HEALTH TIPS

No title

ವಿಷಯುಕ್ತ ಆಹಾರ ಪದಾರ್ಥಗಳನ್ನು ತಡೆಯಲು ಹೊಸ ಅಪ್ಲಿಕೇಷನಿನೊಂದಿಗೆ ಸಜ್ಜಾದ ವಿದ್ಯಾಥರ್ಿ
    ಮಂಜೇಶ್ವರ: ರೈತರಿಗೆ ಆತ್ಮ ಸ್ಥೈರ್ಯವನ್ನು ನೀಡುವ ನಿಟ್ಟಿನಲ್ಲಿ  ದೇರಳ ಕಟ್ಟೆಯಲ್ಲಿ ಕಲಿಯುತ್ತಿರುವ ವಿದ್ಯಾಥರ್ಿಯೊಬ್ಬ ಮಂಜೇಶ್ವರ ಹಾಗೂ ಮಂಗಲ್ಪಾಡಿ ಗ್ರಾ. ಪಂಚಾಯಯತು ವ್ಯಾಪ್ತಿಯಲ್ಲಿ  ವಿಷಯುಕ್ತ ಆಹಾರ ಪದಾರ್ಥಗಳಿಗೆ ನಾಂದಿ ಹಾಡಿ ವಿಷಮುಕ್ತ ತರಕಾರಿಗಳನ್ನು ಮಾರುಕಟ್ಟೆಗೆ ಹಾಗೂ ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಗ್ರಾಹಕರು ಮನೆಯಲ್ಲಿಯೇ ಕುಳಿತು ಆನ್ ಲೈನ್ ಮೂಲಕ ಗೃಹ ಉಪಯೋಗ ಅಹಾರ ಪದಾರ್ಥ ಸೇರಿದಂತೆ ಮಿಕ್ಕ ಸಾಮಾಗ್ರಿಗಳನ್ನು ಖರೀದಿ ಮಾಡಲು ಹೊಸ ಆಪ್ ಒಂದನ್ನು ತಯಾರಿ ಮಾಡಿದ್ದಾನೆ.
   2017 ನವಂಬರ್ 5 ರಂದು ತಯಾರಿ ಮಾಡಿರುವ ಈ ಆಪ್ನಲ್ಲಿ ಈಗಾಗಲೇ ಈ ಪ್ರದೇಶದ ಹಲವರು ಪ್ರಯೋಜನ ಪಡೆದಿರುವುದಾಗಿ ವಿದ್ಯಾಥರ್ಿ ಹಾಗೂ ಆತನ ಸಹೋದ್ಯೋಗಿಗಳು ಮಂಜೇಶ್ವರ ಪ್ರೆಸ್ ಕ್ಲಬ್ಬಿನ ಸುದ್ದಿ ಗೋಷ್ಟಿಯಲ್ಲಿ ತಿಳಿಸಿದ್ದಾರೆ.
  ಅವಲೋನ್ ಆನ್ ಲೈನ್ ಸ್ಟೋರ್ ಎಂಬ ಈ ಹೊಸ ಆಪ್ ನಲ್ಲಿ ಸ್ಥಳೀಯರಿಗೆ ಅನುಕೂಲವಾಗುವ ರೀತಿಯಲ್ಲಿ ಈಗಾಗಲೇ 150 ಕ್ಕಿಂತ ಅಧಿಕ ಸಾಮಾಗ್ರಿಗಳು ಲಭಿಸುವುದಾಗಿ ಅವರು ತಿಳಿಸಿರುವರು. ಮೊಬೈಲಿನ ಪ್ಲೇ ಸ್ಟೋರಿನಲ್ಲಿ ಈ ಆಪ್ ಲಭ್ಯವಿದೆ.
  ಆಪ್ ನಲ್ಲಿ  ಮುಖ್ಯವಾಗಿ ಧಾನ್ಯಗಳು, ತರಕಾರಿ, ಮಾಂಸ ಹಾಗೂ ಅಡುಗೆಗೆ ಬೇಕಾಗುವ ಸಾಮಾಗ್ರಿಗಳು ಲಭ್ಯವಿದೆ. ಜೊತೆಯಾಗಿ ನೇರವಾಗಿ ಖರೀದಿಸುವುದಕ್ಕಿಂದ ಕಡಿಮೆ ದರದಲ್ಲಿ ಮನೆ ಬಾಗಿಲಿಗೆ ಉಚಿತವಾಗಿ ಲಭಿಸುವ ರೀತಿಯಲ್ಲಿ ಕಾರ್ಯವ್ಯಾಪ್ತಿಯನ್ನು ಜೋಡಿಸಲಾಗಿದೆ.
   ರೈತರಿಗೆ ಮದ್ಯವತರ್ಿಗಳಿಲ್ಲದೆ ನೇರವಾಗಿ ಗ್ರಾಹಕನಿಗೆ ಜೈವಿಕ ತರಕಾರಿ ಹಾಗೂ ಇತರ ಸಾಮಾಗ್ರಿಗಳನ್ನು ನೇರವಾಗಿ ಮಾರಾಟ ಮಾಡುವ ವಿಧಾನ ಈ ಆಪ್ ನಲ್ಲಿ ಅಳವಡಿಸಲಾಗಿದೆ. ಈಗಾಗಲೇ ಹಲವು ಆಪ್ ಗಳು ಬಂದಿದ್ದರೂ ಗ್ರಾಮೀಣ ಪ್ರದೆಶಗಳನ್ನು ಕೇಂದ್ರೀಕರಿಸಿ ಅವರ ಪರಿಚಯವಿರುವ ಮಾರುಕಟ್ಟೆಯಿಂದಲೇ  ಮನೆ ಬಾಗಿಲಿಗೆ ಸಾಮಾಗ್ರಿಗಳನ್ನು ಪಡೆದುಕೊಳ್ಳುವ ಆಪ್ ಗಳು ವಿರಳ ಎಂದೇ ಹೇಳಬಹುದಾಗಿದೆ. ದೇರಳ ಕಟ್ಟೆಯ ಪಿ ಎ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾಥರ್ಿಯಾಗಿರುವ ಅಬೂನಾಸರ್ ನೊಂದಿಗೆ ಈಗಾಗಲೇ 12 ಮಂದಿ ಕೈ ಜೋಡಿಸಿಕೊಂಡಿದ್ದಾರೆ.
ಪತ್ರಿಕಾ ಗೋಷ್ಟಿಯಲ್ಲಿ ಅಬೂನಾಸರ್, ತೌಸೀಫ್ ಹಾಗೂ ಅಸ್ಪಾಕ್ ಪೊಸೋಟು ಉಪಸ್ಥಿತರಿದ್ದರು.
             



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries