HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ರಾಷ್ಟ್ರಧ್ವಜ ಹಾರಿಸದ್ದಕ್ಕೆ ಕಾರಣ ಗೊತ್ತೇ...
     ಕುಂಬಳೆ: ಕಳೆದ ಗಣತಂತ್ರ ದಿನದಂದು ಕುಂಬಳೆ ಕೃಷಿ ಭವನ ಕಾಯರ್ಾಲಯದಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಸದಿರುವ ಘಟನೆ ನಡೆದಿದ್ದು, ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರಾದ ಬಿ.ಸುಬ್ರಹ್ಮಣ್ಯ ನಾಯಕ್ ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಕೇಳಿದ ಪ್ರಶ್ನೆಗಳಿಗಳಿಗೆ ಕುಂಬಳೆ ಕೃಷಿ ಭವನದ ಅಧಿಕಾರಿ ಅಸಂಬದ್ದ ಹೇಳಿಕೆ ನೀಡಿರುವುದು ಬೆಳಕಿಗೆ ಬಂದಿದೆ.
   ಕುಂಬಳೆ ಕೃಷಿ ಭವನ ಕಚೇರಿ ಸಹಿತ ಜಿಲ್ಲೆಯ ಬಹುತೇಕ ಕೃಷಿ ಭವನಗಳಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಲು ಧ್ವಜ ಸ್ತಂಭವನ್ನೇ ಸ್ಥಾಪಿಸಿರುವುದು ಕಂಡುಬರುತ್ತಿಲ್ಲ. ಹೆಚ್ಚಿನ ಕಚೇರಿಗಳಲ್ಲಿ ರಾಷ್ಟ್ರೀಯ ದಿನಾಚರಣೆಗಳಂದು ರಾಷ್ಟ್ರ ಧ್ವಜವನ್ನು ಕಿಟಕಿ ಅಥವಾ ಕಟ್ಟಡದ ಮೇಲ್ಚಾವಣಿಯಲ್ಲಿ ನೇತು ಹಾಕಿ ಧ್ವಜಾರೋಹಣಗೈಯ್ಯುವುದು ಕಂಡುಬರುತ್ತಿದ್ದು, ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು ಕುಂಬಳೆ ಕೃಷಿ ಭವನ ಕಚೇರಿಯಲ್ಲಿ ಕಿಟಕಿಯ ಮೇಲ್ಬದಿ ಹಾರಿಸಲಾಗಿದ್ದ ರಾಷ್ಟ್ರ ಧ್ವಜ ಬಳಿಕ ತಲೆ ಕೆಳಗಾಗಿ ಸುದ್ದಿಯಾಗಿತ್ತು. ಈ ಬಗ್ಗೆ ವಿವಿಧ ಮಾದ್ಯಮಗಳು ವರದಿ ಮಾಡಿದ್ದವು. ಆದರೆ ಈ ಬಾರಿ ಅಲ್ಲಿ ಧ್ವಜಾರೋಹಣಗೈಯ್ಯದೆ ಇರುವ ಬಗ್ಗೆ ಸಾಮಾಜಿಕ ಕಾರ್ಯಕತ ಸುಬ್ರಹ್ಮಣ್ಯ ನಾಯಕ್ ಮಾಹಿತಿ ಹಕ್ಕು ಕಾಯ್ದೆಯನ್ವಯ ಕಾರಣ ಕೇಳಿದ್ದರು.
   ಪ್ರಶ್ನೆಗೆ ಉತ್ತರಿಸಿರುವ ಅಧಿಕಾರಿಗಳು ರಾಷ್ಟ್ರ ಧ್ವಜ ಹಾರಿಸಲು ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ಗಣರಾಜ್ಯ ದಿನದಂದು ಧ್ವಜಾರೋಹಣ ನಡೆಸಿಲ್ಲವೆಂಬ ಬಾಲಿಶ ಹೇಳೀಕೆ ನೀಡಿದ್ದಾರೆ. ಮೇಲಧಿಕಾರಿಗಳು ಕೃಷಿ ಭವನದಲ್ಲಿ ಧ್ವಜಸ್ತಂಭ ನಿಮರ್ಿಸಲು ಯಾವುದೇ ಅನುದಾನ ನೀಡದಿರುವುದರಿಂದ ಸೂಕ್ತ ವ್ಯವಸ್ಥೆ ಇಲ್ಲದೆ ಧ್ವಜಾರೋಹಣ ನಡೆಸಿಲ್ಲ ಎಂದು ಉತ್ತರಿಸಲಾಗಿದೆ.
   ಜಿಲ್ಲೆಯ ಬಹುತೇಕ ಗ್ರಾ.ಪಂ. ಗಳಲ್ಲಿ 2003ರಲ್ಲಿ ಕೃಷಿ ಭವನಗಳು ಅಸ್ತಿತ್ವಕ್ಕೆ ಬಂದಿದ್ದು, ರಾಷ್ಟ್ರ ಧ್ವಜಾರೋಹಣ ಸ್ತಂಭ ಎಲ್ಲಿಯೂ ನಿಮರ್ಿಸಲಾಗಿಲ್ಲ. ಸರಕಾರದ ಕೃಷಿ ಇಲಾಖೆಯ ವಿಭಾಗವಾದ ಕೃಷಿ ಭವನಗಳ ಮೂಲಕ ಪ್ರತಿವರ್ಷ ಲಕ್ಷಾಂತರ ರೂ.ಗಳನ್ನು ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಬಳಸಲಾಗುತ್ತಿದ್ದರೂ ಧ್ವಜ ಸ್ತಂಭಗಳನ್ನು ನಿಮರ್ಿಸಲು ನಯಾ ಪೈಸೆ ನಿಧಿ ಮೀಸಲಿರಿಸದಿರುವುದು ಅಧಿಕಾರಿಗಳ ಮೌಡ್ಯತೆಗೆ ಸಾಕ್ಷಿಯಾಗಿದೆ.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries