HEALTH TIPS

No title

                   ಕಾಸರಗೋಡಿಗೆ ನಿಕಟರಾಗಿದ್ದ ಕಂಚಿ ಶ್ರೀಶಂಕರ ಪೀಠಾಧಿಪತಿ ಅಸ್ತಂಗತ
                 ಕಂಚಿ ಕಾಮಕೋಟಿ ಪೀಠದ ಪೀಠಾಧಿಪತಿ ಜಯೇಂದ್ರ ಸರಸ್ವತಿ ನಿಧನ
     ಚೆನ್ನೈ: ಕಂಚಿ ಕಾಮಕೋಟಿ ಪೀಠದ ಪೀಠಾಧಿಪತಿ ಜಯೇಂದ್ರ ಸರಸ್ವತಿ ಅವರು ಬುಧವಾರ ಬೆಳಗ್ಗೆ ನಿಧನರಾದರು.
   ದೀರ್ಘಕಾಲಿಕ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಜಯೇಂದ್ರ ಸರಸ್ವತಿ ಅವರು ಇಂದು ಬೆಳಗ್ಗೆ ನಿಧನರಾಗಿದ್ದು, ಅವರಿಗೆ 82 ವರ್ಷ ವಯಸ್ಸಾಗಿತ್ತು. ಕಾಂಚಿಪುರನಲ್ಲಿರುವ ಕಂಚಿ ಕಾಮಕೋಟಿ ಮಠದ 69ನೇ ಶಂಕರಾಚಾರ್ಯ ಗುರುಗಳಾಗಿದ್ದರು.
   ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳು ಚೆನ್ನೈನ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಂಚಿ ಕಾಮಕೋಟಿ ಪೀಠದ 69ನೇ ಪೀಠಾಧಿಪತಿಗಳಾಗಿದ್ದ ಜಯೇಂದ್ರ ಸರಸ್ವತಿ ಸ್ವಾಮೀಜಿಯನ್ನು 1954ರ ಮಾಚರ್್ 22ರಂದು ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಶಿಷ್ಯರನ್ನಾಗಿ ಸ್ವೀಕರಿಸಿದ್ದರು. 1994ರಲ್ಲಿ ಹಿರಿಯ ಗುರುಗಳು ಮುಕ್ತರಾದ ನಂತರ ಪೀಠದ ಸಂಪೂರ್ಣ ಹೊಣೆ ಹೊತ್ತಿದ್ದರು.
   ತಂಜಾವೂರು ಜಿಲ್ಲೆಯ ಇರುಲ್ನಕ್ಕಿ ಎಂಬಲ್ಲಿ 1935ರ ಜುಲೈ 18ರಂದು ಜನಿಸಿದ್ದ ಶ್ರೀಗಳ ಪೂವರ್ಾಶ್ರಮದ ಹೆಸರು ಸುಬ್ರಮಣಿಯಂ. ಮಹಾದೇವ ಅಯ್ಯರ್- ಸರಸ್ವತಿ ದಂಪತಿಯ ಹಿರಿಯ ಪುತ್ರರಾಗಿರುವ ಅವರು, ವಿಲ್ಲುಪುರಂ ಎಲಿಮೆಂಟರಿ ಶಾಲೆಯಲ್ಲಿ ವ್ಯಾಸಂಗ ಮಾಡಿದರು.
    1943ರ ಮೇ 9ರಂದು ಬ್ರಹ್ಮೋಪದೇಶ ಪಡೆದ ಶ್ರೀಗಳು, ಶಂಕರಾಚಾರ್ಯ ಮಠದ ಜಗದ್ಗುರು ವಿದ್ಯಾಸಂಸ್ಥಾನದಲ್ಲಿ ವೇದಾಧ್ಯಯನ ಮಾಡಿ 1948ರ ವೇಳೆಗೆ ಋಗ್ವೇದ ಸಂಹಿತಾ ಅಧ್ಯಯನ ಪೂರ್ಣಗೊಳಿಸಿದ್ದರು.
    ವಿವಾದಗಳ ಮಳೆ:
    ಮಠವನ್ನು ಧಾಮರ್ಿಕ, ಆಧ್ಯಾತ್ಮಿಕತೆಯ ಜೊತೆಗೆ ಸಮಾಜ ಸೇವೆಯ ಹೊಸ ಮುಖದತ್ತ 1994ರಲ್ಲಿ ತೆರೆಸಿಕೊಳ್ಳಲು ಕಾರಣರಾದ ಶ್ರೀಗಳು ಬಳಿಕ ವಿವಾದಗಳ ಸುರಿಮಳೆಗಳಲ್ಲಿ ಸಿಲುಕಿಕೊಂಡರು. 2004ರಲ್ಲಿ ಕಂಚಿಪುರಂ ವರದರಾಜ ಪೆರುಮಾಳ್ ಕ್ಷೇತ್ರದ ಪ್ರಬಂಧಕ ಎ.ಶಂಕರರಮಣನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶ್ರೀಗಳನ್ನು 2004ರಲ್ಲಿ ಬಂಧಿಸಲಾಗಿತ್ತು. ಬಿಕ 2 ತಿಂಗಳುಗಳ ಕಾಲ ನ್ಯಾಯಾಂಗ ಬಂಧನದಲಿದ್ದರು. 213ರಲ್ಲಿ ಎಲ್ಲಾ ದೂರುಗಳಿಂದ ದೋಷಮುಕ್ತರಾಗಿ ಹೊರಬಂದಿದ್ದರು.
   ಗಡಿನಾಡಿನ ನಂಟು:
   ಕಂಚಿ ಶ್ರೀಗಳಿಗೂ ಗಡಿನಾಡು ಕಾಸರಗೋಡಿಗೂ ಅವಿನಾಭವ ನಂಟು ಗುರುತಿಸಲ್ಪಟ್ಟಿತ್ತು. ಜಿಲ್ಲೆಯ ಪ್ರಸಿದ್ದ ಕ್ಷೇತ್ರಗಳಾದ ಮಧೂರು ಶ್ರೀಕ್ಷೇತ್ರ, ಅನಂತಪುರ ಕ್ಷೇತ್ರ,   ಮಲ್ಲ ಶ್ರೀದುಗರ್ಾಪರಮೇಶ್ವರಿ ಕ್ಷೇತ್ರ, ಸಜಂಕಿಲ ಆವಳ ಶ್ರೀದುಗರ್ಾಪರಮೇಶ್ವರಿ ಕ್ಷೇತ್ರ, ಎಡನೀರು ಮಠ ಸಹಿತ ವಿವಿಧೆಡೆಗಳಿಗೆ ಭೇಟಿ ನಿಡಿದ್ದರು. ಕಂಚಿ ಶ್ರೀಗಳ ನೇತೃತ್ವದಲ್ಲಿ ನೀಚರ್ಾಲು ಸಮೀಪದ ಬೇಳ ಕುಮಾರಮಂಗಲದಲ್ಲಿ  2001ರಲ್ಲಿ ಕಂಚಿ ಕಾಮಕೋಟಿ ವೇದ ವಿದ್ಯಾಲಯವನ್ನು ಆರಂಭಿಸಿ ನಡೆಸುತ್ತಿದ್ದಾರೆ. ಮುಜುಂಗಾವು ಶ್ರೀ ಭಾರತೀ ನೇತ್ರಾಲಯವನ್ನು ಶ್ರೀರಾಘವೇಶ್ವರ ಶ್ರೀಗಳೊಂದಿಗೆ ಲೋಕಾರ್ಪಣೆಗೊಳಿಸಿದ್ದರು.  ಅನಂತಪುರ ಶ್ರೀಪದ್ಮನಾಭ ಕ್ಷೇತ್ರದ ಬಗ್ಗೆ ಅತ್ಯಂತ ಕಳಕಳಿಯ ವಿಶ್ವಾಸಹೊಂದಿದ್ದ ಶ್ರೀಗಳು ದಶಕಗಳ ಹಿಂದೆ ಅಲ್ಲಿಯ ಬ್ರಹ್ಮಕಲಶೋತ್ಸವದ ಸಂದರ್ಭ ವಿಶೇಷ ಮುತುವಜರ್ಿ ವಹಿಸಿ ಕಡುಶರ್ಕರ ವಿಗ್ರಹ ಸ್ಥಾಪನೆಗೆ ಕಾರಣರಾಗಿದ್ದರು. ರಾಜ್ಯದ ಪ್ರಸಿದ್ದ ಕ್ಷೇತ್ರ ಗುರುವಾಯೂರು ಶ್ರೀಕ್ಷೇತ್ರಕ್ಕೆ ಆಥರ್ಿಕ ನೆರವು ಸಹಿತ ವಿವಿಧ ಹಂತಗಳ ಸಹಕಾರ ನೀಡಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries