HEALTH TIPS

No title

      ಬಡಪಾಯಿಗಳನ್ನು ಹತ್ಯೆಗೈದು ರಾಜಕೀಯ ಮಾಡುವ ಮಾಕ್ಸರ್ಿಸ್ಟ್ ಪಕ್ಷದ ಅವನತಿ ಸನ್ನಿಹಿತ : ಹಷರ್ಾದ್ ವಕರ್ಾಡಿ
       ರಕ್ತ ಸುರಿಸುವ ರಾಜಕೀಯಕ್ಕೆ ರಕ್ತದಾನದ ಮೂಲಕ ಉತ್ತರ-ಹುತಾತ್ಮ ಶುಬೈಬ್ ಎಡವಣ್ಣೂರ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ
    ಮಂಜೇಶ್ವರ : ಕಣ್ಣೂರು ಜಿಲ್ಲೆಯ ಮಟ್ಟನ್ನೂರಿನಲ್ಲಿ ಕಮ್ಯುನಿಸ್ಟ್ ಮಾಕ್ಸರ್ಿಸ್ಟ್ ಗೂಂಡಾಗಳ ರಕ್ತಸಿಕ್ತ ಹಿಂಸಾ ರಾಜಕೀಯ ಕ್ಕೆ ಬಲಿಯಾದ ಯುವ ಕಾಂಗ್ರೆಸ್ ನಾಯಕ  ಶುಹೈಬ್ ಎಡವಣ್ಣೂರ್  ಅವರ ಬಲಿದಾನವು ಎಂದಿಗೂ ವ್ಯರ್ಥವಾಗದು. ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಂತ್ವನ ಚಟುವಟಿಕೆಗಳ ಮೂಲಕ ಪಕ್ಷದ ಬೆಳವಣಿಗೆಗೆ ಶ್ರಮಿಸಿದ ಇಪ್ಪತ್ತೊಂಬತ್ತರ ಹರೆಯದ ಶುಹೈಬ್ ಮೂವರು ಸಹೋದರಿಯರ ಏಕಮಾತ್ರ ಆಶ್ರಯವಾಗಿದ್ದ ವ್ಯಕ್ತಿ. ಯಾವುದೇ ಕ್ರಿಮಿನಲ್ ಹಿನ್ನೆಲೆಗಳಿಲ್ಲದ ಅವರ ಹತ್ಯೆಯು ಕೇರಳದ ಮಾತ್ರವಲ್ಲದೆ ದೇಶದ ಜನತೆಯಲ್ಲಿ ಸಾತ್ವಿಕ ರೋಷ ಹಾಗೂ ಅನುಕಂಪವನ್ನು ಸೃಷ್ಟಿಸಿದೆ. ಬಡಪಾಯಿಗಳ ರಕ್ತ ಹೀರಿ ರಾಜಕೀಯ ಮಾಡುವ ಮಾಕ್ಸರ್ಿಸ್ಟ್ ಪಕ್ಷದ ಅವನತಿ ಸನ್ನಿಹಿತವಾಗಿದೆಯೆಂದು ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹಷರ್ಾದ್ ವಕರ್ಾಡಿ ಹೇಳಿದರು.
    ಇಂಡಿಯನ್ ಯೂತ್ ಕಾಂಗ್ರೆಸ್ ಮಂಜೇಶ್ವರ ಅಸೆಂಬ್ಲಿ ಸಮಿತಿಯು ಬ್ಲಡ್ ಡೋನಸರ್್ ಮಂಗಳೂರು, ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇವುಗಳ ಸಹಯೋಗದೊಂದಿಗೆ ವಕರ್ಾಡಿ ಮಜೀರ್ ಪಳ್ಳದಲ್ಲಿ ಶನಿವಾರ ಆಯೋಜಿಸಿದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
  ಸಿಪಿಎಂ ನಾಯಕರ ಮಕ್ಕಳು ವಿದೇಶದಲ್ಲಿ ನಡೆಸಿದ ಕೋಟ್ಯಂತರ ರೂಪಾಯಿಗಳ ವಂಚನೆಯಿಂದ ಮುಜುಗರಕ್ಕೀಡಾದ ಪಕ್ಷವು ಜನರ ಗಮನವನ್ನು ಬೇರೆಡೆ ಸೆಳೆಯಲಿಕ್ಕಾಗಿ ಕೊಲೆಗೈಯಲು ಆಯ್ದುಕೊಂಡದ್ದು ಕುಟುಂಬದ ಏಕಮಾತ್ರ ಆಶ್ರಯವಾಗಿದ್ದ ಶುಹೈಬ್ ನನ್ನು. ಕೊಲೆಯ ಮೂಲಕ ರಾಜಕೀಯ ಏಳಿಗೆ ಪಡೆಯಲು ಬಯಸುವ ರಾಕ್ಷಸೀ ಯತ್ನಗಳಿಗೆ ಜನತೆ ಮಾರುತ್ತರ ನೀಡಲಿದ್ದಾರೆ. ಅವರದು ಬಡಪಾಯಿಗಳ  ರಕ್ತ ಹೀರುವ ರಾಜಕೀಯವಾದರೆ ನಮ್ಮದು ಗಾಂಧೀಜಿಯವರ ಹಾದಿಯ ಅಹಿಂಸಾ ರಾಜಕೀಯವಾಗಿದೆ. ಗಂಭೀರ ರೋಗಗಳಿಂದ ಬಳಲುವ ರೋಗಿಗಳಿಗಾಗಿ ರಕ್ತದಾನ ಮಾಡುವ ಮೂಲಕ ಈ ಹತ್ಯೆಯನ್ನು ವಿಶಿಷ್ಟ ರೀತಿಯಲ್ಲಿಪ್ರತಿಭಟಿಸುತ್ತಿದ್ದೇವೆಯೆಂದು ಅವರು ಹೇಳಿದರು.
    ಯೂತ್ ಕಾಂಗ್ರೆಸ್ ಮಂಜೇಶ್ವರ ಅಸೆಂಬ್ಲಿ ಸಮಿತಿ ಅಧ್ಯಕ್ಷ ನಾಸರ್ ಮೊಗ್ರಾಲ್ ಅಧ್ಯಕ್ಷತೆ ವಹಿಸಿದ ಸಮಾರಂಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮ್ಮರ್ ಬೋರ್ಕಳ,ಉಪಾಧ್ಯಕ್ಷ ಪಿ.ಸೋಮಪ್ಪ, ಪ್ರಧಾನ ಕಾರ್ಯದಶರ್ಿಗಳಾದ ದಿವಾಕರ್ ಎಸ್.ಜೆ, ವಿನೋದ್ ಕುಮಾರ್ ಪಾವೂರು, ಮಂಡಲ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಮಜಾಲ್, ಬ್ಲಾಕ್ ಪಂಚಾಯತು ಉಪಾಧ್ಯಕ್ಷೆ ಮಮತಾ ದಿವಾಕರ್,ಗ್ರಾ.ಪಂ.ಅಧ್ಯಕ್ಷರಾದ ಅಬ್ದುಲ್ ಮಜೀದ್, ಶಂಷಾದ್ ಶುಕೂರ್, ಮಾಜೀ ಅಧ್ಯಕ್ಷ ಬಿ.ಮೊಹಮ್ಮದ್ ಕುಂಞ, ಕಲ್ಲೂರು ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಇಬ್ರಾಹಿಂ ಹಾಜೀ ಕಲ್ಲೂರು, ಕಾಂಗ್ರೆಸ್ ನೇತಾರರಾದ ಸದಾಶಿವ ಕೆ., ಎಸ್.ಅಬ್ದುಲ್ ಖಾದರ್, ಅಝೀಝ್ ಕುಂಜತ್ತೂರು, ಹಮೀದ್ ಕಣಿಯೂರು, ಶರೀಫ್ ಅರಿಬೈಲು, ಗೋಡ್ವಿನ್ ಡಿ.ಸೋಜ, ರಿಯಾಝ್ ಮೊಗ್ರಾಲ್, ಬ್ಲಡ್ ಡೋನಸರ್್ ಮಂಗಳೂರಿನ ಸಿದ್ದೀಕ್ ಮಂಜೇಶ್ವರ, ನವಾಝ್, ಮುಸ್ತಫಾ ಕೆ.ಸಿ.ರೋಡ್ ಮುಂತಾದವರು ಉಪಸ್ಥಿತರಿದ್ದರು. ಆರಿಫ್ ಮಚ್ಚಂಪಾಡಿ ಸ್ವಾಗತಿಸಿ, ಇಕ್ಬಾಲ್ ಕಳಿಯೂರು ವಂದಿಸಿದರು. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರು ಶಿಬಿರಕ್ಕೆ ನೇತೃತ್ವ ನೀಡಿದರು.
   


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries