HEALTH TIPS

No title

ಕುಂಚಿನಡ್ಕ ಶಕುಂತಲಾ ಕೃಷ್ಣ ಭಟ್ ಅವರಿಗೆ ಸನ್ಮಾನ
 ಮುಳ್ಳೇರಿಯ: ಕುಂಟಾರು ಶ್ರೀ ಮಹಾವಿಷ್ಣುಮೂತರ್ಿ ದೇವಾಲಯದ ಜಾತ್ರೋತ್ಸವ ಮಾಚರ್್ 29 ಮತ್ತು 30 ರಂದು ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಈ ಸಂದರ್ಭದಲ್ಲಿ ಸಂಗೀತ ವಿಧುಷಿ ಶಕುಂತಳಾ ಭಟ್ ಕುಂಚಿನಡ್ಕ ಅವರನ್ನು ಸನ್ಮಾನಿಸಲಾಗುವುದು. ಮಾಚರ್್ 30ರಂದು ರಾತ್ರಿ 9ಕ್ಕೆ ನಡೆಯುವ ಧಾಮರ್ಿಕ ಸಭೆಯಲ್ಲಿ ಶ್ರೀಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷರಾದ ಪದ್ಮನಾಭ ಭಟ್ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ವಾಸುದೇವ ತಂತ್ರಿ ಆಶೀರ್ವಚನ ನೀಡುವರು.
    ಬಂಟ್ವಾಳ ತಾಲೂಕಿನ ಅಳಿಕೆಯ ಜೆಡ್ಡು ಗಣಪತಿ ಭಟ್ ಹಾಗೂ ಜೆಡ್ಡು ಗೌರಮ್ಮನವರ ಸುಪುತ್ರಿಯಾದ ಶಕುಂತಲಾ ಕೃಷ್ಣಭಟ್ ಕುಂಚಿನಡ್ಕ ಸಂಗೀತ ಪರಂಪರೆಯ ಹಿನ್ನಲೆಯಿಂದ ಬಂದ ಅವರಿಗೆ ಅಮ್ಮನೇ ಮೊದಲ ಗುರು. ಹತ್ತು ವರ್ಷಗಳ ತನಕ ಅಮ್ಮನಿಂದಲೇ ಸಂಗೀತಾಭ್ಯಾಸ. ಹತ್ತು ವರ್ಷಗಳ ನಂತರ ಚಕ್ರಕೋಡಿ ನಾರಾಯಣ ಶಾಸ್ತ್ರಿಗಳ ಬಳಿ ಸಂಗೀತಾಭ್ಯಾಸ ಮುಂದುವರೆಸಿದರು. ಮುಂದಕ್ಕೆ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ಸುಮಾರು ನಲುವತ್ತೈದು ವರ್ಷಗಳ ಹಿಂದೆ ಮದ್ರಾಸ್ ವಿಶ್ವವಿದ್ಯಾನಿಲಯ ಮಟ್ಟದ ಪರೀಕ್ಷೆಗಳನ್ನು ಪೂರೈಸಿದರು. ಇವರ ಸಂಗೀತಕ್ಷೇತ್ರದ ಸಾಧನೆಗೆ ಅಮ್ಮನೇ ಸ್ಪೂತರ್ಿ.
ಕನರ್ಾಟಕ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಮ್ಯೆಸೂರು ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ಹಲವಾರು ಕೇಂದ್ರಗಳಲ್ಲಿ  ಸಂಗೀತ ಕಛೇರಿಗಳನ್ನು ನಡೆಸಿ  ಶೋತೃಗಳ  ಪ್ರಶಂಸೆಗೆ ಪಾತ್ರರಾಗಿದ್ದಾರೆ. 2016 ರ ದಶಂಬರ ದಲ್ಲಿ ಕಾಸರಗೋಡಿನ ಕೆಂದ್ರೀಯ ತೋಟದಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ ನಡೆದ ಅಂತರಾಷ್ಟ್ರಿಯ ಸಮ್ಮೆಳನದಲ್ಲಿ ಕಛೇರಿ ನಡೆಸಿದ ಹೆೆಗ್ಗಳಿಕೆ ಇವರದು. ಎಪ್ಪತ್ತೈದರ ಹರೆಯದಲ್ಲಿರುವ ಶಕುಂತಳಾ ತಮ್ಮ ಕಂಠಸಿರಿಯನ್ನು ಈಗಲೂ ಕಾಪಾಡಿಕೊಂಡು ಬಂದಿದ್ದಾರೆ. ಗುರುಕುಲ ಪದ್ಧತಿಯಲ್ಲಿ ಸಂಗೀತ ಕಲಿಸುವ ಇವರು ಉತ್ತಮ ಶಿಷ್ಯವೃಂದವನ್ನು ಹೊಂದಿದ್ದಾರೆ. ಇವರ ಶಿಷ್ಯರಲ್ಲಿ ಅನೇಕರು ಕನರ್ಾಟಕ ಪ್ರೌಡ ಶಿಕ್ಷಣ ಮಂಡಳಿ ನಡೆಸುವ ವಿಧ್ವತ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಕೆಲವರು ಆಕಾಶವಾಣಿ ಕಲವಿದರಾಗಿರುತ್ತಾರೆ ಅಲ್ಲದೆ ಸಂಗೀತ ತರಗತಿಯನ್ನು ನಡೆಸುತ್ತಿದ್ದಾರೆ.
 ಇವರು ಪೆರ್ಲ ಕೃಷ್ಣ ಭಟ್ ರಚನೆಯ ಮಧೂರು ಸುಪ್ರಭಾತವನ್ನು 1974ರಲ್ಲಿ ಮೊತ್ತಮೊದಲ ಬಾರಿಗೆ ರಾಗ ಸಂಯೋಜಿಸಿ ದಕ್ಷಿಣ ಭಾರತದಾದ್ಯಂತ ಪ್ರಚಾರ ಪಡೆಯುವಲ್ಲಿ ಹಾಗೂ ಪೆರಡಾಲ ಉದನೇಶ್ವರ ಸುಪ್ರಭಾತ, ನಾರಾಯಣೀಯಂ, ಪುಣಚ ಮಹಿಷಮದರ್ಿನಿ ಸುಪ್ರಭಾತ ಇವುಗಳಿಗೆಲ್ಲಾ ರಾಗ ಸಂಯೋಜಿಸಿ ಹಾಡಿ ಧ್ವನಿಸುರುಳಿಗಳನ್ನು ಹೊರತರುವ ಕಾರ್ಯದಲ್ಲಿ ಯಶಸ್ಸು ಗಳಿಸಿದ ಹಿರಿಮೆ ಅವರಿಗೆ ಸಲ್ಲುತ್ತದೆ. 2004ರಲ್ಲಿ ತಮ್ಮ ಗುರುಗಳಾದ ಚಕ್ರಕೋಡಿ ನಾರಾಯಣ ಶಾಸ್ತ್ರಿಗಳ ರಚನೆಗಳನ್ನೆಲ್ಲ ಸಂಗ್ರಹಿಸಿ, ಸ್ವರ ಸಂಯೋಜಿಸಿ 'ಚಕ್ರಕೋಡಿ ನಾರಾಯಣ ಶಾಸ್ತ್ರಿಗಳ ಕೃತಿಗಳು' ಎಂಬ ಪುಸ್ತಕವನ್ನು ಪ್ರಕಟಿಸಿ ಗುರುಸ್ಮರಣೆ ಮಾಡಿಕೊಂಡಿದ್ದಾರೆ.
     ಗಡಿನಾಡಿನಲ್ಲಿನ ಸಂಗೀತಗಾರರಲ್ಲಿ ಒಬ್ಬರಾಗಿ ಶಕುಂತಲಾ, ಕಾಸರಗೋಡು ಜಿಲ್ಲೆಯ ಹಿರಿಯ ಕಲಾವಿದೆಯಾದ ಶಕುಂತಲಾ ಅವರು ಸ್ವತಃ ಕೆಲವು ವಚನ ರೂಪದ ದೇವರನಾಮಗಳನ್ನು ರಚಿಸಿರುತ್ತಾರೆ.
  ಪುತ್ತೂರಿನ ಮೂಕಾಂಬಿಕಾ ಸಂಗೀತಾಲಯ, ಪಡ್ರೆ ಚಂದು ಸ್ಮಾರಕ ನಾಟ್ಯಾಲಯ, ಕಾಸರಗೋಡಿನ ಗೋಪಾಲಕೃಷ್ಣ ಸಂಗೀತಶಾಲೆ, ಆಲಂಪಾಡಿ ವೆಂಕಟೇಶ್ ಶ್ಯಾನ್ಭೋಗ್ ಪ್ರತಿಷ್ಠಾನ, ಪೆರ್ಲದ ಶಿವಾಂಜಲಿ ನೃತ್ಯ ಕಲಾಕೇಂದ್ರ, ಮ್ಯೆಸೂರಿನ ಗಾನಭಾರತಿ ಮೊದಲಾದ ಸಂಸ್ಥೆಗಳು ಇವರನ್ನು ಪುರಸ್ಕರಿಸಿ ಗೌರವಿಸಿದೆ. ಕನ್ನಡ ಸಾಹಿತ್ಯ ಪರಿಷತ್, ಗಡಿನಾಡ ಘಟಕವು ಇವರನ್ನು ಎಪ್ರಿಲ್ 2014ರಲ್ಲಿ ನಡೆದ 8ನೇ ಜಿಲ್ಲಾ ಗಡಿನಾಡ ಸಮ್ಮೇಳನದಲ್ಲಿ ಪುರಸ್ಕರಿಸಿದೆ.
 ಅಸಾಧಾರಣ ಪಾಂಡಿತ್ಯ, ಸಾಧನೆಯ ಶಿಖರ, ದೇವತಾ ಸ್ವರೂಪದ ಗುರು. ಗಾನಸರಸ್ವತಿಯ ವರಪುತ್ರಿ. ಶ್ರದ್ಧೆಭಕ್ತಿ ಸಂಪ್ರದಾಯಯುಕ್ತ ಶಿಕ್ಷಣ, ಗ್ರಾಮೀಣ ಪ್ರದೇಶದ ಅದ್ಭುತ ಪ್ರತಿಭೆ. ಸಂಗೀತಕ್ಷೇತ್ರದ ಹಿರಿಯ ಕಲಾವಿದೆ. ಸಂಗೀತದ ವಿವಿಧ ಮಜಲುಗಳನ್ನು ತಾಜಾ ಸೊಗಸಿನಿಂದ ಸಜ್ಜನರ ಹೃದಯಕ್ಕೆ ಸರಳಸುಸೂತ್ರವಾಗಿ ತಲುಪಿಸುವಂತಹ ಸದೃಢ ಶಕ್ತಿಯ ಗುರು ಕುಂಚಿನಡ್ಕ ಶಕುಂತಲಾ ಕೃಷ್ಣ ಭಟ್.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries