HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಸಂಕೀರ್ತನಾ ಸಮಾರೋಪ
    ಪೆರ್ಲ: ಭಜನೆಯ ತರಂಗಗಳಿಂದ ಪರಿಸರದಲ್ಲಿರುವ ಋಣಾತ್ಮಕವಾದ ಚೈತನ್ಯವನ್ನು ತೊಡೆದು ಹಾಕಿ ಧನಾತ್ಮಕವಾದ ಚೈತನ್ಯವನ್ನೊದಗಿಸುತ್ತದೆ.ಇಂದಿನ ಪೀಳಿಗೆಯ ಮಕ್ಕಳು ಮಾದಕ ವಸ್ತುಗಳ ಹಿಂದೆ ದಾಸರಾಗಿ ಜೀವನ ಪರ್ಯಂತ ದುವ್ರ್ಯಸನಿಗಳಾಗಿ ಹಾದಿ ತಪ್ಪುವ ಬದಲು ಭಜನೆಯ ಮೂಲಕ , ಧರ್ಮ ಮತ್ತು ಆಧ್ಯಾತ್ಮಿಕವಾಗಿ ದಾಸರಾಗುವುದನ್ನು ಕಲಿಯಬೇಕು ಎಂದು ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.
    ಕಾಟುಕುಕ್ಕೆ ಶ್ರೀ ಸುಬ್ರಾಯ ದೇವರ ಸನ್ನಿಧಾನದಲ್ಲಿ ಶ್ರೀ ಪುರಂದರದಾಸ ಆರಾಧನೋತ್ಸವ ಸಮಿತಿ ಕಾಟುಕುಕ್ಕೆ ಇದರ ದಶಮಾನೋತ್ಸವ ಪ್ರಯುಕ್ತ ಭಜಕರ ಸಹಕಾರದೊಂದಿಗೆ ಶ್ರೀನಿವಾಸ ಮಹಾಮಂಗಲೋತ್ಸವ , ರಾಮಕೃಷ್ಣ ಕಾಟುಕುಕ್ಕೆ ಅವರ ದಾಸಸಂಕೀರ್ತನಾ ಯಾನದ 500ನೇ ಸಂಭ್ರಮದ ಲೋಕಾರ್ಪಣೆಯ ಅಂಗವಾಗಿ ಮಂಗಳವಾರ ಸೂಯರ್ೋದಯದಿಂದ ಸೂಯರ್ಾಸ್ತಮಾನದ ತನಕ ನಡೆದ ಭಜನಾ ಸಂಕೀರ್ತನೆಯ ಸಮಾರೋಪ ಸಮಾರಂಭದಲ್ಲಿ ಪುಣ್ಯ ಆಶೀರ್ವಚನಗೈದು ಶ್ರೀಗಳು ಮಾತನಾಡಿದರು.
   ದಾಸ ಸಂಕೀರ್ತನೆಯಲ್ಲಿ ಸಿಗುವ ಆನಂದ ಬೇರಾವುದರಲ್ಲೂ ಸಿಗಲು ಸಾಧ್ಯವಿಲ್ಲ.ಹರಿನಾಮ ಸ್ಮರಣೆಗಿಂತ ಶ್ರೇಷ್ಟವಾದುದು ಬೇರೊಂದಿಲ್ಲ. ಕಾಟುಕುಕ್ಕೆಯಲ್ಲಿ ಶ್ರೀನಿವಾಸ ಮಂಗಳೋತ್ಸವದ ಮೂಲಕ ಭಜನೆಗೆ ದೊಡ್ಡದಾದ ಆಯಾಮ ಸಿಕ್ಕಿದೆ.ಒಬ್ಬ ಕಲಾವಿದರಾಗಲಿ ಕಲಾಪೋಷಕರಾಗಲಿ ಅದನ್ನು ಗೌರವಿಸುವಂತಹ ಮನೋಭಾವ ಹಿರಿದಾದುದು. ಜೊತೆಗೆ ಪುರಂದರದಾಸರ ಆರಾಧನೆ ಕೂಡಾ ವಿಶಿಷ್ಟವಾಗಿ ಆಯೋಜಿಸಿರುವುದು ದಾಸ ಸಾಹಿತ್ಯದ ಬಗೆಗಿನ ಅರಿವನ್ನು ಕ್ರಿಯಾತ್ಮಕಗೊಳಿಸಲು ನೆರವಾಗಿದೆ. ಭಜನೆ, ದಾಸ ಸಂಕೀರ್ತನೆಯ ಮೂಲಕ ಮನೆ ಮನಗಳಲ್ಲಿ ಸಾತ್ವಿಕತೆಯನ್ನು ಪಸರಿಸುತ್ತಿರುವ ಸಾಧನೆ ಶ್ಲಾಘನೀಯ. ಧಾಮರ್ಿಕವಾದಂತಹ ಬದ್ಧತೆಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಮೂಡಿಸುವಲ್ಲಿ ರಾಮಕೃಷ್ಣರ ಸೇವೆ ಅಭಿನಂದಿಸಬೇಕಾದುದು. ಸನಾತನ ಹಿಂದೂ ಧರ್ಮ ದುಶ್ಚಟಗಳಿಂದ ದೂರವಿದ್ದು ಆಧ್ಯಾತ್ಮಿಕತೆ ಮತ್ತು ಧಾಮರ್ಿಕತೆಯಲ್ಲಿ ತೊಡಗಿಸಬೇಕು. ನಾವು ತಿನ್ನುವ ಆಹಾರವನ್ನು ಕೂಡಾ ಇಂದು 60ಶೇಕಡಾ ಎಸೆದು ಹಾಳುಗೆಡಹುತ್ತಿದ್ದೇವೆ. ತಿನ್ನುವ ರೀತಿಯಲ್ಲಿ ತಿನ್ನದೆ, ತಿನ್ನಬೇಕಾದ್ದನ್ನು ತಿನ್ನದೆ ಅಪಚಾರವೆಸಗುತ್ತೇವೆ. ಆಹಾರ ಸೇವೆಯಲ್ಲೂ ಒಂದು ಆಚಾರವಿದೆ. ಮಕ್ಕಳ ಬಗ್ಗೆ ,ನಮ್ಮ ಮನೆಯ ಬಗ್ಗೆ , ನಮ್ಮ ದೇಶದ ಬಗ್ಗೆ ಪ್ರತಿಯೊಮಹಾಮಂಗಳೋತ್ಸವ ಸಮಿತಿ ಕೂಡಾ ಸಂತತಿಹೀನರಾಗುವ ಪರಿಸ್ಥತಿ ಬಂದೊದಗಿದೆ ಎಂದು ಅವರು ತಿಳಿಸಿದರು.
   ಸಭೆಯಲ್ಲಿ ರಾಂ ಭಟ್ ನಿಚರ್ಾಲ್, ಪುರುಷೋತ್ತಮ ಭಟ್ ಮಿತ್ತೂರು ಸಂಜೀವ ರೈ ಕೆಂಗಣಾಜೆ.ರಾಮಕೃಷ್ಣ ಕಾಟುಕುಕ್ಕೆ ಸ್ವಾಗತಿಸಿ, ಪುರುಷೋತ್ತಮ ಭಟ್ ಮಿತ್ತೂರು ವಂದಿಸಿದರು.
 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries