HEALTH TIPS

No title

             ಆಲಂಪಾಡಿ ವೆಂಕಟೇಶ ಶ್ಯಾನುಭೋಗ್ ಸ್ಮಾರಕ ಸಂಗೀತೋತ್ಸವ
                 ಸಂಗೀತದಿಂದ ಗೌರವ ವೃದ್ಧಿ : ಪಿ.ನಿತ್ಯಾನಂದ ರಾವ್
    ಕಾಸರಗೋಡು: ಸಂಗೀತದ ಮೂಲಕ ಸಮಾಜದ ಬಂಧುಗಳ, ಹಿರಿಯರ ಬಗೆಗೆ ಇರುವ ಗೌರವ ವೃದ್ಧಿಸುತ್ತದೆ ಎಂದು ಮಣಿಕೃಷ್ಣ ಸ್ವಾಮಿ ಅಕಾಡೆಮಿ ಕಾರ್ಯದಶರ್ಿ ಪಿ.ನಿತ್ಯಾನಂದ ರಾವ್ ಅವರು ಹೇಳಿದರು.
   ಆಲಂಪಾಡಿ ವೆಂಕಟೇಶ ಶ್ಯಾನು`ೋಗ್ ಸ್ಮಾರಕ ಸಂಗೀತೋತ್ಸವ ಎಸ್.ವಿ.ಟಿ. ರಸ್ತೆಯ `ವೆಂಕಟೇಶ' ನಿಲಯದಲ್ಲಿ ಆಯೋಜಿಸಿದ ಆಲಂಪಾಡಿ ವೆಂಕಟೇಶ ಶ್ಯಾನು`ೋಗ್ ಸ್ಮಾರಕ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
   ಇಂದು ಮಕ್ಕಳನ್ನು ಅಂಕದ ಪಂಜರದೊಳಗೆ ಕಟ್ಟಿ ಹಾಕಿದ್ದೇವೆ. ಇದರಿಂದ ಮಕ್ಕಳಲ್ಲಿ  ಹುದುಗಿರುವ ಸೃಜನಾತ್ಮಕ ಪ್ರತಿಭೆಗಳು ಕಮರಿ ಹೋಗುತ್ತಿದೆ ಎಂದ ಅವರು ಈ ಕಾರಣದಿಂದ ಹಿರಿಯರನ್ನು ಮರೆಯುವ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದ್ದೇವೆ ಎಂದರು. ಕನರ್ಾಟಕದಿಂದ ಕಾಸರಗೋಡು ಹೊರಗಿದ್ದರೂ ಭಾವನಾತ್ಮಕ ಪ್ರಪಂಚದಲ್ಲಿ ನಾವೆಲ್ಲ ಒಟ್ಟಿಗಿದ್ದೇವೆ ಎಂದು ಹೇಳಿದರು. ಇಲ್ಲಿ ನಡೆಸುತ್ತಿರುವ ಸಂಗೀತೋತ್ಸವ ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದರು.
   ಕಾರ್ಯಕ್ರಮವನ್ನು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಟ್ರಸ್ಟಿ ಕೆ.ಜಿ.ಶ್ಯಾನುಭೋಗ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಸ್ಕೃತ ವಿದ್ವಾಂಸ, ಡಾ.ಬಳ್ಳಪದವು ಮಾಧವ ಉಪಾಧ್ಯಾಯ ಅವರನ್ನು ಈ ಸಂದರ್ಭದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸುಕುಮಾರ ಆಲಂಪಾಡಿ, ಮೃದಂಗ ವಿದ್ವಾನ್ ಡಾ|ಶಂಕರರಾಜ್ ಉಪಸ್ಥಿತರಿದ್ದರು. 
  ಆ ಬಳಿಕ ವಿದ್ವಾನ್ ವೆಲ್ಲಿನೆಜಿ ಸುಬ್ರಹ್ಮಣಿಯನ್ ಅವರಿಂದ ಸಂಗೀತ ಕಚೇರಿ ನಡೆಯಿತು. ಸಂಗೀತದಲ್ಲಿ ಯುವ ಪ್ರತಿಭೆ ಭಾರದ್ವಾಜ್ ಜೊತೆಗೂಡಿದರು. ವಯಲಿನ್ನಲ್ಲಿ ವಿದ್ವಾನ್ ಮನ್ಹರ್ ರಂಜಿತ್, ಮೃದಂಗದಲ್ಲಿ ವಿದ್ವಾನ್ ಡಾ.ಶಂಕರರಾಜ್, ಘಟಂನಲ್ಲಿ ವಿದ್ವಾನ್ ಎಲಂಕುಲಂ ದೀಪು ಸಹಕರಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries