HEALTH TIPS

No title

                    ಚಲಿಸುವ ರೈಲಿಗೆ ಕಲ್ಲೆಸೆತ
   ಕುಂಬಳೆ: ಚೆನ್ನೈ-ಮಂಗಳೂರು ಎಗ್ಮೋರ್ ಎಕ್ಸ್ಫ್ರೆಸ್ಸ್ ರೈಲು ಗಾಡಿಗೆ ದುಷ್ಕಮರ್ಿಗಳು ಕಲ್ಲಸೆದ ಘಟನೆ ಬುಧವಾರ ರಾತ್ರಿ ಕುಂಬಳೆ ಸಮೀಪದ ಮೊಗ್ರಾಲ್ ಪರಿಸರದಲ್ಲಿ ನಡೆದಿದೆ.
  ಚೆನ್ನೈ ಯಿಂದ ಮಂಗಳೂರಿಗೆ ಸಂಚರಿಸುವ ಎಗ್ಮೋರ್ ರೈಲುಗಾಡಿ ಡಿ 1 ಮತ್ತು ಡಿ 2 ಬೋಗಿಗಳ ಮೇಲೆ ಬುಧವಾರ ರಾತ್ರಿ 9.5ರ ವೇಳೆ ಕಾಸರಗೋಡು ರೈಲು ನಿಲ್ದಾಣದಲ್ಲಿ ನಿಲುಗಡೆಗೊಂಡು ಬಳಿಕ ಮಂಗಳೂರಿನತ್ತ ಸಂಚರಿಸುತ್ತಿರುವ ಮಧ್ಯೆ ಕುಂಬಳೆಯಿಂದ 4 ಕೀ.ಮೀ ದೂರದ ಮೊಗ್ರಾಲ್ನಲ್ಲಿ ಕಲ್ಲೆಸೆತಕ್ಕೊಳಗಾಗಿದೆ. ಘಟನೆಯಲ್ಲಿ ರೈಲು ಬೋಗಿಗಳಿಗೆ ಹಾನಿ ಸಂಭವಿಸಿದ್ದು, ಪ್ರಯಾಣಿಕರು ಅದೃಷ್ಟವಶಾತ್ ಪಾರಾದರು.
   ಕಲ್ಲೆಸೆತಕ್ಕೊಳಗಾದ ಬೋಗಿಗಳ ಸನಿಹದ ಬೋಗಿಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ರವರು ಪ್ರಯಾಣಿಸುತ್ತಿದ್ದರು. ಘಟನೆಯ ತಕ್ಷಣ ಸ್ಥಳ ಸಂದರ್ಶನ ನಡೆಸಿ ಪೋಲೀಸರಿಗೆ ತನಿಖೆ ನಡೆಸಲು ಆದೇಶಿಸಿದರು. ಜೊತೆಗೆ  ರೈಲ್ವೇ ಪೋಲೀಸರು ಘಟನೆಯ ಬಗ್ಗೆ ತಕ್ಷಣ ತನಿಖೆಗೆ ಚಾಲನೆ ನೀಡಿದರು.
   ಮೊಗ್ರಾಲ್ನಲ್ಲಿ ನಿರಂತರ ತೂರಾಟ:
  ಮೊಗ್ರಾಲ್ ಪರಿಸರದಲ್ಲಿ ಈ ಹಿಂದೆಯೂ ಬಹಳಷ್ಟು ಬಾರಿ ಚಲಿಸುವ ರೈಲುಗಾಡಿಗಳ ಮೇಲೆ ಕಲ್ಲುತೂರಾಟ, ಹಳಿಗಳಿಗೆ ಹಾನಿಗಳನ್ನು ಮಾಡಲಾಗುತ್ತಿದ್ದ ಪ್ರದೇಶವಾಗಿ ಗುರುತಿಸಿಕೊಂಡಿದೆ. ಆದರೆ ಇತ್ತೀಚೆಗೆ ಪೋಲೀಸರ ಕಠಿಣ ನಿಲುವುಗಳ ಬಳಿಕ ಮಿತಿಗೆ ಬಮದಿದ್ದುದು ಇದೀಗ ಮತ್ತೆ ಪ್ರಕರಣ ನಡೆದಿರುವುದರಿಂದ ರೈಲ್ವೇ ಪ್ರಯಾಣ ಆತಂಕಕ್ಕೀಡಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries