HEALTH TIPS

No title

             ಸುಜಾತಾ ಗುರವ್ ಕಮ್ಮಾರ ಮತ್ತು ರಾಜೇಶ್ ಪಡಿಯಾರ್ ಸ್ವರಮಾಧುರ್ಯ 
     ಕಾಸರಗೋಡು: ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾಗಿರುವ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಕಾರದೊಂದಿಗೆ ಖ್ಯಾತ ಹಿಂದೂಸ್ಥಾನಿ ಗಾಯಕಿ ಸುಜಾತಾ ಗುರವ್ ಕಮ್ಮಾರ ಮತ್ತು ಖ್ಯಾತ ಸುಗಮ -ಭಕ್ತಿ ಸಂಗೀತ ಗಾಯಕ ರಾಜೇಶ್ ಪಡಿಯಾರ್ ಅವರಿಂದ ಭಕ್ತಿ - ಭಾವ - ವಚನ ಗಾಯನ `ನಾಮವೊಂದೇ ಸಾಲದೇ...' ಕಾರ್ಯಕ್ರಮ ಮಾ.31 ರಂದು ಶನಿವಾರ ಸಂಜೆ 5.30 ರಿಂದ ಕರಂದಕ್ಕಾಡಿನ ಪದ್ಮಗಿರಿ ಕುಟೀರದಲ್ಲಿ ನಡೆಯಲಿದೆ.
   ಸುಜಾತಾ ಗುರವ್ ಕಮ್ಮಾರ : 1973 ನವಂಬರ್ 19 ರಂದು ಸಂಗೀತ ಮನೆತನದಲ್ಲಿ ಜನಿಸಿದ ಸುಜಾತಾ ಗುರವ್ ಕಮ್ಮಾರ ಅವರು ಹಿಂದೂಸ್ತಾನಿ ಸಂಗೀತ ಹಾಗೂ ಸುಗಮ ಸಂಗೀತದಲ್ಲಿ ಖ್ಯಾತಿಗಳಿಸಿದ್ದಾರೆ. ಸಂಗೀತದಲ್ಲಿ ಅದಮ್ಯ ಅಭಿರುಚಿ ಮೈಗೂಡಿಸಿಕೊಂಡ ಸುಜಾತಾ ಅವರು ತಮ್ಮ ತಂದೆ ಹಾಗೂ ಗುರುಗಳಾದ ಖ್ಯಾತ ಹಿಂದುಸ್ಥಾನಿ ಗಾಯಕರಾದ ಪಂಡಿತ್ ಸಂಗಮೇಶ್ವರ ಗುರುವ ಅವರ ಮಾರ್ಗದರ್ಶನದಲ್ಲಿ ಶಾಸ್ತ್ರೀಯ ಮತ್ತು ಹಿಂದೂಸ್ಥಾನಿ ಸಂಗೀತ ಹಾಗೂ ಸುಗಮ ಸಂಗೀತವನ್ನು ಖ್ಯಾತ ಹಾಮರ್ೋನಿಯಂ ವಾದಕರಾದ ಪಂಡಿತ ವಸಂತ ಕನಕಾಪೂರ ಅವರಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
ತಂದೆಯ ಮಾರ್ಗದರ್ಶನದಲ್ಲಿ ಸಂಗೀತದ ಜ್ಞಾನಾರ್ಜನೆ ಮಾಡಿ ತಮ್ಮ ಗಾಯನದಲ್ಲಿ ಅಳವಡಿಸಿಕೊಂಡಿದ್ದಾರೆ. ಕನ್ನಡ, ಹಿಂದಿ, ಮರಾಠಿ ಭಾಷೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದೂ ಅಲ್ಲದೇ ವಚನ, ದಾಸರ ಪದ, ಜಾನಪದ, ಕನ್ನಡ ರಂಗ ಗೀತೆಗಳನ್ನು ಮತ್ತು ಠುಮಲ ಝಲಾಗಳನ್ನು ಸುಶ್ರಾವ್ಯವಾಗಿ ಹಾಡಿ ಶ್ರೋತೃಗಳ ಮನಸೂರೆಗೊಂಡಿದ್ದಾರೆ.
   ಪ್ರಸ್ತುತ ಧಾರವಾಡ ಆಕಾಶವಾಣಿ ಹಾಗೂ ದೂರದರ್ಶನ ಕೇಂದ್ರದ ಕಲಾವಿದರಾಗಿರುವ ಅವರು ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸುಮಧುರ ಗಾಯಕಿಯಾಗಿರುವ ಇವರು ಖ್ಯಾತ ರಾಗಸಂಯೋಜಕರಾಗಿದ್ದಾರೆ. ಸುವರ್ಣ ನ್ಯೂಸ್ ಚಾನೆಲ್ನಲ್ಲಿ ಮೂಡಿಬಂದ `ನಮನ' ಕಾರ್ಯಕ್ರಮದ ಅತಿಥಿಯಾಗಿ ನಾಡಿಗೆ ಚಿರಪರಿಚಿತರು. ಖಾಸಗಿ ದೂರದರ್ಶನ ಚಾನೆಲ್ಗಳಾದ ಉದಯ ಹಾಗೂ ಸುವರ್ಣ ನ್ಯೂಸ್ ವಾಹಿನಿಯಲ್ಲಿ ಸುಗಮ ಸಂಗೀತ, ರಾಷ್ಟ್ರೀಯ ಉತ್ಸವಗಳಾದ ಮೈಸೂರು ದಸರಾ, ಹಂಪಿ ಉತ್ಸವ, ಗಡಿನಾಡು ಉತ್ಸವ, ಆಳ್ವಾಸ್ ನುಡಿಸಿರಿ ಉತ್ಸವ, ಕದಂಬೋತ್ಸವ, ಧಾರವಾಡ ಉತ್ಸವ ಹೀಗೆ ಅನೇಕ ವೇದಿಕೆಗಳಲ್ಲಿ ರಾಜ್ಯದಾದ್ಯಂತ ಕಾರ್ಯಕ್ರಮ ನೀಡಿದ್ದಾರೆ. ತಿರುಪತಿ ಹಾಗೂ ಮಂತ್ರಾಲಯದಲ್ಲಿ ದಾಸವಾಣಿ ಕಾರ್ಯಕ್ರಮ ನೀಡಿದ್ದಾರೆ. ಬೆಂಗಳೂರಿನ ಅಶ್ವಿನಿ ರಿಕಾಡರ್ಿಂಗ್ ಕಂಪೆನಿಯವರು `ವಚನ ಸುಧಾ' ಎಂಬ ವಚನಗಳ ಧ್ವನಿ ಸುರಳಿಯನ್ನು ಬಿಡುಗಡೆ ಮಾಡಿದ್ದಾರೆ.
   1991 ರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಸ`ೆಯ `ಜನಪದ ಗೀತೆಯಲ್ಲಿ' ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುವ ಅವರು 1992 ರ ನಾಡ ಹಬ್ಬದ ಕಾರ್ಯಕ್ರಮದಲ್ಲಿ ಶ್ರೇಷ್ಠ ಗಾಯಕಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಹುಬ್ಬಳ್ಳಿಯ ರಾ`ಾಕೃಷ್ಣ ಅಕಾಡೆಮಿ ವತಿಯಿಂದ `ದಶಕದ ಸಾಧಕರು' ಪ್ರಶಸ್ತಿ, ಸೌತ್ ಸೆಂಟ್ರಲ್ ಜೋನ್ ಕಲ್ಚರಲ್ ಸೆಂಟರ್ ನಾಗಪುರ ಇವರಿಂದ ಟಪ್ಪಾ-ಟುಮಲ ಪ್ರಶಸ್ತಿ ಪಡೆದಿದ್ದಾರೆ. 2004 ಎಪ್ರಿಲ್ 4 ರಂದು ಗದುಗಿನ ಪುಟ್ಟರಾಜ ಗವಾಯಿಗಳ ಹುಟ್ಟು ಹಬ್ಬದ ಸಮ್ಮೇಳನದಲ್ಲಿ  `ಸಂಗೀತ ವಿಕಾಸ ರತ್ನ' ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ರೋಟರಿ ಕ್ಲಬ್ ಧಾವರಾಡ ಇವರಿಂದ ವೊಕೇಶನಲ್ ಎಕ್ಸಲೆನ್ಸ್ ಅವಾಡರ್್ ಪಡೆದಿದ್ದಾರೆ.
ರಾಜೇಶ್ ಪಡಿಯಾರ್ : ಕಳೆದ 18 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಮೈಸೂರಿನ ರಾಜೇಶ್ ಪಡಿಯಾರ್ ಹಿಂದೂಸ್ಥಾನಿ ಶಾಸ್ತ್ರೀಯ, ಭಜನ್ಸ್, ಭಕ್ತಿಗೀತೆ, ಜಾನಪದ ಗೀತೆ ಮತ್ತು ಸುಗಮ ಸಂಗೀತದಲ್ಲಿ ಖ್ಯಾತರಾಗಿದ್ದಾರೆ. ರಿಥಂ ಪ್ಯಾಡ್ ಮತ್ತು ತಬ್ಲಾದಲ್ಲೂ ವಿಶೇಷ ಸಾಧನೆ ಮಾಡಿರುವ ಅವರು ಚಿಕ್ಕಂದಿನಿಂದಲೇ ಸಂಗೀತದಲ್ಲಿ ಆಸಕ್ತಿ ವಹಿಸಿದ್ದರು. ಕನ್ನಡ, ಹಿಂದಿ, ಕೊಂಕಣಿ ಮತ್ತು ಮರಾಠಿ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲರು. 2011 ರಲ್ಲಿ ಮಂತ್ರಾಲಯ ದೇವಸ್ಥಾನದಿಂದ ಸುಶಾಮಿಂದ್ರ ಕಲಾ ಪುರಸ್ಕಾರ್ ಪಡೆದಿದ್ದಾರೆ.
   ಮದ್ರಾಸ್ನಲ್ಲಿ ಭಜನ್ ಉತ್ಸವ್, ಪುನಾದಲ್ಲಿ ದತ್ತ ಜಯಂತಿ, 2009 ರಲ್ಲಿ ಮಂತ್ರಾಲಯದಲ್ಲಿ ರಾಘವೇಂದ್ರ ಆರಾ`ನಾ, 2008 ಮತ್ತು 2009 ರಲ್ಲಿ ಮೈಸೂರು ದಸರಾ ಉತ್ಸವ, ಮುಂಬೈಯ ಕಾಶೀ ಮಠ ಮೊದಲಾದೆಡೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿರುವ ಅವರು ದೂರದರ್ಶನ, ಇ-ಟಿವಿ. ಸುವರ್ಣ, ಉದಯ, ಜನಶ್ರೀ ಮೊದಲಾದ ವಾಹಿನಿಗಳಲ್ಲಿ ಸುಗಮ ಸಂಗೀತ ಮತ್ತು ದಾಸವಾಣಿ ಕಾರ್ಯಕ್ರಮ ನೀಡಿದ್ದಾರೆ. ದಿ|ಅಶ್ವಥ್, ಪುತ್ತೂರು ನರಸಿಂಹ ನಾಯಕ್, ಸಂಗೀತ ಕಟ್ಟಿ ಮೊದಲಾದವರ ಜೊತೆ ಕಳೆದ 15 ವರ್ಷಗಳಿಂದ ಸಂಗೀತ ನೀಡಿದ್ದಲ್ಲದೆ, ಆಲ್ ಇಂಡಿಯಾ ರೇಡಿಯೋದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries