HEALTH TIPS

No title

                ಇಂದಿನಿಂದ ಬಸ್ ಪ್ರಯಾಣ ದರ ಹೆಚ್ಚಳ ಜಾರಿ
    ಕಾಸರಗೋಡು: ರಾಜ್ಯದಲ್ಲಿ ಪರಿಷ್ಕೃತ ಬಸ್ ಪ್ರಯಾಣ ದರ ಮಾ.1 ರಿಂದ ಜಾರಿಗೆ ಬರಲಿದೆ. ಕನಿಷ್ಠ ಪ್ರಯಾಣ ದರ ಈಗಿನ 7 ರೂ.ನಿಂದ 8 ರೂ.ಗೇರಲಿದೆ. ಮಾತ್ರವಲ್ಲ ಕಿಲೋ ಮೀಟರ್ ದರದಲ್ಲೂ ಹೆಚ್ಚಳ ಉಂಟಾಗಲಿದೆ. ವಿದ್ಯಾಥರ್ಿಗಳ ಕನಿಷ್ಠ ಪ್ರಯಾಣ ದರದಲ್ಲಿ ಹೆಚ್ಚಳವಾಗಿಲ್ಲ. ಆದರೆ ಇದೇ ಸಂದರ್ಭದಲ್ಲಿ ವಿದ್ಯಾಥರ್ಿಗಳ ಕಿಲೋ ಮೀಟರ್ ಪ್ರಯಾಣ ದರದಲ್ಲಿ ಶೇ.25 ರಷ್ಟು ಹೆಚ್ಚಳ ಉಂಟಾಗಲಿದೆ.
   ವಿದ್ಯಾಥರ್ಿಗಳ ಪ್ರಯಾಣ ದರ ಹೆಚ್ಚಿಸಬೇಕು. ಮತ್ತಿತರ ಹಲವು ಬೇಡಿಕೆಗಳನ್ನು ಮುಂದಿರಿಸಿಕೊಂಡು ಖಾಸಗಿ ಬಸ್ ಮಾಲಕರ ಸಂಘಟನೆಗಳು ಅನಿದರ್ಿಷ್ಟಾವಧಿ ಮುಷ್ಕರ ನಡೆಸಿದ್ದವು. ಅವರ ಬೇಡಿಕೆಗಳನ್ನು ಸರಕಾರ ಅಂಗೀಕರಿಸಿರಲಿಲ್ಲ.  ಜನ್ರಂ, ಲೋಫ್ಲೋರ್, ಎ.ಸಿ. ನೋನ್ ಎ.ಸಿ., ಸೂಪರ್ ಏರ್ ಎಕ್ಸ್ಪ್ರೆಸ್ , ಮಲ್ಟಿ ಆ್ಯಕ್ಸಿಲ್ ಸ್ಕಾನಿಯ ಮತ್ತು ವೋಲ್ವೋ ಬಸ್ಗಳ ದರ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀಮರ್ಾನಿಸಿದೆ. ಇವುಗಳ ಪ್ರಯಾಣ ದರ 8 ರೂ.ನಿಂದ 10 ರೂ.ಗೇರಿಸಲಾಗಿದೆ. ಇವುಗಳ ಕಿಲೋ ಮೀಟರ್ ದರವನ್ನು 70 ಪೈಸೆಯಿಂದ 80 ಕ್ಕೇರಿಸಲಾಗಿದೆ. ಕನಿಷ್ಠ ದರದಲ್ಲಿ ಐದು ಕಿಲೋ ಮೀಟರ್ ದೂರ ಸಂಚರಿಸಬಹುದು.
   ಲೋಫ್ಲೋರ್ ಎ.ಸಿ. ಬಸ್ಗಳ ಕನಿಷ್ಠ ಪ್ರಯಾಣ ದರವನ್ನು 15 ರೂ.ನಿಂದ 20 ರೂ.ಗೇರಿಸಿದೆ. 15 ರೂ.ಗಿಂತ ಹೆಚ್ಚು ಟಿಕೆಟ್ಗೆ ಸೆಸ್ ಹೇರಲಾಗುತ್ತಿತ್ತು. ಅದರಿಂದಾಗಿ 21 ರೂ. ನೀಡಬೇಕಾಗಿ ಬರಲಿದೆ. ಕಿ.ಮೀ. ದರವನ್ನು 1.50 ರೂ.ಗೇರಿಸಲಾಗಿದೆ. ದೀರ್ಘ ದೂರ ಸೇವೆ ನಡೆಸುವ ಮಲ್ಟಿ ಆ್ಯಕ್ಸಿಸ್ ಸ್ಕಾನಿಯ ಮತ್ತು ವಾಲ್ವೋ ಬಸ್ಗಳ ಕನಿಷ್ಠ ಪ್ರಯಾಣ ದರವನ್ನು 80 ರೂ. ಆಗಿ ಹೆಚ್ಚಿಸಲಾಗಿದೆ. ಈ ಕನಿಷ್ಠ ದರದಲ್ಲಿ 20 ಕಿ.ಮೀ. ಪ್ರಯಾಣಿಸಬಹುದು. ಅದೇ ರೀತಿ ಇಂತಹ ಬಸ್ಗಳ ಕಿಲೋ ಮೀಟರ್ ದರವನ್ನು 1.91 ನಿಂದ 2 ರೂ. ಗೇರಿಸಲಾಗಿದೆ. ಸೂಪರ್ ಏರ್ ಎಕ್ಸ್ಪ್ರೆಸ್ ಬಸ್ಗಳ ಕನಿಷ್ಠ ಪ್ರಯಾಣ ದರವನ್ನು 25 ರೂ. ನಿಂದ 28 ರೂ.ಗೇರಿಸಲಾಗಿದೆ. ಈ ದರದಲ್ಲಿ 10 ಕಿ.ಮೀ. ಪ್ರಯಾಣಿಸಬಹುದು. ಕಿ.ಮೀ. ದರವನ್ನು 85 ಪೈಸೆಯಿಂದ 93 ಪೈಸೆಗೇರಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries