HEALTH TIPS

No title

ತೂಮಿನಾಡು: ಓಪನ್ ಮ್ಯಾಟ್ ಕಬಡ್ಡಿ ಪಂದ್ಯಾಟ: ಆಳ್ವಾಸ್ ತಂಡ ಪ್ರಥಮ
    ಮಂಜೇಶ್ವರ: ತೂಮಿನಾಡು ಅರಬ್ ರೈಡಸರ್್ ಆಟ್ಸರ್್ ಆಂಡ್ ಸ್ಪೋಟ್ಸರ್್ ಕ್ಲಬ್ಬಿನ ಮೂರನೇ ವಾಷರ್ಿಕೋತ್ಸವದಂಗವಾಗಿ ಭಾನುವಾರ ನಡೆದ ಹೊನಲು ಬೆಳಕಿನ  ಓಪನ್ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನದ 30 ಸಾವಿರ ರೂ. ನಗದು ಹಾಗೂ ಚಾಂಪ್ಯನ್ ಟ್ರೋಫಿಯನ್ನು  ಮೂಡಬಿದಿರೆಯ ಆಳ್ವಾಸ್ ತಂಡ  ತನ್ನ ಮುಡಿಗೇರಿಸಿಕೊಂಡಿತು.
   ಅರಬ್ ರೈಡಸರ್್ ಕ್ಲಬ್ ಅಧ್ಯಕ್ಷ ಯಯ್ಯಾ ಗೋಲ್ಡ್ ಖಜಾನ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು  ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷ ಎ ಕೆ ಎಂ ಉದ್ಘಾಟಿಸಿದರು. ಕಬಡ್ಡಿ ಪಂದ್ಯಾಟದ ಮೈದಾನವನ್ನು ಮಂಜೇಶ್ವರ ಬ್ಲಾಕ್ ಪಂ. ಅರೋಗ್ಯ ಹಾಗೂ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಮುಸ್ತಫ ಉದ್ಯಾವರ ಉದ್ಘಾಟಿಸಿದರು.
   ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ, ಹಿರಿಯ ಕಬ್ಬಡ್ಡಿ ಆಟಗಾರ ಜಗದೀಶ್ ಕುಂಬಳೆ, ಸುಧೀರ್ ಕುಮಾರ್, ರಘು ಶೆಟ್ಟಿ, ಹೈದರ್ ಪತರ್ಿಪ್ಪಾಡಿ, ಸುರೇಶ್ ಶೆಟ್ಟಿ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
   ಪಂದ್ಯಾಟದ ಮಧ್ಯೆ ಕನರ್ಾಟಕ ಸಚಿವ ಯು ಟಿ ಖಾದರ್ ಕೂಡಾ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವೇದಿಕೆಯಲ್ಲಿ ಅರಬ್ ರೈಡಸರ್್ ನ ಅಬ್ದುಲ್ ಸತ್ತಾರ್, ಹಿರಿಯ ಆಟಗಾರರಾದ ಜಗದೀಶ್ ಕುಂಬಳೆ, ಸುಧೀರ್ ಕುಮಾರ್ ಸಹಿತ ಹಲವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
   ಕನರ್ಾಟಕ ಹಾಗೂ ಕೇರಳದಿಂದ ಆಗಮಿಸಿದ ಸುಮಾರು 24 ತಂಡಗಳು ಭಾಗವಹಿಸಿದ ಪಂದ್ಯಾಟದಲ್ಲಿ ಅರಸು ಮಜಲ್ ತಂಡ ಧ್ವೀತಿಯ 15 ಸಾವಿರ ರೂ. ನಗದು ಹಾಗೂ ಟ್ರೋಪಿಯನ್ನು ತನ್ನದಾಗಿಸಿತು. ತೃತೀಯ ಸ್ಥಾನವನ್ನು ಕಂದಲ್ ತಂಡ ತನ್ನದಾಗಿಸಿಕೊಂಡರೆ ನಾಲ್ಕನೇ ಸ್ಥಾನವನ್ನು ಶಿವಶಕ್ತಿ ತನ್ನದಾಗಿಸಿತು.
   ವಿಜೇತರಿಗೆ ವೇದಿಕೆಯಲ್ಲಿ ಮುಸ್ತಫ ಉದ್ಯಾವರ, ರಹ್ಮಾನ್ ಉದ್ಯಾವರ, ರಜಾಕ್ ಎಂ ಬಿ, ಅಶ್ರಫ್ ಮೊದಲಾದವರು ಟ್ರೋಫಿ ಹಾಗೂ ನಗದನ್ನು ವಿತರಿಸಿದರು. ಪಂದ್ಯಾಟದಲ್ಲಿ ಉತ್ತಮ ಹಿಡಿತಗಾರನಾಗಿ ಆಯ್ಕೆಯಾದ ವರುಣ್, ಉತ್ತಮ ಧಾಳಿಗಾರನಾಗಿ ಆಯ್ಕೆಯಾದ ವಿಶ್ವರಾಜ್, ಪಂದ್ಯಾಟದ ಆಲ್ ರೌಂಡರ್ ಗೆ ಆಯ್ಕೆಯಾದ ಮಿಥಿನ್, ಪಂದ್ಯಾಟದ ಹೀರೋ ಆಗಿ ಆಯ್ಕೆಯಾದ ಮನ್ಸೂರ್ ರವರನ್ನು ಕೂಡಾ ಟ್ರೋಫಿ ನೀಡಿ ಪ್ರೋತ್ಸಾಹಿಸಲಾಯಿತು.
   ರಾತ್ರಿಯಿಂದ ಬೆಳಗ್ಗಿನ ತನಕ ಕಬಡ್ಡಿ ಕ್ರೀಡಾಭಿಮಾನಿಗಳು ಕಬಡ್ಡಿ ಆಟಗಾರರಿಗೆ ಪ್ರೋತ್ಸಾಹ ನೀಡಿದ್ದು, ಸಹಸ್ರಾರು ಪ್ರೇಕ್ಷಕರನ್ನೊಳಗೊಂಡಂತೆ ಯಶಸ್ವಿ ಪಂದ್ಯಾಟ ಮುಕ್ತಾಯಗೊಂಡಿತು.





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries