HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಸಾಹಿತ್ಯ ಸಮ್ಮೇಳನಕ್ಕೆ ಅಣಿಯಾಗುತ್ತಿರುವ ಮುಳ್ಳೇರಿಯ
    ಕಾಸರಗೋಡು: ಮಾಚರ್್ 31 ಎಪ್ರಿಲ್ 2ರಂದು ಮುಳ್ಳೇರಿಯಾದಲ್ಲಿ ನಡೆಯಲಿರುವ ಕ.ಸಾ.ಪ ಕಾಸರಗೋಡು ಜಿಲ್ಲಾ 11ನೆಯ ಸಾಹಿತ್ಯ ಸಮ್ಮೇಳನಕ್ಕೆ ಬೆರಳೆಣಿಕೆಯ ದಿನಗಳು ಮಾತ್ರ ಉಳಿದಿದ್ದು ಸಮ್ಮೇಳನದ ಸಿದ್ಧತೆಗಳು ಸದ್ದಿಲ್ಲದೆ ಭರದಿಂದ ಸಾಗುತ್ತಿವೆ.
   ಮಲೆನಾಡಿನ ಬುಡದಲ್ಲಿ ಪಯಸ್ವಿನಿಯ ಸೆರಗಿನಲ್ಲಿ ಗುಡ್ಡಬೆಟ್ಟಗಳ ನಡುವೆ ಪ್ರಕೃತಿಸೌಂದರ್ಯದ ಆಡುಂಬೋಲವಾಗಿರುವ ಮುಳ್ಳೇರಿಯಾ ಪೇಟೆ  ಸಾಹಿತ್ಯದೇವತೆಯ ಸ್ವಾಗತಕ್ಕೆ ಸಜ್ಜಾಗಿದೆ. ಎರಡುದಿನಗಳ ಈ ಸಮ್ಮೇಳನದಲ್ಲಿ ಐದು ಸಾವಿರಕ್ಕಿಂತಲೂ ಹೆಚ್ಚು ಸಾಹಿತ್ಯಪ್ರಿಯರು ಭಾಗವಹಿಸುವ ನಿರೀಕ್ಷೆಯಿದ್ದು ಎಲ್ಲ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುವುದಲ್ಲದೆ ಅವರಿಗೆ ಉಚಿತವಾದ ಆಸನ, ಊಟ ಉಪಚಾರಗಳಿಗೆ ಸಕಲ ಸೌಕರ್ಯಗಳನ್ನು ಏರ್ಪಡಿಸಲಾಗಿದೆ ಎಂದು ಕ.ಸಾ.ಪ ಕೇರಳ ಘಟಕದ ಅಧ್ಯಕ್ಷ  ಎಸ್. ವಿ. ಭಟ್ ಅವರು ತಿಳಿಸಿದ್ದಾರೆ.
   ಸ್ಥಳೀಯ ಗಣೇಶ ಕಲಾಮಂದಿರ ಹಾಗೂ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಗಳ  ನಡುವಿನ ಮೈದಾನದಲ್ಲಿ ಸಮಾಜಸೇವಕ ವಿ. ಆರ್. ಶೆಣೈ ನಗರದಲ್ಲಿ, ಹಿರಿಯ ವೈದ್ಯ ವಿ.ಕೇಶವಭಟ್ ಸಭಾಂಗಣದಲ್ಲಿ, ಬಹುಭಾಷಾವಿದ್ವಾಂಸ ಸಂಶೋಧಕ ಡಾ. ವೆಂಕಟರಾಜ ಪುಣಿಂಚತ್ತಾಯ ವೇದಿಕೆಯಲ್ಲಿ ಸಮ್ಮೇಳನ ನಡೆಯಲಿದ್ದು ಕ.ಸಾ.ಪ  ಅಧ್ಯಕ್ಷ ಎಸ್, ವಿ ಭಟ್ ಹಾಗೂ ಸಮ್ಮೇಳನದ ಕಾಯರ್ಾಧ್ಯಕ್ಷ ಶ್ರೀ ರಂಗನಾಥ ಶೆಣೈಯವರು ಮಿಂಚಿನವೇಗದಲ್ಲಿ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಎಡೆಬಿಡದೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
   ಮೂಲತಃ ಕಾಸರಗೋಡಿನವರೇ ಆಗಿದ್ದು ಪ್ರಸ್ತುತ  ಉಡುಪಿಜಿಲ್ಲೆಯ ಕಾಂತಾವರದಲ್ಲಿ ನೆಲೆಸಿರುವ ಖ್ಯಾತ ವೈದ್ಯ, ಸಾಹಿತಿ, ಸಂಘಟಕ, ಕನ್ನಡಪರ ಚಿಂತಕ ಡಾ. ನಾ. ಮೊಗಸಾಲೆಯವರು ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಹಿರಿಯ ಕವಿ, ಅಂಕಣಗಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ದೊಡ್ಡರಂಗೇಗೌಡರು ಸಮ್ಮೇಳನವನ್ನು ಉದ್ಘಾಟಿಸಲಿರುವರು. ಸಂಸದ ಪಿ, ಕರುಣಾಕರನ್ ಶಾಸಕರಾದ ಎನ್ ಎ ನೆಲ್ಲಿಕುನ್ನು, ಕೆ. ಕುಂಞಿರಾಮನ್, ಪಿ,ಬಿ ಅಬ್ದುಲ್ ರಜಾಕ್, ವಿಮರ್ಶಕ  ಎಸ್ ಆರ್ ವಿಜಯಶಂಕರ್, ಕೇರಳ ತುಳು ಅಕಾಡಮಿ ಆಧ್ಯಕ್ಷ ಪಿ.ಎಸ್. ಪುಣಿಂಚತ್ತಾಯ, ಹರಿಕೈಷ್ಣ ಪುನರೂರು ಮೊದಲಾದ ಗಣ್ಯರಲ್ಲದೆ   ಜಿಲ್ಲಾಪಂಚಾಯತ್ ಮೊದಲಾದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಕಾಸರಗೋಡು ಮತ್ತು ನೆರೆಯ ಜಿಲ್ಲೆಯ ಗಣ್ಯರು, ಸಾಹಿತಿಗಳು ಭಾಗವಹಿಸಲಿರುವರು. ಉದ್ಘಾಟನೆ, ಸಮಾರೋಪ ಸಮಾರಂಭಗಳಲ್ಲದೆ ಸಮ್ಮೇಳನಾಧ್ಯಕ್ಷರ ಮರ್ಣರಂಜಿತ ಮೆರವಣಿಗೆ, ಪುಸ್ತಕ ಬಿಡುಗಡೆ, ಗಾನ, ಸಂಗೀತ. ನೃತ್ಯ ಯಕ್ಷ ವೈಭವ, ಕಾಸರಗೋಡು ಕನ್ನಡಿಗರ ಸಮಸ್ಯೆಗಳ ಬಗ್ಗೆ ವಿಚಾರಗೋಷ್ಠಿ, ಬಾಲಕವಿಗೋಷ್ಠಿ, ಕವಿಗೋಷ್ಠಿ, ಯಕ್ಷ ಹಾಸ್ಯವೈಭವ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿದೆ. ಎರಡು ಯಕ್ಷಗಾನ ಪ್ರದರ್ಶನಗಳು ವಿಶೇಷ ಆಕರ್ಷಣೆಯಾಗಲಿವೆ.
    ಮುಳ್ಳೇರಿಯಾ ಸಾಹಿತ್ಯ ಸಮ್ಮೇಳನಕ್ಕೆ ಆತಿಥ್ಯ ವಹಿಸುತ್ತಿರುವುದು ಇದು ಎರಡನೇ ಬಾರಿ. ಹಿಂದೆ 2006ರಲ್ಲಿ ಮೂರನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಡಾ. ರಮಾನಂದ ಬನಾರಿಯವರ ಅಧ್ಯಕ್ಷತೆಯಲ್ಲಿ ನಡೆದಿದ್ದು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತ್ತು. ಮಲಯಾಳ ಭಾಷೆ ಹೆಚ್ಚಾಗಿ ಪ್ರಚಲಿತವಿರುವಂತೆ ಕಾಣುತ್ತಿರುವ ಈ ಪ್ರದೇಶದಲ್ಲಿ ಸಮ್ಮೇಳನ ಯಶಸ್ವಿಯಾಗಬಹುದೆ ಎಂಬ ಶಂಕೆಗೆ ಇದು ಉತ್ತರವಾಗಿತ್ತು. ಆಗ ಐ ವಿ ಭಟ್ ಅವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಅಂದು ಕಾರ್ಯದಶರ್ಿಯಾಗಿದ್ದ  ಎಸ್ ವಿ ಭಟ್ ಅವರು ಜಿಲ್ಲೆಯ ಪ್ರತಿಯೊಂದು ಶಾಲೆಗಳಿಗೂ ತೆರಳಿ ಸಮ್ಮೇಳನದ ಯಶಸ್ಸಿಗಾಗಿ ದುಡಿದಿದ್ದರು. ಮೇಲುನೋಟಕ್ಕೆ ಮಲಯಾಳಮಯವಾದ ವಾಣಿಜ್ಯನಗರಿಯಂತಿದ್ದರೂ  ಮುಳ್ಳೇರಿಯಾ ಪೇಟೆಯ ನಾಡಿಮಿಡಿತವನ್ನು ಅರಿತಿರುವ  ಎಸ್. ವಿ. ಭಟ್ ಈ ಭಾಗದ ಜನರಿಗೆ ಸುಪ್ತವಾದ ಸಾಂಸ್ಕೃತಿಕ ಒಲವಿದೆ, ಸಮ್ಮೇಳನದಲ್ಲಿ ನಿರೀಕ್ಷೆಗೂ ಮೀರಿ ಜನಸೇರುವ ಮೂಲಕ  ಇದು ಪ್ರತಿಬಿಂಬಗೊಳ್ಳಲಿದೆ ಎಂಬ ವಿಶ್ವಾಸವನ್ನು ಪ್ರಕಟಿಸುತ್ತಿದ್ದಾರೆ. 
   ಮೇಲ್ನೋಟಕ್ಕೆ ವಿಶೇಷಪ್ರಚಾರವಿಲ್ಲದಂತೆ ತೋರುತ್ತಿದ್ದರೂ ಸಮ್ಮೇಳನದಲ್ಲಿ ಬಹುಸಂಖ್ಯೆಯ ಸಾಹಿತ್ಯಾಸಕ್ತರು ಭಾಗವಹಿಸುವಂತೆ ಮಾಡಲು ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತಿವೆ. ಸ್ಥಳೀಯ ಹಾಗೂ ಸುತ್ತುಮುತ್ತಲಿನ ಗ್ರಾಮಗಳ ಶಾಲೆಗಳು, ಅಧ್ಯಾಪಕರು, ವಿದ್ಯಾಥರ್ಿಗಳು, ವ್ಯಾಪಾರಿಗಳು, ಕೃಷಿಕರು, ಧಾಮರ್ಿಕ ಸಾಂಸ್ಕೃತಿಕ ಮುಖಂಡರು, ವಿವಿಧ ಸಂಘಟನೆಗಳು ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತರಾಗಿದ್ದಾರೆ. ಪುಸ್ತಕ ಮಳಿಗೆಗಳು, ವಸ್ತುಪ್ರದರ್ಶನ, ಚಿತ್ರಕಲಾಪ್ರದರ್ಶನಗಳು ಸಮ್ಮೇಳನದ ಆಕರ್ಷಣೆಯನ್ನು ಹೆಚ್ಚಿಸಲಿವೆ. ಎರಡುದಿನಗಳು ಕೂಡ ಅಭ್ಯಾಗತರ ಹಸಿವನ್ನು ತಣಿಸಲು ಶುಚಿರುಚಿಯಾದ ಭೋಜನ ವ್ಯವಸ್ಥೆಯನ್ನು ಮಾಡಲಾಗುವುದು. ಶಿಸ್ತುಬದ್ಧವಾಗಿ ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ಯಶಸ್ಸುಗೊಳಿಸಲು ಕಾರ್ಯಕರ್ತರ ಪಡೆ ಸಿದ್ಧವಾಗಿದೆ ಎಂದು ಕ.ಸಾ.ಪ ಅಧ್ಯಕ್ಷ ಎಸ್ ವಿ ಭಟ್ ತಿಳಿಸಿದ್ದಾರೆ. ಜಿಲ್ಲೆಯ ಎಲ್ಲ ಭಾಗಗಳಿಂದಲೂ ಸಾಹಿತ್ಯಾಸಕ್ತರು, ಕನ್ನಡಿಗರು ಆಗಮಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಅವರು ವಿನಂತಿಸಿದ್ದಾರೆ. 
       ಮುಳ್ಳೇರಿಯಾದ  ಹಿರಿಮೆ
   ಹನ್ನೊಂದನೆಯ ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಮುಳ್ಳೇರಿಯಾವನ್ನೊಳಗೊಂಡ ಕಾರಡ್ಕ ಗ್ರಾಮ ಸಾಹಿತ್ಯ ಸಂಸ್ಕೃತಿಯ ನೆಲೆವೀಡು. ಖ್ಯಾತ ಕವಿಗಳಾದ ಡಾ, ಕೆ,ವಿ ತಿರುಮಲೇಶ್, ವೇಣುಗೋಪಾಲ ಕಾಸರಗೋಡು, ಶ್ರೀಕೃಷ್ಣ ಚೆನ್ನಾಂಗೋಡು, ಸಂಶೋಧಕ  ಡಾ. ವೆಂಕಟರಾಜ ಪುಣಿಂಚತ್ತಾಯ, ಕಲಾವಿದ ಪಿ.ಎಸ್ ಪುಣಿಂಚತ್ತಾಯ ಮೊದಲಾದವರು ಊರಿನ ಕೀತರ್ಿಯನ್ನು ಬೆಳಗಿಸಿದ್ದಾರೆ.
ಮುಂಡೋಳು, ದೇಲಂಪಾಡಿ, ಬೆಳ್ಳೂರು, ನಾರಂಪಾಡಿ, ಆದೂರು, ಅಡೂರು. ಕುಂಟಾರು ಮೊದಲಾದ ಸನಿಹದ ದೇವಸ್ಥಾನಗಳು, ಮಸೀದಿಗಳು, ಇಗಜರ್ಿಗಳು ಊರಿನ ಪಾವಿತ್ರ್ಯವನ್ನು ಹೆಚ್ಚಿಸಿವೆ. ಕನ್ನಡ, ಮಲಯಾಳ, ತುಳು, ಮರಾಠಿ, ಕೊಂಕಣಿ, ಕರಾಡ, ಹವ್ಯಕ, ಮಾಪಿಳ್ಳ ಮೊದಲಾದ ಬಹುಭಾಷೆಗಳು ಈ ನಾಡಿನ ಹಿರಿಮೆಯನ್ನು ಹೆಚ್ಚಿಸಿವೆ. ಹಲವಾರು ವಿದ್ಯಾಸಂಸ್ಥೆಗಳು ಈ ಪರಿಸರದಲ್ಲಿವೆ. ಸಂಗೀತ, ನಾಟಕ, ನೃತ್ಯ, ಯಕ್ಷಗಾನ ಕಲೆಗಳಿಗೆ ಈ ಊರು ಹೆಸರಾಗಿದೆ. ಕಾಂಚನಗಂಗಾ ಕಲಾಗ್ರಾಮ. ಕಲ್ಲೇರಿ ಜಲಪಾತ,  ಪಯಸ್ವಿನೀ ನದಿ ಮೊದಲಾದ ಪ್ರೇಕ್ಷಣೀಯ ಸ್ಥಳಗಳು ಇಲ್ಲಿವೆ.
   ಕ.ಸಾ.ಪ ನೇತೃತ್ವದಲ್ಲಿ  ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳು  ನಡೆದುಬಂದ ದಾರಿ

ಕ್ರಮ ಸಂಖ್ಯೆ ಸಮ್ಮೇಳನದ ಸಂಖ್ಯೆ ಜರುಗಿದ ಸ್ಥಳ ದಿನಾಂಕ ಸಮ್ಮೇಳನಾಧ್ಯಕ್ಷರು ಕ.ಸಾ.ಪ. ಕೇರಳ ಘಟಕಾಧ್ಯಕ್ಷರು
1 ಮೊದಲನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನ ಲಲಿತಕಲಾಸದನ ಕಾಸರಗೋಡು 29  ಮತ್ತು 30 -1 2000 ಡಾ. ವೆಂಕಟರಾಜ ಪುಣಿಂಚತ್ತಾಯ ಡಾ. ಲಲಿತಾ ಎಸ್ ಎನ್ ಭಟ್
2 ಎರಡನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನ ಗಣೇಶ ಮಂದಿರ ಬದಿಯಡ್ಕ 12-10-2003 ಕೆ. ಟಿ. ಗಟ್ಟಿ ಡಾ.ಲಲಿತಾ ಎಸ್ ಎನ್ ಭಟ್
3 ಮೂರನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನ ಗಣೇಶ ಕಲಾ ಮಂದಿರ ಮುಳ್ಳೇರಿಯಾ 7 ಮತ್ತು 8 -1-2006 ಡಾ. ಕೆ. ರಮಾನಂದ ಬನಾರಿ ನ್ಯಾಯವಾದಿ
 ಐ ವಿ ಭಟ್
4 ನಾಲ್ಕನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನ ಮ.ಸಂ.ಕಾ. ಪ್ರೌಢಶಾಲೆ ನೀಚರ್ಾಲು 9 ಮತ್ತು 10- 2010 ಪೆರ್ಲ ಕೃಷ್ಣ ಭಟ್ ಎಸ್ ವಿ ಭಟ್
5 ಐದನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನ ಶ್ರೀಕೃಷ್ಣ ಕಲ್ಯಾಣ ಮಂಟಪ ದೈಗೋಳಿ ಕೊಡ್ಲಮೊಗರು 24 ಮತ್ತು 25 -7-2010 ಪ್ರೊ. ಎಂ ರಾಮಚಂದ್ರ ಎಸ್ ವಿ ಭಟ್
6 ಆರನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನ ಶ್ರೀ ಸತ್ಯನಾರಾಯಣ ಪ್ರೌಢಶಾಲೆ ಪೆರ್ಲ 30 ಮತ್ತು 31-7-2011 ಮಾ.ಭ.ಪೆರ್ಲ ಎಸ್ ವಿ ಭಟ್
7 ಏಳನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನ ಬಿ. ಎಂ. ಹಿರಿಯ ಪ್ರೌಢಶಾಲೆ ಕಾಸರಗೋಡು 6 ಮತ್ತು 7-4-2013 ಬಿ. ಗೋಪಾಲಕೃಷ್ಣ ಪೈ ಎಸ್ ವಿ ಭಟ್
8 ಎಂಟನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನ ಸಂತ ಮೋನಿಕಾ ಪ್ರೌಢಶಾಲೆ ಕುಂಬಳೆ 12 ಮತ್ತು 13-4-2014 ಡಾ. ನಾ. ದಾಮೋದರ ಶೆಟ್ಟಿ ಎಸ್ ವಿ ಭಟ್
9 ಒಂಬತ್ತನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನ ಶ್ರೀ ವಿದ್ಯಾವರ್ಧಕ ಹಿರಿಯ ಪ್ರೌಢಶಾಲೆ ಮೀಯಪದವು 7 ಮತ್ತು 8-2-2015 ಡಾ, ಡಿ.ಕೆ ಚೌಟ ಎಸ್ ವಿ ಭಟ್
10 ಹತ್ತನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನ ಶ್ರೀ ಪ್ರಶಾಂತಿ ವಿದ್ಯಾಕೇಂದ್ರ ಬಾಯಾರುಪದವು 14 ಮತ್ತು 15 -1-2017 ಡಾ. ಉಪ್ಪಂಗಳ ರಾಮಭಟ್ ಎಸ್ ವಿ ಭಟ್
11 ಹನ್ನೊಂದನೆಯ ಜಿಲ್ಲಾ ಸಾಹಿತ್ಯ ಸಮ್ಮೇಳನ ಗಣೇಶ ಕಲಾಮಂದಿರ
ವಿದ್ಯಾಶ್ರೀ ಶಿಕ್ಷಣ ಕೇಂದ್ರ ಮುಳ್ಳೇರಿಯಾ 31-3 ಮತ್ತು 1-4-2018 ಡಾ. ನಾ ಮೊಗಸಾಲೆ ಎಸ್ ವಿ ಭಟ್


                               



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries