸುಬ್ರಹ್ಮಣ್ಯ ಅವರ ಪತಿಯ ಸ್ಮರಣಾರ್ಥ, ಕೆಲವಾರು ವರ್ಷಗಳಿಂದ ಪ್ರದಾನ ಮಾಡುತ್ತಾ ಬರುವ ಹೈಸ್ಕೂಲಿನ ಮೂರೂತರಗತಿಗಳಲ್ಲಿ ಅತ್ಯಂತ ಅಧಿಕ ಅಂಕಗಳಿಸಿದವರಿಗೆ ಕೊಡಮಾಡುವ; ಪಂಜಿಗುಡ್ಡೆ ರಾಮಚಂದ್ರ ಭಟ್ಟರ ಧರ್ಮಪತ್ನಿ ಸ್ಮರಣಾರ್ಥ, ಕೋಂಗೋಟು ಗಣಪತಿಭಟ್ಟರ ಸ್ಮರಣಾರ್ಥ, ಬೆಳ್ಳಿಪ್ಪಾಡಿ ಗಣಪತಿ ಶರ್ಮರ ಬಾಬ್ತು,ವೇದಮೂತರ್ಿ ಕೋಣಮ್ಮೆ ಮಹಾದೇವ ಭಟ್ ದತ6ತಿನಿಧಿ ಪ್ರಶಸ್ತಿಗಳನ್ನು  ಅರ್ಹ ವಿದ್ಯಾಥರ್ಿಗಳಿಗೆ ವಿತರಿಸಲಾಯಿತು.
  ಶಾಲಾ ಆಡಳಿತಾಧಿಕಾರಿ ಶ್ಯಾಮ್ ಭಟ್ ದಬರ್ೆಮಾರ್ಗ ಸ್ವಾಗತಿಸಿ, ವಂದಿಸಿದರು.
   ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಲ್.ಕೆ.ಜಿ ಪುಟಾಣಿಗಳ  ಹಕ್ಕಿ ಚಿಲಿಪಿಲಿ ಹಾಡು, ಸಮೂಹನೃತ್ಯ, ಪುಟ್ಟ ಮಕ್ಕಳಿಂದ ಆಂಗ್ಲ ಬಾಷೆಯಲ್ಲಿ ತಮ್ಮ ಪರಿಚಯ, ಹಿರಿಯ ಪ್ರಾಥಮಿಕ ಮತ್ತು ಹೈಸ್ಕೂಲು ವಿದ್ಯಾಥರ್ಿಗಳ ವಿವಿಧ ಸ್ವಾಗತನೃತ್ಯ,ತಾಳಮದ್ದಳೆ ಹಾಡುಗಾರಿಕೆ,ಜಾನಪದನೃತ್ಯ.ಕೋಲಾಟ,ಲೇಝಿಮ್,ತುಳುನಾಟಕ,ಹರಿಕಥಾ ಸಂಕೀರ್ತನೆ,ಸಂಗೀತ ಗಾಯನ ಗಳು, ಏಕಪಾತ್ರಾಭಿನಯ, 5ನೇತರಗತಿ ವಿದ್ಯಾಥರ್ಿನಿ ಸ್ಪೂತರ್ಿಯಿಂದ ಭರತನಾಟ್ಯ ಮೊದಲಾದ ಮನೋರಂಜನಾ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಧ್ವಜಾವರೋಹಣ,ಶಂಖನಾದದೊಂದಿಗೆ ಸಮಾರೋಪಗೊಂಡಿತು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries