HEALTH TIPS

ಯಾವುದೇ ಶೀರ್ಷಿಕೆಯಿಲ್ಲ

          ಹೊಸಂಗಡಿ - ಮಿಯಪದವು ರಸ್ತೆಯ ದುರವಸ್ಥೆ-ಬಿಜೆಪಿ ಹೋರಾಟದತ್ತ
     ಮಂಜೇಶ್ವರ: ಶೋಚನೀಯವಸ್ಥೆ ಯಲ್ಲಿರುವ ಕಳೆದ 5 ವರ್ಷ ಗಳಿಂದ ಸಂಚಾರಯೋಗ್ಯವಲ್ಲದೆ ತೀವ್ರ ಹದಗೆಟ್ಟಿರುವ ಹೊಸಂಗಡಿ - ಮಿಯಪದವು ರಸ್ತೆಯ ಮರು ಡಾಮರಿಕರಣ ಅಥವಾ  ದುರಸ್ತಿ ಕಾರ್ಯ ನಿರ್ವಹಿಸದ , ಲೋಕೋಪಯೋಗಿ ಇಲಾಖೆಯ ಬೇಜವಾಬ್ದಾರಿತನ ಖಂಡನೀಯ ಎಂದು ಬಿಜೆಪಿ ಮಂಜೇಶ್ವರ ಮಂಡಲ ಪ್ರ.ಕಾರ್ಯದಶರ್ಿ ಆದಶರ್್ ಬಿಎಂ ಅರೋಪಿಸಿದರೆ.
   ಇಚ್ಛಾಶಕ್ತಿ ಇಲ್ಲದ ಮಂಜೇಶ್ವರ ಶಾಸಕಕರ ನಿಷ್ಕ್ರಿಯತೆ, ಹಾಗು ಜನ ವಿರೋಧಿ ಎಡರಂಗ ಸರಕಾರದ ಬಂಡ ಧೋರಣೆಗಳೇ ಇದಕೆಲ್ಲ ಕಾರಣ. ,ಎರಡು ಬಾರಿ ಟೆಂಡರ್ ಅದ ರಸ್ತೆಗೆ ಇನ್ನೂ ಡಾಮರಿಕರಣ  ಮಾಡಲಾಗದ ಇಲಾಖೆಯ ವಿರುದ್ಧ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸದ ಸರಕಾರದ ಕ್ರಮ ಯಾರ ಓಲೈಕೆಗೆ ಎಂದು ಆದಶರ್್ ಪ್ರಶ್ನಿಸಿರುವರು.
   ಮಿಯಪದವು ಕೂಳೂರು- ಬಂಗ್ರಮಂಜೇಶ್ವರ 9 ಕೀ.ಮೀ  ರಸ್ತೆ ನಿಮರ್ಾಣಕ್ಕೆ  15 ಕೋಟಿ ಮಂಜೂರು ನೀಡಲಾಗಿದ್ದರೂ ಆಥರ್ಿಕ ಮುಗ್ಗಟಿನಲ್ಲಿರುವ ಎಡರಂಗ ಸರಕಾರ 3 ತಿಂಗಳಿಗೊಮ್ಮೆ ಖಜಾನೆ ವ್ಯವಹಾರ ನಡೆಸುದರಿಂದ ಮೊದಲ ಕಂತಿನ ಹಣವೇ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಶಾಸಕರ ಮಂತ್ರಿಗಳ ಸಂಬಳ 50 ಸಾವಿರದಿಂದ 98 ಸಾವಿರಕ್ಕೆ ಹೆಚ್ಚಳಗೊಳಿಸಲು ಎಲ್ಲ ಮಂತ್ರಿಗಳಿಗೆ ನೂತನ ಇನ್ನೋವ ಕ್ರಿಸ್ಟ್  60 ಲಕ್ಷದ ಕಾರು ಖರೀದಿ ಮಾಡಲು ಹಣವಿರುವ ಸರಕಾರ ಎರಡೆರಡು ಬಾರಿ ಟೆಂಡರ್ ಆಗಿರುವ ರಸ್ತೆಯ ನಿಮರ್ಾಣಕ್ಕೆ ಹಣ ನೀಡದೆ ಈ ಪ್ರದೇಶದ ಜನತೆಯನ್ನು ವಂಚಿಸುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಮಳೆ ಬಂದರಂತೂ ಈ ರಸ್ತೆ ಯಾವುದೇ ಕೆಸರು ಗದ್ದೆಗಿಂತ ಕಡಿಮೆಯಲ್ಲ.ಆದಷ್ಟು ಶೀಘ್ರ ರಸ್ತೆ ಡಾಮರಿಕರಣಗೊಳಿಸಿ ಸಂಚಾರ ಯೋಗ್ಯಗೊಳಿಸದಿದ್ದರೆ ಬಿಜೆಪಿ ಜನತೆಯ ಪರ ಹೋರಾಟಕ್ಕೆ ನಿರ್ಧರಿಸದೆ ಎಂದು ತಿಳಿಸಿದೆ.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries