ಜನತೆಗೆ ಶಾಪವಾಗಿ ಮಾರ್ಪಟ್ಟ ಸರಕಾರಗಳು
:ಸೋಮಶೇಖರ ಜೆ.ಎಸ್
ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕು ಕಛೇರಿ ಧರಣಿ
ಉಪ್ಪಳ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಸಿಪಿಎಂ ನೇತೃತ್ವದ ಕೇರಳ ಸರಕಾರಗಳು ಜನತೆಗೆ ದ್ರೋಹ ನೀಡುವಲ್ಲಿ ಪರಸ್ಪರ ಸ್ಪಧರ್ಿಸುತ್ತಿದ್ದು, ಈ ಸರಕಾರಗಳ ಪತನವಾಗದೆ ಜನತೆಗೆ ಕ್ಷೇಮವೆಂಬುದು ಕನಸಿನ ಮಾತು ಎಂದು ಕಾಸರಗೋಡುಜಿಲ್ಲಾ ಕಾಂಗ್ರೆಸ್ಸ್ ಪ್ರಧಾನ ಕಾರ್ಯದಶರ್ಿ ಸೋಮಶೇಖರ ಜೆ.ಎಸ್.ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನದ್ರೋಹ ನೀತಿಗಳಿಗೆದುರಾಗಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಉಪ್ಪಳ ತಾಲೂಕು ಕಚೇರಿ ಮುಂಭಾಗದಲ್ಲಿ ಬುಧವಾರ ನಡೆಸಲಾದ ಧರಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯು ಇದೀಗ ಸ್ವತಂತ್ರ ಭಾರತದ ದಾಖಲೆ ಧಾರಣೆಯಾಗಿದೆ. ಕೇಂದ್ರ ಸಚಿವರುಗಳು ಲಂಗು ಲಗಾಮಿಲ್ಲದ ರೀತಿಯ ಹೇಳಿಕೆ ಕೊಡುತ್ತಿದ್ದು ಸಾರ್ವಜನಿಕವಾಗಿ ನಗೆಪಾಟಲಿಗೀಡಾಗಿದ್ದಾರೆ. ನ್ಯಾಯಾಂಗ, ಕಾಯರ್ಾಂಗ, ಚುನಾವಣಾ ಆಯೋಗ ಇತ್ಯಾದಿ ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ಕೈಗೊಂಬೆಯನ್ನಾಗಿಸಿಕೊಂಡು ಪ್ರಧಾನಿಯವರು, ಸಂಪೂರ್ಣ ಆಡಳಿತ ವ್ಯವಸ್ಥೆಯನ್ನು ಸಂಘ ಪರಿವಾರದ ಕಾಲಿನಡಿಗೆ ಸಮಪರ್ಿಸಿದ್ದಾರೆ ಎಂದು ಅವರು ಆರೋಪಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಮಾತನಾಡಿ ಎಲ್ಲವನ್ನೂ ಸರಿಯಾಗಿಸುವುದಾಗಿ ಭರವಸೆ ನೀಡಿ ಅಧಿಕಾರಕ್ಕೇರಿದ ರಾಜ್ಯದ ನೂತನ ಸರಕಾರ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳನ್ನು ಬುಡಮೇಲುಗೊಳಿಸಿದೆ.ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮಂಜೂರು ಮಾಡಿದ ಮೊತ್ತವನ್ನು ಕೂಡಾ ನೀಡಲು ಸಾಧ್ಯವಾಗಿಲ್ಲ. ಕೈಗೊಂಡ ಕಾಮಗಾರಿಗಳ ಬಿಲ್ ಪಾವತಿಯಾಗುತ್ತಿಲ್ಲ. ಲೈಫ್ ಗೃಹ ನಿಮರ್ಾಣ ಯೋಜನೆ ಕೂಡಾ ಜನತೆಯ ಕಣ್ಣಿಗೆ ಮಣ್ಣೆರಚುವ ತಂತ್ರ ಮಾತ್ರವಾಗಿದೆ. ಕೆ ಎಸ್ ಆರ್ ಟಿ ಸಿ ಪಿಂಚಣಿ ಕೂಡಾ ಸರಿಯಾಗಿ ನೀಡಲಾಗದ ಈ ಸರಕಾರವು ಪಡಿತರ ಸಾಮಗ್ರಿಗಳನ್ನು ಸರಿಯಾಗಿ ವಿತರಣೆ ನಡೆಸದೆ ಜನತೆಗೆ ವಂಚಿಸಿದೆ.ತೃಶ್ಶೂರ್ ನಿಂದ ತಿರುವನಂತಪುರಕ್ಕೆ ತಲುಪಲು ಬೆಂಗಳೂರಿನಿಂದ ಹೆಲಿಕಾಪ್ಟರ್ ತರಿಸುವ ತುಗಲಕ್ ದಬರ್ಾರಿನ ದುಂದುಗಾರ ಮುಖ್ಯಮಂತ್ರಿ ಆ ಯಾತ್ರಗೆ ದುರಂತ ಪರಿಹಾರ ನಿಧಿಯ ಹಣವನ್ನು ಬಳಸುವ ಹೇಯ ಕೃತ್ಯಕ್ಕಿಳಿದಿದ್ದಾರೆ.ದುಡಿಯುವ ವರ್ಗದ ಜನತೆಯ ಮುಖ್ಯಮಂತ್ರಿ ಹಾಗೂ ಸಚಿವರುಗಳ ದುಂದು ವೆಚ್ಚವನ್ನು ಸಹಿಸುವಷ್ಟು ಶ್ರೀಮಂತಿಕೆ ಹಾಗೂ ಮುಗ್ದತೆ ರಾಜ್ಯದ ಜನತೆಗಿಲ್ಲ. ರಾಜ್ಯದ ಆರೋಗ್ಯ ಸಚಿವರು ಮೂವತ್ತು ಸಾವಿರ ರೂಪಾಯಿ ಮೌಲ್ಯದ ವಿಶ್ವದ ಅತ್ಯಂತ ದುಬಾರಿ ಕನ್ನಡಕವನ್ನು ಧರಿಸಲು ಸರಕಾರಿ ಖಜಾನೆಯ ಹಣವನ್ನು ಬಳಸಿದ್ದು ಕೂಡಾ ಜನತೆಗೆ ಬಗೆದ ದ್ರೋಹವಾಗಿದೆ. ಸರಕಾರಿ ಉದ್ಯೋಗಿಗಳು ಕಡಿವಾಣವಿಲ್ಲದ ಕುದುರೆಗಳಂತೆ ಜನತೆಯ ಮೇಲೆ ಸವಾರಿ ನಡೆಸುತ್ತಿದ್ದಾರೆ.ಪೊಲೀಸ್ ವ್ಯವಸ್ಥೆ ಅರಾಜಕ ಸ್ಥಿತಿಯಲ್ಲಿದೆ. ಸಂಪರ್ಕಗಳನ್ನು ವಿಚ್ಛೇದಿಸುವುದಾಗಿ ಕೃಷಿಕರಿಗೆ ನೋಟೀಸ್ ನೀಡಲಾಗುತ್ತಿದೆ.ರಾಜ್ಯದ ಜನತೆ ಕಷ್ಟಪಡುತ್ತಿರುವಾಗ ಆಡಳಿತಾರೂಢ ಸಿಪಿಎಂ ಕೋಟಿಗಟ್ಟಲೆ ವ್ಯಯಿಸಿ ಸಮ್ಮೇಳನಗಳನ್ನು ನಡೆಸುತ್ತಿವೆ, ಮದ್ಯ ಹಾಗೂ ಮಾದಕ ವಸ್ತು ಮಾಫಿಯಾಗಳು ಬೀದಿಗಳಲ್ಲಿ ಸ್ವತಂತ್ರ ವಾಗಿ ಮೆರೆದಾಡುತ್ತಿದೆ. ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಬೋರ್ಕಳ ಅಧ್ಯಕ್ಷತೆ ವಹಿಸಿದ್ದರು. ಬ್ಲಾ.ಪಂ.ಉಪಾಧ್ಯಕ್ಷೆ ಮಮತಾ ದಿವಾಕರ್, ಗ್ರಾ.ಪಂ.ಅಧ್ಯಕ್ಷೆ ಶಂಷಾದ್ ಶುಕೂರ್,ಮಂಡಲ ಕಾಂಗ್ರೆಸ್ ಅಧ್ಯಕ್ಷರಾದ ಸತ್ಯನ್. ಸಿ.ಉಪ್ಪಳ, ಮುಹಮ್ಮದ್ ಮಜಾಲ್, ಸತ್ಯನಾರಾಯಣ ಕಲ್ಲೂರಾಯ, ನೇತಾರರಾದ ಪಿ.ಸೋಮಪ್ಪ, ಇಬ್ರಾಹಿಂ ಐ ಆರ್ಡಿಪಿ, ಟಿ.ಪ್ರಭಾಕರ ನಾಯ್ಕ್, ಶಾಂತಾ ಆರ್ ನಾಯ್ಕ್,, ಸತೀಶ್ ಅಡಪ್ಪ ಸಂಕಬೈಲ್,ನಾಸರ್ ಮೊಗ್ರಾಲ್,ಮಂಜುನಾಥ ಪ್ರಸಾದ್ ರೈ, ಶಶಿಕಲಾ, ಶೋಭಾ ಸೋಮಪ್ಪ, ಹೇಮಲತಾ, ಚಂದ್ರಾವತಿ,ಸೀತಾ,ಪೊನ್ನಮ್ಮ ಟೀಚರ್, ವಸಂತಿ ಶೆಟ್ಟಿ, ಬಾಬು ಬಂದ್ಯೋಡು, ಕೆ.ಸದಾಶಿವ,
ನವೀನ್ ರೈ, ನಾಗೇಶ್ ಮಂಜೇಶ್ವರ, ಗುರುವಪ್ಪ ಮಂಜೇಶ್ವರ, ಓಂ ಕೃಷ್ಣ, ವಿ.ಪಿ.ಮಹಾರಾಜನ್, ಹಮೀದ್ ಕಣಿಯೂರು, ಇಕ್ಬಾಲ್ ಕಳಿಯೂರು, ಶರೀಫ್ ಅರಿಬೈಲ್,ರಾಮನ್,ಪ್ರದೀಪ್ ಶೆಟ್ಟಿ,ಮುಂತಾದವರು ಉಪಸ್ಥಿತರಿದ್ದರು.