HEALTH TIPS

No title

     ಮುಳ್ಳೇರಿಯಾದಲ್ಲಿ ಮಾಚರ್್ 31 ಹಾಗೂ ಎಪ್ರಿಲ್ 1 ರಂದು ಕ.ಸಾ.ಪ ನೇತೃತ್ವದಲ್ಲಿ ಜರಗಲಿರುವ ಹನ್ನೊಂದನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಣ್ಯರಿಗೆ ಸನ್ಮಾನ
  ಮುಳ್ಳೇರಿಯ: ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಪರಿಸರದಲ್ಲಿ ಮಾ.31 ಮತ್ತು ಏ.1 ರಂದು ನಡೆಯಲಿರುವ ಕಾಸರಗೋಡು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏ.1 ರಂದು ಅಪರಾಹ್ನ 3 ರಿಂದ ನಡೆಯಲಿರುವ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಜಿಲ್ಲೆಯ ವಿವಿಧ ರಂಗಗಳ ಹಿರಿಯ ಸಾಧಕರನ್ನು ಗೌರವಿಸಿ ಪ್ರಶಸ್ತಿ ಪ್ರಧಾನಗೈಯ್ಯಲಾಗುವುದು. ಸಮ್ಮೇಳನದ ಸವರ್ಾಧ್ಯಕ್ಷ ಡಾ.ನಾ.ಮೊಗಸಾಲೆಯವರ ಅಧ್ಯಕ್ಷತೆ ವಹಿಸುವರು. ಮತ್ತು ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.   
    ಬಳ್ಳಪದವು ಮಾಧವ ಉಪಾಧ್ಯಾಯ (ಸಾಹಿತ್ಯ, ವೈದಿಕ)
   ವೇ.ಮೂ ಬ್ರಹ್ಮಶ್ರೀ ವಾಸುದೇವ ಉಪಾಧ್ಯಾಯ-ದುಗರ್ಾಂಬಾ ದಂಪತಿಗಳ ಪುತ್ರನಾಗಿ 14-1-1928 ರಂದು ಜನಿಸಿದ ಇವರು ಅಗಲ್ಪಾಡಿ ದೇವಸ್ಥಾನದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು.ಪ್ರಾರಂಭಿಕ ವೇದ ಶಿಕ್ಷಣವನ್ನು ತೀರ್ಥರೂಪರಿಂದ ಪಡೆದು ಅಗಲ್ಪಾಡಿ ಹಾಗೂ ಉಕ್ಕಿನಡ್ಕ ವಸಿಷ್ಠಾಶ್ರಮ ಶಾಲೆಗಳಲ್ಲಿ ಸಂಸ್ಕೃತಾಭ್ಯಾಸ ನಡೆಸಿದರು. ತಲೇಕ ರಾಮಚಂದ್ರಭಟ್ಟರಿಂದ ವೇದ ಶಿಕ್ಷಣವನ್ನು ಪಡೆದು ತೀರ್ಥರೂಪರಿಂದ ಪೌರೋಹಿತ್ಯ ಮತ್ತು ತಾಂತ್ರಿಕ ವಿದ್ಯೆಗಳಲ್ಲಿ ಪರಿಣತಿ ಗಳಿಸಿಕೊಂಡರು. ನೀಚರ್ಾಲು ಮ.ಸಂ ಪಾಠಶಾಲೆಯಿಂದ ಮಧ್ಯಮಾ ಪ್ರೌಢ ಸಾಹಿತ್ಯ ಅಧ್ಯಯನ ಸಾಹಿತ್ಯ ಶಿರೋಮಣಿ ಪದವಿಗಳು ಪ್ರಾಪ್ತವಾದವು. ಮುಂದೆ ಶೃಂಗೇರಿ ಮಠದ ಬೆಂಗಳೂರು ಮಹಾಪಾಠಶಾಲೆಯಲ್ಲಿ  ಅನೇಕ ಮಂದಿ ಶ್ರೇಷ್ಠರಾದ ವಿದ್ವಾಂಸರ ಶಿಷ್ಯನಾಗಿ  ಅದ್ವೈತ, ವೇದಾಂತ, ಮೀಮಾಂಸಾ ಶಾಸ್ತ್ರ, ಸಂಪೂರ್ಣ ವೇದಾಧ್ಯಯನ, ಕನರ್ಾಟಕ ಸಂಗೀತ ಮೊದಲಾದ ಶಾಸ್ತ್ರಗಳಲ್ಲಿ ಪಾಂಡಿತ್ಯವನ್ನು ಸಂಪಾದಿಸಿದರು. 1956 ರಿಂದ 1962ರ ವರೆಗೆ ಅಗಲ್ಪಾಡಿ ಅನ್ನಪೂಣರ್ೇಶ್ವರಿ ಸಂಸ್ಕೃತ ಪ್ರೌಢಶಾಲೆಯಲ್ಲಿ ಸಂಸ್ಕೃತ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಕರಾಡಬ್ರಾಹ್ಮಣರ ನಾಲ್ಕುಮಠಗಳಲ್ಲಿ ನಡೆಯುವ ಎಲ್ಲ ತಾಂತ್ರಿಕ ಕಾರ್ಯಗಳನ್ನು ನಿರ್ವಹಿಸಿದ್ದಲ್ಲದೆ ನಾನಾ ಕಡೆ ನಡೆಯುವ ವೈದಿಕ ತಾಂತ್ರಿಕ ಪ್ರತಿಷ್ಠಾ ಕಮರ್ಾಂಗಗಳಲ್ಲಿ ಮುಂದಾಳುತ್ವವನ್ನು ವಹಿಸಿದ್ದಾರೆ. ಶೃಂಗೇರಿ ಮೊದಲಾದ ಮಹಾಕ್ಷೇತ್ರಗಳಲ್ಲಿ ನಡೆಯುವ ವಿವಿಧ ದೇವಕಾರ್ಯಗಳಲ್ಲಿ ಸಹಭಾಗಿತ್ವವಲ್ಲದೆ ಸಂಗೀತಾಧ್ಯಾಪನ ಹಾಗೂ ಕಚೇರಿಗಳ ಮೂಲಕ ಸಂಗೀತ ಸರಸ್ವತಿಯ ಆರಾಧನೆ ಕೂಡ ಇವರ ಕೈಂಕರ್ಯಗಳು. ಸಂಸ್ಕೃತದಲ್ಲಿ ಸುಪ್ರಭಾತವೇ ಮೊದಲಾದ 35ಕ್ಕೂ ಹೆಚ್ಚು ಕವಿತಾರಚನೆಗಳನ್ನು  ಮಾಡಿದ್ದಾರೆ.
ಈಚೆಗೆ ತಿರುಪತಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಶ್ರೀಯುತರಿಗೆ ಸಂದ ಗೌರವ ಪ್ರಶಸ್ತಿ ಸನ್ಮಾನಗಳು ಅಸಂಖ್ಯಾತ. ಮದರಾಸು ವಿ,ವಿ ಯಿಂದ ಸಾಹಿತ್ಯ ಶಿರೋಮಣಿ ಬಿರುದು, ಶೃಂಗೇರಿ ಜಗದ್ಗುರುಗಳಿಂದ ಅದ್ವೈತ ವೇದಾಂತಾಧ್ಯಯನದ ಬಗ್ಗೆ  ಪಂಡಿತ ಪ್ರವರ ಬಿರುದು ಇವುಗಳಲ್ಲಿ ಪ್ರಧಾನವಾದವುಗಳು.  ಶೃಂಗೇರಿ ಜಗದ್ಗುರುಗಳು, ಎಡನೀರು ಮಠಾಧೀಶರು, ರಾಮಚಂದ್ರಾಪುರ ಮಠಾಧಿಪತಿಗಳು,  ರಂಗಪ್ರಿಯ ಮಹಾದೇಶಿಕ ಶ್ರೀಗಳು, ಯಡತೊರೆ ಶ್ರೀಗಳು ಮೊದಲಾದ ಯೋಗಿವರ್ಯರಿಂದ ಸನ್ಮಾನಿತರಾದ ಭಾಗ್ಯ ಇವರದ್ದು. ಅಲ್ಲದೆ ರಾಜ್ಯ ಹೊರರಾಜ್ಯಗಳಲ್ಲಿ ನಾನಾ ಸಂಸ್ಥೆಗಳಿಂದ ಮಾನಪತ್ರ, ಸಂಭಾವನೆ ಸಮ್ಮಾನಗಳನ್ನು ಪಡೆದಿದ್ದಾರೆ.
     ಕೆ. ನಾರಾಯಣ ಗಟ್ಟಿ (ಕನ್ನಡ ಹೋರಾಟ)
 ಕುಂಬಳೆ ಸಮೀಪ ಮುಳಿ ಎಂಬಲ್ಲಿ ರೈತಕುಟುಂಬದ ಕೋಟಿಗಟ್ಟಿ- ಅಕ್ಕು ಗಟ್ಟಿ ದಂಪತಿಯ ಮಗನಾಗಿ 1936ರಲ್ಲಿ ಜನಿಸಿದ ಇವರು ಕುಂಬಳೆ ಬೋಡರ್ು ಹಿರಿಯ ಪ್ರಾಥಮಿಕಶಾಲೆ, ಮಂಗಳೂರು ಗಣಪತಿ ಪ್ರೌಢಶಾಲೆಗಳಲ್ಲಿ ಶಿಕ್ಷಣ ಪಡೆದು ಉರ್ವ ಕೆನರಾ ಪ್ರೌಢಶಾಲೆಯಲ್ಲಿ ಸೆಕೆಂಡರಿ ಗ್ರೇಡ್ ಶಿಕ್ಷಕ ತರಬೇತಿ ಪದವಿ ಗಳಿಸಿದರು. ಮಾಯಿಪ್ಪಾಡಿ ಶಿಕ್ಷಕ ತರಬೇತಿಶಾಲೆಯಲ್ಲಿ ಬುನಾದಿ ಶಿಕ್ಷಣದಲ್ಲಿ ಮರುತರಬೇತಿ ಪಡೆದರು.  ದ.ಕ ಜಿಲ್ಲಾ ಬೋಡರ್ಿನಲ್ಲಿ 1954ರಲ್ಲಿ ಅಧ್ಯಾಪಕ ವೃತ್ತಿಗೆ ಪದಾರ್ಪಣೆ ಗೈದು ಬೆಳ್ಳೂರು, ಸೂರಂಬೈಲು, ಕುಂಬಳೆಶಾಲೆಗಳಲ್ಲಿ ಅಧ್ಯಾಪಕನಾಗಿ ಸೇವೆಗೈದರು. ಖಾಸಗಿಯಾಗಿ ಅಧ್ಯಯನ ಮಾಡಿ ಕೇರಳ ವಿ ವಿ ಯಿಂದ ಬಿ.ಎ ಹಾಗೂ ಕನ್ನಡ ವಿದ್ವಾನ್ ಪದವಿಗಳಿಸಿ 1966-67ರಲ್ಲಿ ತಲಚೇರಿ ಸರಕಾರಿ ಶಿಕ್ಷಕ ತರಬೇತಿಶಾಲೆಯಿಂದ ಬಿ.ಎಡ್ ಪದವಿಯನ್ನು ಗಳಿಸಿದರು. ಪ್ರೌಢಶಾಲಾ ಅಧ್ಯಾಪಕನಾಗಿ ಭಡ್ತಿ ಹೊಂದಿ ಉದುಮ, ಕುಂಬಳೆ, ಅಡೂರು, ಮಂಗಲ್ಪಾಡಿ ಪ್ರೌಢಶಾಲೆಗಳಲ್ಲಿ ವೃತ್ತಿಜೀವನ ನಡೆಸಿ ಪಡ್ರೆ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯನಾಗಿ ಮುಂದುವರೆದು 1990ರಲ್ಲಿ ನಿವೃತ್ತಿ ಹೊಂದಿದರು.
    ವೃತ್ತಿಜೀವನದ ಪ್ರಾರಂಭದಿಂದಲೇ ಅಧ್ಯಾಪಕ ಸಂಘಟನೆಗಳಲ್ಲಿ ಸಕ್ರಿಯರಾಗಿ ಭಾಗವಹಿಸಿ ವಿವಿಧ ಸ್ಥಾನಗಳಲ್ಲಿ ಕಾರ್ಯನಿರ್ವಹಿಸಿ 1973ರಲ್ಲಿ ನಡೆದ ಚಾರಿತ್ರಕ ಮಹತ್ವದ  ಅಧ್ಯಾಪಕ ಎನ್ ಜಿ ಒ ಮುಷ್ಕರದಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದರು. ಬದುಕಿನ ಪೂವರ್ಾರ್ಧದಲ್ಲಿ ಈಜು, ಚಾರಣ, ಬೇಟೆ, ಕಂಬಳ, ಯಕ್ಷಗಾನ, ನಾಟಕ, ತಾಳಮದ್ದಳೆ, ಆಟೋಟ ಸ್ಪಧರ್ೆಗಳಲ್ಲಿ ಭಾಗವಹಿಸುವಿಕೆ ಇವರ ಹವ್ಯಾಸವಾಗಿತ್ತು. ನಿವೃತ್ತಿಯ ಬಳಿಕ ಭೂತಾರಾಧನೆ, ಕೃಷಿ. ಧಾಮರ್ಿಕ ಸಾಂಸ್ಕೃತಿಕ ಸಾಮಾಜಿಕ ಸಾಹಿತ್ಯಕ ಚಟುವಟಿಕೆಯೊಂದಿಗೆ ಪಿಂಚಣಿಗಾರರ ಸಂಘಟನೆಯಲ್ಲಿ  ಭಾಗವಹಿಸುತ್ತಿರುವ ಇವರದ್ದು ವೈಚಾರಿಕವಾದ ಚಿಂತನಶೀಲ ಪ್ರವೃತ್ತಿ.
ಅಧ್ಯಾಪಕರ ಪುನಶ್ಚೇತನ ಶಿಬಿರಗಳಲ್ಲಿ ಹಾಗೂ ಪಠ್ಯ ಪುಸ್ತಕ ರಚನಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಲ್ಲದೆ, ಪಿ.ಎಸ್.ಸಿ ಪ್ರಶ್ನೆಪತ್ರಿಕೆ ತಯಾರಿಯ ಅನುಭವವೂ ಇವರಿಗಿದೆ, ಸನ್ಮಾನ ಗ್ರಂಥಗಳ ಸ್ಮರಣ ಸಂಚಿಕೆಗಳ ಸಂಪಾದನೆ, ವಿಚಾರಗೋ?ಷ್ಠಿಗಳಲ್ಲಿ ಪ್ರಬಂಧ ಮಂಡನೆ, ಆಕಾಶವಾಣಿಯಲ್ಲಿ ಚಿಂತನೆ ಇವರ ಬಹುಮುಖ ಪ್ರತಿಭೆಗೆ ನಿದರ್ಶನಗಳಾಗಿವೆ. ಮಹಾಜನ ಆಯೋಗಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ಪಾತ್ರವಹಿಸಿದ ಇವರು ಕಾಸರಗೋಡಿನ ಕನ್ನಡ ಹೋರಾಟಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತ ಕನರ್ಾಟಕ ಸಮಿತಿಯಲ್ಲೂ ಕರ್ತವ್ಯ ನಿರ್ವಹಿಸಿದ್ದರು.  ಪ್ರಕೃತ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಕುಂಬಳೆಯಲ್ಲಿ ನಿವೃತ್ತಜೀವನ ಸಾಗಿಸುತ್ತಿದ್ದಾರೆ.
     ಕೀರಿಕ್ಕಾಡು ವನಮಾಲಾ ಕೇಶವ ಭಟ್ ಬನಾರಿ, ದೇಲಂಪಾಡಿ. (ಸಂಘಟನೆ, ಸಾಹಿತ್ಯ)
   ಕಾಸರಗೋಡಿನ ಏತಡ್ಕ ಸಮೀಪದ ಕೀರಿಕ್ಕಾಡಿನಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ ಪರಮೇಶ್ವರಿ ಅಮ್ಮ ದಂಪತಿಗಳ ಪುತ್ರನಾಗಿ 7-5-1937ರಲ್ಲಿ ಜನಿಸಿದ ಇವರು ದೇಲಂಪಾಡಿ, ಅಡ್ಯನಡ್ಕ, ಮಾಯಿಪ್ಪಾಡಿಗಳಲ್ಲಿ ಶಿಕ್ಷಣ ಮುಗಿಸಿ ಮಯ್ಯಾಳ ಶಾಲೆಯಲ್ಲಿ ಶಿಕ್ಷಕರಾಗಿ ಹತ್ತುವರ್ಷಕಾಲ ದುಡಿದು ಬಳಿಕ ಸ್ವಯಂ ನಿವೃತ್ತಿ ಪಡೆದರು. ತಮ್ಮ ಹದಿನೇಳನೇ ವಯಸ್ಸಿನಲ್ಲಿ `ಬದುಕಿಸಿದ ಚದುರೆ' ಎಂಬ ಕಾದಂಬರಿಯನ್ನು ಬರೆದು ಪ್ರಕಟಿಸಿದ ಇವರ ಹಲವಾರು ಲೇಖನ, ಚುಟುಕು, ಕವಿತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಬೆಳಕುಕಂಡಿವೆ. ನಡುಮನೆ ಜತ್ತಪ್ಪ ರೈಗಳಿಂದ ಭಾಗವತಿಕೆ ಅಭ್ಯಸಿಸಿ ಆಕಾಶವಾಣಿಯ ಸಹಿತ ಹಲವು ವೇದಿಕೆಗಳಲ್ಲಿ ಆಟ ಕೂಟಗಳಲ್ಲಿ ಹವ್ಯಾಸಿ ಭಾಗವತನಾಗಿ ಇಪ್ಪತ್ತು ವರ್ಷಗಳ ನಿರಂತರ ಸೇವೆಗೈದಿದ್ದಾರೆ. ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನಸಂಘದಲ್ಲಿ ಸುದೀರ್ಘಕಾಲ ಸಕ್ರಿಯವಾಗಿ ದುಡಿದ ಇವರು ಕಳೆದ ಮೂವತ್ತ ಒಂದು ವರ್ಷಗಳಿಂದ ಸಂಘದ ಅಧ್ಯಕ್ಷನಾಗಿ, ಕೀರಿಕ್ಕಾಡು ಅಧ್ಯಯನ ಕೇಂದ್ರದ ಬೆನ್ನೆಲುಬಾಗಿ ಸೇವೆ ಸಲ್ಲಿಸುತ್ತಿರುವರು. ಪ್ರಗತಿಪರ ಕೃಷಿಕರಾದ ಶ್ರೀಯುತರು ದೇಲಂಪಾಡಿ ಸೇವಾ ಸಹಕಾರಿಸಂಘದ ಅಧ್ಯಕ್ಷರಾಗಿದ್ದರಲ್ಲದೆ ಹಲವು ಸಾರ್ವಜನಿಕ ಸಂಘಸಂಸ್ಥೆಗಳಲ್ಲಿ, ಸಮಾಜಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಿದ ಅನುಭವವನ್ನು ಪಡೆದಿದ್ದಾರೆ. ಪತ್ರಿಕೆ- ಸಾಹಿತ್ಯಕೃತಿಗಳನ್ನು ಕೊಂಡು ಓದಿ ಸಂಗ್ರಹಿಸುವುದು, ಉದಯೋನ್ಮುಖ ಕವಿ ಕಲಾವಿದರನ್ನು ಪ್ರೋತ್ಸಾಹಿಸುವುದು ಮೊದಲಾದ ಸಾಹಿತ್ಯ ಪರಿಚಾರಿಕೆ ಕೂಡ ಇವರ ಹವ್ಯಾಸ. ಕೃಷಿ- ಸಾಹಿತ್ಯ- ಸಹಕಾರ ವಲಯಗಳಲ್ಲಿ ಅನೇಕ ಸನ್ಮಾನ ಗೌರವಗಳನ್ನು ಗಳಿಸಿದ ಇವರ ಸಹಸ್ರಚಂದ್ರದರ್ಶನ ಕಾರ್ಯಕ್ರಮವು ಇತ್ತೀಚೆಗೆ ಸ್ವಗೃಹದಲ್ಲಿ ನಡೆದಿದೆ. ಮಡದಿ: ವೆಂಕಟೇಶ್ವರಿಯಮ್ಮ. ಮಕ್ಕಳು: ವಿಷ್ಣು ಕೀತರ್ಿ, ಕುಮಾರ ಕೃಪ, ಕಿಶೋರ್, ಡಾ. ಅನ್ನಪೂಣರ್ೇಶ್ವರಿ ಹಾಗೂ ಕಾತ್ಯರ್ಾಯಿನಿ.
     ಮಹಾಬಲ ಶೆಟ್ಟಿ ಕೂಡ್ಲು (ಹರಿಕಥೆ)
  ದೇವಕೀತನಯ ಕೂಡ್ಲು ಎಂಬ ಹೆಸರಿನಿಂದ ಪ್ರಸಿದ್ಧರಾದ ಹರಿದಾಸ ಕೆ. ಮಹಾಬಲ ಶೆಟ್ಟಿಯವರು ಬಿ.ಎ. ಎಲ್ ಎಲ್ ಬಿ ಪದವೀಧರರು. ಬಳ್ಕೂರು ಗುತ್ತು ರಾಮಯ್ಯ ಶೆಟ್ಟಿ, ದೇವಕಿಯರ ಮಗನಾಗಿ ಕೂಡ್ಲು ಗ್ರಾಮದಲ್ಲಿ ತಾ 29-11-1944 ರಂದು ಜನಿಸಿದರು. ಅಡ್ಕತ್ತಬಯಲು ಕಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ನಗರದ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಬೋಡರ್ು ಹೈಸ್ಕೂಲು, ಸರಕಾರಿ ಕಾಲೇಜು ಕಾಸರಗೋಡು, ಬೋವಾಳ್ ವಿ.ವಿ, ಧಾರವಾಡ ವಿ.ವಿ ಗಳಲ್ಲಿ ಪ್ರಾಥಮಿಕದಿಂದ ಪದವಿವರೆಗಿನ ವಿವಿಧ ಹಂತಗಳ ಶಿಕ್ಷಣವನ್ನು ಪಡೆದರು. 1963ರಲ್ಲಿ ಕೇರಳ ಸರಕಾರದ ನ್ಯಾಯಾಂಗ  ಇಲಾಖೆಯಲ್ಲಿ ಉದ್ಯೋಗ ಗಳಿಸಿ ಇಪ್ಪತ್ತು ವರ್ಷಕಾಲ ಕಾಸರಗೋಡಿನಲ್ಲಿ ಸರಕಾರಿ ಸೇವೆಯಲ್ಲಿದ್ದು ಸ್ವಯಂ ನಿವೃತ್ತಿ ಪಡೆದರು. ಬಳಿಕ 1984ರಿಂದ ಕಾಸರಗೋಡಿನಲ್ಲಿ  ವಕೀಲಿ ವೃತ್ತಿ ನಡೆಸಿ ಮೂರು ವರ್ಷದ ಬಳಿಕ ಮಂಗಳೂರಿನಲ್ಲಿ ವಕಾಲತ್ತು ಪ್ರಾರಂಭಿಸಿ ಈಗಲೂ ನ್ಯಾಯವಾದಿಗಳಾಗಿ ಸೇವೆ ಸಲ್ಲಿಸುತ್ತಿರುವರು. ಸರಕಾರಿ ನೌಕರಿಯಲ್ಲಿರುವಾಗಲೇ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಕಾನೂನು ವ್ಯಾಸಂಗ ನಡೆಸಿ ಹತ್ತು ವರ್ಷಗಳ ಕಾಲ ಅದೇ ಕಾಲೇಜಿನಲ್ಲಿ ಗೌರವ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
  1971ರಲ್ಲಿ ಹರಿದಾಸನಾಗಿ ಕಲಾಕೈಂಕರ್ಯ ಪ್ರಾರಂಭಿಸಿ 42 ವರ್ಷಗಳ ಕಾಲ ಹರಿಕಥಾಸೇವೆ ನಡೆಸಿದ್ದಾರೆ. ಯಕ್ಷದಿಗ್ಗಜ ಹರಿದಾಸ ಡಾ. ಶೇಣಿಗೋಪಾಲಕೃಷ್ಣ ಭಟ್ ಇವರ ಹರಿಕಥಾ ಗುರುಗಳು. ಯಕ್ಷಗಾನ ವೇಷಧಾರಿ, ಅರ್ಥಧಾರಿ, ರಂಗಭೂಮಿ ನಟ, ಲೇಖಕ, ಪುರಾಣವಾಚಕ ಹೀಗೆ ತಮ್ಮ ಬಹುಮುಖ ಪ್ರತಿಭೆಯನ್ನು ಪ್ರಕಟಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನ ಮಾಜಿ ಜಿಲ್ಲಾ ಉಪಾಧ್ಯಕ್ಷರಾಗಿ, ಹರಿಕಥಾ ಪರಿಷತ್ ಮಂಗಳೂರು ಇದರ ಸ್ಥಾಪಕಾಧ್ಯಕ್ಷರಾಗಿ ಶ್ರೀ ಕೃಷ್ಣ ಹರಿಕಥಾ ಸಪ್ತಾಹ ಸಮಿತಿ ಮಂಗಳೂರು ಇದರ ಕಾಯರ್ಾಧ್ಯಕ್ಷರಾಗಿ ಸಮಾಜಸೇವೆ ಗೈದ ಶೆಟ್ಟರಿಗೆ ಹಲವು ಪ್ರಶಸ್ತಿ, ಗೌರವಗಳು ಸಂದಿವೆ. ಕೊಲ್ಯಮಠದಿಂದ ಕೀರ್ತನ ಕೇಸರಿ ಬಿರುದು, ಹೊಸಬೆಟ್ಟು ರಾಘವೇಂದ್ರ ಮಠದ ಪುರಸ್ಕಾರ, ಕಲ್ಕೂರ ಪ್ರತಿಷ್ಠಾನ ಪ್ರಶಸ್ತಿ, ಕುಂಬಳೆಯ ಕೀರ್ತನ ಕುಟೀರದ ಕೀರ್ತನ ಕಸ್ತೂರಿ ಪ್ರಶಸ್ತಿ, ಬಂಟರ ಸಂಘ ಮಂಗಳೂರು ಇವರ ಕಲಾ ಪ್ರಶಸ್ತಿ, ಅಖಿಲ ಕನರ್ಾಟಕ ಸಾಂಸ್ಕೃತಿಕ ವೇದಿಕೆ ಕಾಸರಗೋಡು ಇವರು ಕೊಡಮಾಡಿದ ಪ್ರಶಸ್ತಿ, ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ, ಶೇಣಿ ಸಂಸ್ಮರಣ ಪ್ರಶಸ್ತಿ, ಮಂತ್ರಾಲಯ ರಾಘವೇಂದ್ರ ಮಠದ ಪ್ರಶಸ್ತಿ, ಸುಳಿ ಜನಾರ್ದನ ಕ್ಷೇತ್ರದಿಂದ ಕೀರ್ತನ ಜ್ಯೋತಿ ಪ್ರಶಸ್ತಿ ಮೊದಲಾದವನ್ನು ಪಡೆದಿದ್ದಾರೆ. ಮಕ್ಕಳು: ಪರಿಣಿತ ಜಿ ಶೆಟ್ಟಿ, ನ್ಯಾಯವಾದಿ ಗುರುಪ್ರಸಾದ ಶೆಟ್ಟಿ ಹಾಗೂ ಪರಿಮಳ.
   ಡಾ. ಗಣಪತಿ ಭಟ್ಟ. ಕೆ (ವೈದ್ಯಕೀಯ)
ಕುಳಮರ್ವ ಮಹಾಲಿಂಗ ಭಟ್ ಹಾಗೂ ಸಾವಿತ್ರಿ ಅಮ್ಮನವರ ಪುತ್ರನಾಗಿ 5-12-1936 ರಂದು ಜನಿಸಿದ ಗಣಪತಿ ಭಟ್ಟರು ಮ. ಸಂ. ಕಾ.ಪ್ರೌಢಶಾಲೆ ನೀಚರ್ಾಲು, ನವಜೀವನ ಪ್ರೌಢಶಾಲೆ ಪೆರಡಾಲ, ಸರಕಾರಿ ಕಾಲೇಜು ಕಾಸರಗೋಡು, ಕನರ್ಾಟಕ ಕಾಲೇಜು ಧಾರವಾಡ, ನಾಯರ್ ಹಾಸ್ಪಿಟಲ್ ಡೆಂಟಲ್ ಕಾಲೇಜು ಮುಂಬಯಿಗಳಲ್ಲಿ ಶಿಕ್ಷಣವನ್ನು ಪೂರೈಸಿದರು. 29-5-1966 ರಿಂದ ಇತ್ತೀಚೆಗಿನವರೆಗೂ ಕಾಸರಗೋಡಿನಲ್ಲಿ ಜನಪ್ರಿಯ ದಂತವೈದ್ಯರಾಗಿ ಸೇವೆಸಲ್ಲಿಸಿದ್ದಾರೆ. ಸ್ಥಳೀಯ ಸತ್ಯಸಾಯಿ ಸಂಸ್ಥೆಯ ಸಹಿತ ವಿವಿಧ ಸಂಘಸಂಸ್ಥೆಗಳಲ್ಲಿ ಸಕ್ರಿಯ ಸೇವೆ ಸಲ್ಲಿಸಿದ ಇವರು ಇಂಡಿಯನ್ ಡೆಂಟಲ್ ಎಸೋಸಿಯೇಶನ್ನಿನ ಕಾಸರಗೋಡು ಶಾಖೆಯ ಸ್ಥಾಪಕಾಧ್ಯಕ್ಷರು.  ಎರಡು ಬಾರಿ ಇದೇ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಾಸರಗೋಡು ಹವ್ಯಕಸಭೆಯ ಮಾಜಿ ಅಧ್ಯಕ್ಷ ಹಾಗೂ ಸಕ್ರಿಯ ಸದಸ್ಯ. ಎರಡುಬಾರಿ ಪಾಶ್ಚಾತ್ಯದೇಶಗಳ ಪ್ರವಾಸ ಕೈಗೊಂಡ ಇವರು ಕನ್ಯಾಕುಮಾರಿಯಿಂದ ನೇಪಾಳದ ವರೆಗೆ ತೀರ್ಥಯಾತ್ರೆ ಮಾಡಿದ್ದಾರೆ. ಹಲವು ವೈದ್ಯಕೀಯ ಶಿಬಿರಗಳಲ್ಲಿ ಹಾಗೂ ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ಎಳವೆಯಿಂದಲೇ ಶಾಲಾ ಕಾಲೇಜುಗಳ ಪತ್ರಿಕೆಗಳಲ್ಲಿ, ಸ್ಥಳೀಯ ಪತ್ರಿಕೆಗಳಲ್ಲಿ ಕವನ, ಲೇಖನಗಳನ್ನು ಪ್ರಕಟಿಸುತ್ತಿದ್ದ ಭಟ್ಟರ ಆತ್ಮಕತೆ ``ಬಿಚ್ಚಿಟ್ಟ ನನ್ನ ಬದುಕು'  ಕಾಸರಗೋಡಿನ ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಶ್ರೀಯುತರಿಗೆ  ಹಲವು ಸನ್ಮಾನ, ಗೌರವಗಳು ಸಂದಿವೆ. ಕಾಸರಗೋಡು ಹವ್ಯಕಸಭೆ, ಅಖಿಲಭಾರತ ಹವ್ಯಕಸಭೆಗಳಿಂದ ಸನ್ಮಾನ ಮತ್ತು ಕಾಸರಗೋಡು ರೋಟರಿಕ್ಲಬ್ ನಿಂದ ಸೇವಾ ಉತ್ಕೃಷ್ಟತೆಗೆ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಡಾ. ಪಾಣಾಜೆ ಮಹಾಲಿಂಗ ಭಟ್, ಸಾಯಿರಾಂ ಭಟ್ ಮೊದಲಾದವರ ನಿವಾಸಗಳಲ್ಲಿ ಡಾ. ಮುರಲೀಮೋಹನ ಚೂಂತಾರು ಅವರ ದಂತ ಚಿಕಿತ್ಸಾಲಯದಲ್ಲಿ ಮಂಗಳೂರಿನಲ್ಲಿ ದಂತವೈದ್ಯರ ಅನುಭವದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತ್ರವಲ್ಲದೆ ಕಾಸರಗೋಡು ಕೇರಳದಂತವೈದ್ಯ ಸಂಘಟನೆಗಳಿಂದ ಸನ್ಮಾನ ದೊರೆತಿದೆ.
ಇವರ ಮಡದಿ ದೇವಕಿ. ಪುತ್ರ ಗೌತಮ ಪ್ರಖ್ಯಾತ ಕಿವಿ ಗಂಟಲು ಮೂಗು ತಜ್ಞರು. ಸೊಸೆ ಡಾ. ವಿದ್ಯಾ ದಂತವೈದ್ಯೆ.
     ಮಹಮ್ಮದ್ ಆಲಿ ಪೆರ್ಲ (ಸಮಾಜ ಸೇವೆ)
  ಪೆರ್ಲದಲ್ಲಿ ಆಲಿ ಮತ್ತು ಆಯಿಶಾರವರ ಹಿರಿಯ ಪುತ್ರನಾಗಿ 7-10-1955 ನೇ ಇಸವಿಯಲ್ಲಿ ಜನಿಸಿದರು. ಪೆರ್ಲ ಸ.ನಾ ಪ್ರೌಢಶಾಲೆಯ ಹಳೆಯ ವಿದ್ಯಾಥರ್ಿಯಾದ ಇವರು ಉನ್ನತಶಿಕ್ಷಣವನ್ನು ಕಾಸರಗೋಡು ಸರಕಾರಿ ಕಾಲೇಜಿನಿಂದ ಪಡೆದು ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಸಂಪಾದಿಸಿದರು. 1981ರಲ್ಲಿ ಕೇರಳ ಭೂ ನೋಂದಣಿ ಇಲಾಖೆಯಲ್ಲಿ ಉದ್ಯೋಗಿಯಾಗಿ  ಸೇರಿ ಮಂಜೇಶ್ವರ ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ತಮ್ಮ  ವೃತ್ತಿಜೀವನವನ್ನು ಪ್ರಾರಂಭಿಸಿದರು. ಮೂವತ್ತು ವರ್ಷಗಳ ಸುದೀರ್ಘ ಸರಕಾರಿ ಸೇವೆಯನ್ನು ನಿರ್ವಹಿಸಿ 2011 ಮಾಚರ್್ ತಿಂಗಳಲ್ಲಿ ಬದಿಯಡ್ಕ ಸಬ್ ರಿಜಿಸ್ಟ್ರಾರ್ ಕಚೇರಿಯಿಂದ ಸಬ್ ರಿಜಿಸ್ಟ್ರಾರ್ ಆಗಿ ನಿವೃತ್ತರಾದರು. ಕಾಸರಗೋಡು ಕನ್ನಡ ವಿದ್ಯಾಥರ್ಿಸಂಘದ  ತಾಲೂಕು ಅಧ್ಯಕ್ಷರಾಗಿ, ಕಾರ್ಯದಶರ್ಿಯಾಗಿ ಸೇವೆಸಲ್ಲಿಸಿದ ಇವರು ಸರಕಾರಿ ಕಾಲೇಜಿನಲ್ಲಿ ಕನ್ನಡ ವಿದ್ಯಾಥರ್ಿಸಂಘವನ್ನು ಕಟ್ಟಿ ಬೆಳೆಸಿ ಕನ್ನಡ ವಿದ್ಯಾಥರ್ಿಸಂಘದ ಉಮೇದ್ವಾರನಾಗಿ ಸ್ಪಧರ್ಿಸಿ ಕಾಲೇಜು ವಿದ್ಯಾಥರ್ಿನಾಯಕರಾಗಿ ಚುನಾಯಿತರಾಗಿದ್ದರು.  ಕನ್ನಡ ಸರಕಾರಿ ನೌಕರರ ಸಂಘದ ಪದಾಧಿಕಾರಿಯಾಗಿ ಕನ್ನಡಕ್ಕೆ ಸಂಬಂಧಿಸಿದ ಅನೇಕ ಸಾಹಿತ್ಯ ಸಾಂಸ್ಕೃತಿಕ ಸ್ಪಧರ್ೆಗಳ ಆಯೋಜಕರಾಗಿ ಕನ್ನಡದ ಕೈಂಕರ್ಯವನ್ನು ಗೈದಿದ್ದಾರೆ. ವೇಣುಗೋಪಾಲ ಕಾಸರಗೋಡು ಅವರೊಂದಿಗೆ ರಂಗ ತರಬೇತಿ ಶಿಬಿರಗಳಲ್ಲಿ ಹಾಗೂ ನಾಟಕಗಳಲ್ಲಿ ಅಭಿನಯಿಸಿ  ಕಲಾವಿದನಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಪತ್ನಿ ಆಯಿಶಾ ಅಚ್ಚಗನ್ನಡತಿಯಾಗಿದ್ದು ಕನರ್ಾಟಕ ಬ್ಯಾರಿ ಅಕಾಡಮಿಯ ಸದಸ್ಯೆ. ಈಕೆ ಕಳೆದ ಹದಿನೈದು ವರ್ಷಗಳಿಂದ ಪಂಚಾಯತ್ ಸದಸ್ಯೆಯಾಗಿದ್ದಲ್ಲದೆ ಕನ್ನಡಪರ ಸಂಘಸಂಸ್ಥೆಗಳೊಂದಿಗೆ ಕನ್ನಡಪರ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಪುತ್ರರಲ್ಲಿ ಹಿರಿಯವರಾದ ರಿಷಾದ್  ಬದಿಯಡ್ಕ ಸರಕಾರಿ ಶಾಲೆಯಲ್ಲಿ ಕನ್ನಡಮಾಧ್ಯಮ ಅಧ್ಯಾಪಕ. ಎರಡನೇಯವರಾದ  ಡಾ. ನಿಶಾದ್ ಮಂಗಳೂರಿನ ಯನಪೋಯ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದು ಸ್ನಾತಕೋತ್ತರ ಅಧ್ಯಯನ ನಡೆಸುತ್ತಿದ್ದಾರೆ. ಕಿರಿಯಪುತ್ರ ಡಾ.ಶಹನಾದ್ ಅದೇ ಕಾಲೇಜಿನಲ್ಲಿ ಎಂ ಬಿ.ಬಿ.ಎಸ್ ಪದವಿ ಪಡೆದು ವೈದ್ಯ ತರಬೇತಿ ಪಡೆಯುತ್ತಿದ್ದಾರೆ. ತಮ್ಮ ಮೂವರು ಮಕ್ಕಳನ್ನೂ ಕನ್ನಡ ಮಾಧ್ಯಮದಲ್ಲೇ ಓದಿಸಿ ಉನ್ನತ ಶಿಕ್ಷಣವನ್ನು ಕೊಡಿಸಿದ ಅಪ್ಪಟ ಕನ್ನಡಾಭಿಮಾನಿ ಇವರು.
   ಜಲಜಾಕ್ಷಿ. ಕೆ (ಶಿಕ್ಷಣ)
  ಅಣ್ಣಪ್ಪಯ್ಯ ಹಾಗೂ ಅಪ್ಪಿಬಾಯಿ ದಂಪತಿಗಳ ಪುತ್ರಿಯಾಗಿ 23-7-1951ರಂದು ಜನಿಸಿದ ಜಲಜಾಕ್ಷಿಯವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಾಸರಗೋಡು ಬೋಡರ್ುಹೈಸ್ಕೂಲ್ ನಲ್ಲಿ ಶಿಕ್ಷಣ ಪದೆದು  ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಪದವಿ ಗಳಿಸಿ ಮಂಗಳೂರು ಸರಕಾರಿ ಕಾಲೇಜಿನಿಂದ ಬಿ.ಎಡ್ ಪದವಿ ಪಡೆದರು. ಸರಕಾರಿ ಹಿರಿಯ ಪ್ರೌಢಶಾಲೆ ಉದುಮ, ಚಂದ್ರಗಿರಿ, ಚೇರಾಲ್ ಹಾಗೂ ಬಿ ಇ ಎಂ ಪ್ರೌಢಶಾಲೆಗಳಲ್ಲಿ 33 ವೆಷಗಳ ಕಾಲ ಭೌತಶಾಸ್ತ್ರ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸಿದರು.
ವಿಶ್ವಹಿಂದೂಪರಿಷತ್ತಿನ ರಾಜ್ಯಮಟ್ಟದ ಪದಾಧಿಕಾರಿಗಳಾದ ಇವರು ಚಿನ್ಮಯ ಮಿಷನ್ ಸಂಸ್ಥೆಯ ಮೂಲಕವೂ ಸಮಾಜಸೇವೆಗೈದಿದ್ದಾರೆ. ವಿಜ್ಞಾನಕ್ಕೆ ಸಂಬಂಧಿಸಿದ ಸಲಕರಣೆ ಹಾಗೂ ಪಾಠೋಪಕರಣಗಳ ತಯಾರಿ ಇವರ ಹವ್ಯಾಸವಾಗಿದೆ. ಆದರ್ಶ ಅಧ್ಯಾಪಿಕೆಯಾಗಿ ವಿದ್ಯಾಥರ್ಿಗಳ ಮನಗೆದ್ದಿದ್ದಾರೆ. ಮಕ್ಕಳ ಮನಸ್ಸನ್ನು ಅರಿತು ಬೋಧಿಸುವ ಪ್ರವೃತ್ತಿ ಇವರದ್ದು. ಪಾಠಮಾಡುವ ವಿಷಯಗಳಲ್ಲಿ ಉತ್ತಮವಾದ ಪ್ರಭುತ್ವವನ್ನು ಹೊಂದಿದ್ದು ಸಹನೆ ಹಾಗೂ  ಸಂವಹನಶೀಲತೆಯಿಂದ ವಿದ್ಯಾಥರ್ಿಗಳಿಗೆ ಪಾಠವನ್ನು ಮನದಟ್ಟು ಮಾಡಿಸುವುದರಲ್ಲಿ ಸಿದ್ಧಹಸ್ತರು. ಶಾಲಾಭಿವೃದ್ಧಿಗೆ, ಸಮಾಜದ ಉನ್ನತಿಗೆ ಕೊಡುಗೆ ನೀಡಿದ್ದಾರೆ. ಮಕ್ಕಳಲ್ಲಿ ಶಿಸ್ತು, ವಿಧೇಯತೆ, ದೇಶಾಭಿಮಾನ, ಸುಭದ್ರ ರಾಷ್ಟ್ರನಿಮರ್ಾಣದ ಕನಸು ಮೊದಲಾದ ಮೌಲ್ಯಗಳನ್ನು ಬೆಳೆಸುವಂತಹ ಆದರ್ಶ ಅಧ್ಯಾಪಕ ವ್ಯಕ್ತಿತ್ವ ಇವರದ್ದು.
   

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries