HEALTH TIPS

No title

             ಪರಂಪರೆಯ ಅರಿವಿನ ಗುರುವಿಂದ ಯಕ್ಷಗಾನ ಬೆಳೆಯಬಲ್ಲದು-ಎಸ್.ರಾಮ ಭಟ್ ಕೋಟೆ
     ಪೆರ್ಲ: ಧೀಶಕ್ತಿಯನ್ನು ಉದ್ದೀಪನಗೊಳಿಸಿ ಅಂಧಕಾರದಿಂದ ಮೇಲೆದ್ದು, ವಿಶಾಲ ಬೆಳಕಿನ ಪ್ರಪಂಚವನ್ನು ಜ್ಞಾನ ಶಕ್ತಿಯ ಮೂಲಕ ತೋರ್ಪಡಿಸುವ ವಿದ್ಯೆ ಮನುಷ್ಯ ಸಂಪಾದಿಸುವ ಮಹತ್ತರವಾದ ಸಂಪಾದನೆಯಾಗಿದೆ. ಕಲಾ ಪ್ರಕಾರದಲ್ಲಿ ಗಳಿಸುವ ಸಿದ್ದಿ ಗುರು-ಶಿಷ್ಯ ಪರಂಪರೆಯ ದ್ಯೋತಕವಾಗಿ ಪರಂಪರೆಯ ಕೊಂಡಿಯನ್ನು ಮುಂದುವರಿಸುತ್ತದೆ. ಈ ಹಿನ್ನೆಲೆಯಲ್ಲಿ ಪಡ್ರೆಚಂದು ರವರ ಸಾಧನೆ, ಸಮರ್ಪಣೆಯನ್ನು ವ್ರತವಾಗಿ ಸ್ವೀಕರಿಸಿ ಪಡ್ರೆಚಮದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರ ಸಾಗಿಬಂದಿರುವುದು ಪುರುಷ ಪ್ರಯತ್ನದ ಸಂಕೇತ ಎಂದು ನಿವೃತ್ತ ಉಪನ್ಯಾಸಕ, ಯಕ್ಷಗಾನ ಕಲಾವಿದ ಎಸ್.ರಾಮ ಭಟ್ ಕೋಟೆ ಅಭಿಪ್ರಾಯ ವ್ಯಕ್ತಪಡಿಸಿದರು.
  ಪೆರ್ಲದ ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯತರಬೇತಿ ಕೇಂದ್ರದ ಶನಿವಾರ ನಡೆದ 13ನೇ ವಾಷರ್ಿಕೋತ್ಸವ, ಪ್ರಶಸ್ತಿ ಪ್ರದಾನ ಹಾಗೂ ಕೇಂದ್ರದ ಮಕ್ಕಳ ಯಕ್ಷಗಾನ ಬಯಲಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
   ಶ್ರೀಮಂತ ಪರಂಪರೆಯಿರುವ ಯಕ್ಷಗಾನ ಇಂದು ತನ್ನ ಪರಂಪರೆಯನ್ನು ಮೀರಿ ಬೆಳೆಯುತ್ತಿರುವುದು ಆತಂಕಕ್ಕೀಡುಮಾಡುತ್ತಿದೆ. ಆದರೆ ಸಮರ್ಥ ಯಕ್ಷಗುರು ಮತ್ತು ಅವರ ತರಬೇತಿಯಲ್ಲಿ ಪಳಗುವ ಯುವ ಕಲಾವಿದರು ಪರಂಪರೆಗೆ ಧಕ್ಕೆ ತರಲಾರರು ಎಂದು ಅವರು ತಿಳಿಸಿದರು. ಯಕ್ಷಗಾನದ ಹಿಮ್ಮೇಳ-ಮುಮ್ಮೇಳದ ಪ್ರತಿಯೊಂದಕ್ಕೂ ಶಾಸ್ತ್ರೀಯ ಹಿನ್ನೆಲೆಯಿದ್ದು, ಆದುದರಿಂದ ಇಂದದು ಜಗತ್ತನ್ನೇ ಆಕಷರ್ಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.ತೆಂಕುತಿಟ್ಟಿಗೆ ಇಂದು ಏಕೈಕ ತರಬೇತಿ ಕೇಂದ್ರವಾಗಿ ಗುರುತಿಸಿಕೊಂಡಿರುವ ಪಡ್ರೆಚಂದು ಸ್ಮಾರಕ ತರಬೇತಿ ಕೇಂದ್ರದ ಸಂಸ್ಥಾಪಕ ಸಬ್ಬಣಕೋಡಿ ರಾಮ ಭಟ್ ರವರ ಅಸಾಧಾರಣ ಹಠ ಸಾಧನೆಯಿಂದ ಕೇಂದ್ರ ಇಂದು ಹೆಮ್ಮರವಾಗಿ ಬೆಳೆಯಲು ಕಾರಣವಾಗಿದೆ ಎಂದು ತಿಳಿಸಿದ ಅವರು, ಕಲಾಪ್ರೇಮಿಗಳ, ಪೋಷಕರ ಸಹಕಾರ ಇನ್ನಷ್ಟು ವಿಸ್ತರಿಸುವ ಮೂಲಕ ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯೂ ಇದೆ ಎಂದು ತಿಳಿಸಿದರು.
  ಪುತ್ತೂರು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್ ಎಂ.ಟಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಶ್ರೀಕೃಷ್ಣ ಕಾರಂತ, ನಿವೃತ್ತ ಮುಖ್ಯ ಶಿಕ್ಷಕ, ನಲಂದಾ ಕಾಲೇಜಿನ ಆಡಳಿತಾಧಿಕಾರಿ ಶಿವಕುಮಾರ, ವಿಟ್ಲ ಯಕ್ಷ ಸಿಂಧೂರ ಪ್ರತಿಷ್ಠಾನದ ಸಿ.ಎಚ್.ಸುಬ್ರಹ್ಮಣ್ಯ ಭಟ್ ಚಣಿಲ, ಹವ್ಯಾಸಿ ಕಲಾವಿದ ದಿನೇಶ್ ಮಾವೇಶ್ವರ, ಡಾ.ಎಸ್.ಎನ್. ಭಟ್ ಪೆರ್ಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಕೇಂದ್ರದ ಗೌರವಾಧ್ಯಕ್ಷ ವಿಷ್ಣು ಭಟ್ ಉಪಸ್ಥಿತರಿದ್ದರು.
    ಸಮಾರಂಭದಲ್ಲಿ ಪ್ರಸಿದ್ದ ಯಕ್ಷಗಾನ ಗುರು, ಮದ್ದಳೆವಾದಕ ಹರಿನಾರಾಯಣ ಬೈಪಡಿತ್ತಾಯರಿಗೆ ಪ್ರಸ್ತುತ ಸಾಲಿನ ಪಡ್ರೆ ಚಂದು ಪ್ರಶಸ್ತಿ, ಮೊದಲ ಮಹಿಳಾ ಭಾಗವತೆ ಖ್ಯಾತಿಯ ಲೀಲಾವತಿ ಬೈಪಡಿತ್ತಾಯರಿಗೆ ಅಡ್ಕಸ್ಥಳ ಪ್ರಶಸ್ತಿ,  ಯಕ್ಷಗಾನ ದ್ರೋಣಾಚಾರ್ಯ, ಹಿರಿಯ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳಿಗೆ ವಿಶೇಷ ಪ್ರಶಸ್ತಿ ಪ್ರಧಾನಗೈದು ಈ ಸಂದರ್ಭ ಸನ್ಮಾನಿಸಲಾಯಿತು.
   ಪಡ್ರೆಚಂದು ಸ್ಮಾರಕ ಯಕ್ಷಗಾನ ತರಬೇತಿ ಕೇಂದ್ರದ ನಿದರ್ೇಶಕ, ಗುರು ಸಬ್ಬಣಕೋಡಿ ರಾಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಸನ್ಮಾನಿತರ ಅಭಿನಂದನಾ ಭಾಷಣಗೈದು ವಂದಿಸಿದರು.  ಬಾಲಕೃಷ್ಣ ಏಳ್ಕಾನ ವರದಿ ವಾಚಿಸಿದರು. ಉಷಾ ಕುಂಚಿನಡ್ಕ ಹಾಗೂ ಜ್ಯೋಸ್ನ್ಸಾ ಟೀಚರ್ ಕಡಂದೇಲು ಕಾರ್ಯಕ್ರಮ ನಿರೂಪಿಸಿದರು. 
   ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 9.30 ರಿಂದ ಶ್ರೀ ಗಣಪತಿ ಹೋಮ, 10.30 ರಿಂದ ಶ್ರೀ ಸತ್ಯನಾರಾಯಣ ಪೂಜೆ, 11 ರಿಂದ ಕೇಂದ್ರದ ವಿದ್ಯಾಥರ್ಿಗಳಿಂದ ಭಜನೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ ನಡೆಯಿತು. 
  ಅಪರಾಹ್ನ 3.30 ರಿಂದ ಕೇಂದ್ರದ ವಿದ್ಯಾಥರ್ಿಗಳಿಂದ ಪೂರ್ವರಂಗ, ಸಂಜೆ 4.30 ರಿಂದ ರಂಗಪ್ರವೇಶದ ವಿದ್ಯಾಥರ್ಿಗಳಿಂದ `ಸೀತಾ ಕಲ್ಯಾಣ' ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. 5.45 ಕ್ಕೆ `ಕಾಲನೇಮಿ ಕಾಳಗ' ಯಕ್ಷಗಾನ ಪ್ರದರ್ಶನಗೊಂಡಿತು. ಸಭಾ ಕಾರ್ಯಕ್ರಮದ ಬಳಿಕ  ರಾತ್ರಿ ಕೇರಳ ಶಾಲಾ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ಬದಿಯಡ್ಕ ನವಜೀವನ ಶಾಲಾ ವಿದ್ಯಾಥರ್ಿಗಳಿಂದ ಬಭ್ರುವಾಹನ ಕಾಳಗ ಯಕ್ಷಗಾನ ಬಯಲಾಟ ಹಾಗೂ ಬಳಿಕ ಕೇಂದ್ರದ ವಿದ್ಯಾಥರ್ಿಗಳಿಂದ `ಶ್ರೀಕೃಷ್ಣ ಲೀಲಾಮೃತ ಚಕ್ರವ್ಯೂಹ' ಯಕ್ಷಗಾನ ಬಯಲಾಟ ರಾತ್ರಿ ಪೂತರ್ಿ ಪ್ರದರ್ಶನಗೊಂಡಿತು.
 
 




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries