ಕನ್ನಡ ಪತ್ರಕರ್ತರ ಸಂಘದ ಮಹಾಸಭೆ
ಪುನಃ ಸಂಘಟಿಸಲು ಒಕ್ಕೊರಲ ನಿಧರ್ಾರ
ಕಾಸರಗೋಡು: ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಮಹಾಸಭೆಯು ನಗರದ ಕಾಸರಗೋಡು ಟ್ಯುಟೋರಿಯಲ್ ಕಾಲೇಜಿನ ಎಂ.ಗಂಗಾಧರ ಭಟ್ ವೇದಿಕೆಯಲ್ಲಿ ಶನಿವಾರ ನಡೆಯಿತು.
ಸಭೆಯಲ್ಲಿ ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿ ಕನ್ನಡ ಪತ್ರಕರ್ತರ ಸಂಘವನ್ನು ಬಲಪಡಿಸುವ ಅಗತ್ಯತೆಯ ಬಗ್ಗೆ ಮಾತನಾಡಿದರು. ಕಾಸರಗೋಡಿನಲ್ಲಿ ಕನ್ನಡ ಪತ್ರಕರ್ತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದರ ಪರಿಹಾರಕ್ಕೆ ಕನ್ನಡ ಪತ್ರಕರ್ತರ ಸಂಘ ಬಳಿಷ್ಠವಾಗಬೇಕಾಗಿದೆ. ಇದಕ್ಕಾಗಿ ಎಲ್ಲಾ ಪತ್ರಕರ್ತರು ಒಗ್ಗಟ್ಟಾಗಬೇಕಾಗಿದೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯ ಪತ್ರಕರ್ತರಾದ ಶಂ.ನಾ.ಕಿದೂರು, ಟಿ.ಶಂಕರನಾರಾಯಣ ಭಟ್ ಮಾತನಾಡಿದರು.
ಪತ್ರಕರ್ತರಾದ ವೀ.ಜಿ.ಕಾಸರಗೋಡು, ಆನಂದ, ಪುರುಷೋತ್ತಮ ಭಟ್ ಮೊದಲಾದವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. ಗಂಗಾಧರ ಯಾದವ್ ತೆಕ್ಕೆಮೂಲೆ ಸ್ವಾಗತಿಸಿ, ವಿವೇಕ್ ಆದಿತ್ಯ ವಂದಿಸಿದರು.