HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
             ಮುಳ್ಳೇರಿಯದಲ್ಲಿ ಸ್ವಾಗತ ಸಮಿತಿ ರಚನೆ
    ಮುಳ್ಳೇರಿಯ : ಕಾಸರಗೋಡು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಪರಿಸರದಲ್ಲಿ ಮಾ.3 ಹಾಗೂ 4ರಂದು ನಡೆಯಲಿದ್ದು, ಈ ಕಾರ್ಯಕ್ರಮದ ಯಶಸ್ವಿಗಾಗಿ ಮುಳ್ಳೇರಿಯ ಗಣೇಶ ಮಂದಿರದಲ್ಲಿ ಸ್ವಾಗತ ಸಮಿತಿ ರಚನಾ ಸಭೆಯು ಬುಧವಾರ ನಡೆಯಿತು.
    ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ನಡೆಯುವ ಈ ಸಮ್ಮೇಳನವು ವಿವಿಧ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಸಲು ನಿರ್ಧರಿಸಲಾಯಿತು. ಕಸಾಪ ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷ ಎಸ್ ವಿ ಭಟ್ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸಮ್ಮೇಳನದಲ್ಲಿ ಸಾಹಿತಿಗಳಿಗೆ ಅಗ್ರಪೂಜೆ ನಡೆಯಲಿದೆ. 2006ರಲ್ಲಿ ಮುಳ್ಳೇರಿಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದು, ಇದೀಗ 12 ವರ್ಷಗಳ ನಂತರ ಮತ್ತೆ ಸಮ್ಮೇಳನ ಮುಳ್ಳೇರಿಯದಲ್ಲಿ ನಡೆಯಲಿದೆ. ಸರ್ವಜನಾಂಗದ ಶಾಂತಿಯ ತೋಟದಂತಹಾ ಈ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.  ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಮುಖಂಡ ರಂಗನಾಥ ಶೆಣೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗಡಿನಾಡ ಘಟಕದ ಮುಖಂಡರಾದ ರಾಮಚಂದ್ರ ಭಟ್ ಧರ್ಮತ್ತಡ್ಕ, ನವೀನ್ಚಂದ್ರ ಮಾನ್ಯ, ಸುಬ್ಬಣ್ಣ ಶೆಟ್ಟಿ ಕಾಸರಗೋಡು ಭಾಗವಹಿಸಿದ್ದರು. ಸಮ್ಮೇಳನದ ಅಂಗವಾಗಿ ವಿವಿಧ ಕಲಾತಂಡಗಳ ಸಹಕಾರದಲ್ಲಿ ಭವ್ಯ ಮೆರವಣಿಗೆ, ಯಕ್ಷಗಾನ, ಕಾಸರಗೋಡಿನ ಜ್ವಲಂತ ಸಮಸ್ಯೆಯ ಕುರಿತಾದ ಗೋಷ್ಠಿ, ಹಾಸ್ಯ ಗೋಷ್ಠಿ, ನಾಡಗೀತೆ ಹಾಗೂ ರೈತಗೀತೆಯೊಂದಿಗೆ ಕಾರ್ಯಕ್ರಮ ಉದ್ಘಾಟನೆ, ವಿವಿಧ ಕಲಾ ಪ್ರದರ್ಶನ, ಪುಸ್ತಕ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಕಾಸರಗೋಡು ಜಿಲ್ಲಾ ಮಟ್ಟದ ಈ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವ ಕನ್ನಡಿಗರನ್ನು ಸೇರಿಸಿಕೊಂಡು ಕನ್ನಡಿಗರ ಒಗ್ಗಟ್ಟನ್ನು ಪ್ರದಶರ್ಿಸುವ ಜತೆಗೆ ಮತ್ತಷ್ಟೂ ಜಾಗೃತರಾಗುವಂತೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
  ವಿವಿಧ ಸಮಿತಿ ರಚನೆ : ಕನ್ನಡ ಸಾಹಿತ್ಯ ಸಮ್ಮೇಳನದ ಸಮಿತಿಯ ಗೌರವಾಧ್ಯಕ್ಷರಾಗಿ ರಂಗನಾಥ ಶೆಣೈ ಅವರನ್ನು ಆಯ್ಕೆ ಮಾಡಲಾಯಿತು. ಎಸ್ ವಿ ಭಟ್(ಅಧ್ಯಕ್ಷರು), ಮಹಾಲಿಂಗೇಶ್ವರ ಭಟ್, ಸುಬ್ರಹ್ಮಣ್ಯ ಕರಣಿ, ಡಾ.ಬೇ ಸಿ ಗೋಪಾಲಕೃಷ್ಣ ಭಟ್, ಬೆಳ್ಳಿಗೆ ನಾರಾಯಣ ಮಣಿಯಾಣಿ, ಶಿವಕೃಷ್ಣ ಭಟ್ ಬಳಕ್ಕ(ಉಪಾಧ್ಯಕ್ಷರು), ಧರ್ಮತ್ತಡ್ಕ ರಾಮಚಂದ್ರ ಭಟ್, ನವೀನಚಂದ್ರ ಮಾನ್ಯ (ಸಂಚಾಲಕರು), ರಾಘವ ಬಳ್ಳಾಲ್ (ಖಜಾಂಜಿ) ಆಯ್ಕೆಯಾದರು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಗೋಪಾಲಕೃಷ್ಣ ಭಟ್, ಸಂಚಾಲಕರಾಗಿ ದೇವಾನಂದ ಶೆಟ್ಟಿ, ಕಾರ್ಯಕ್ರಮ ಸಂಯೋಜನಾ ಸಮಿತಿ ಅಧ್ಯಕ್ಷರಾಗಿ ಸುಕುಮಾರ ಆಲಂಪಾಡಿ, ಸಂಚಾಲಕರಾಗಿ ಯತೀಶ್ ರೈ, ಚಪ್ಪರ ಮತ್ತು ಧ್ವನಿವರ್ಧಕ ವ್ಯವಸ್ಥೆಯ ಅಧ್ಯಕ್ಷರಾಗಿ ಕೆ ಗೋಪಾಲಕೃಷ್ಣ, ಸಂಚಾಲಕರಾಗಿ ನಾರಾಯಣ ಚೆಟ್ಟಿ, ಚಿತ್ರಕಲೆ ಮತ್ತು ಪುಸ್ತಕ ಪ್ರದರ್ಶನ ಸಮಿತಿ ಅಧ್ಯಕ್ಷರಾಗಿ ವಿರಾಜ್ ಅಡೂರು, ಸಂಚಾಲಕರಾಗಿ ಗಣೇಶ್ ವತ್ಸ ನೆಕ್ರಾಜೆ, ಆಹಾರ ಸಮಿತಿ ಅಧ್ಯಕ್ಷರಾಗಿ ದೀನನಾಥ ಶೆಣೈ, ಸಂಚಾಲಕರಾಗಿ ಬಾಲಸುಬ್ರಹ್ಮಣ್ಯ ಭಟ್, ಪ್ರಚಾರ ಮತ್ತು ಮೆರವಣಿಗೆ ಸಮಿತಿ ಅಧ್ಯಕ್ಷರಾಗಿ ಬಳ್ಳಮೂಲೆ ಗೋವಿಂದ ಭಟ್, ಸಂಚಾಲಕರಾಗಿ ಪ್ರಕಾಶ ಮಾಸ್ತರ್ ಕುಂಟಾರು, ಸನ್ಮಾನ ಸಮಿತಿ ಅಧ್ಯಕ್ಷರಾಗಿ ಸುಬ್ಬಣ್ಣ ಶೆಟ್ಟಿ, ಸಂಚಾಲಕಿಯಾಗಿ ಶಶಿಕಲಾ ಟೀಚರ್, ಶಿಸ್ತು ಪರಿಪಾಲನಾ ಸಮಿತಿ ಅಧ್ಯಕ್ಷರಾಗಿ ನಾರಾಯಣ ಶೆಟ್ಟಿ ಆಯ್ಕೆಯಾದರು. ಸಮ್ಮೇಳನದ ಮುಂದಿನ ಸಿದ್ಧತಾ ಸಭೆಯು ಜ.27ರಂದು ಬೆಳಗ್ಗೆ 10.30ಕ್ಕೆ ಮುಳ್ಳೇರಿಯದ ಗಣೇಶಮಂದಿರದಲ್ಲಿ ನಡೆಸಲು ಸಭೆಯಲ್ಲಿ ನಿರ್ಧರಿಸಿದರು. ರಾಮಚಂದ್ರ ಭಟ್ ವಂದಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries