HEALTH TIPS

No title

               ಮಿತ್ರ ಕಲಾವೃಂದದ ಸಾಧನೆ ಸ್ತುತ್ಯರ್ಹ
     ಮಧೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಾ ಜನಪ್ರಿಯವಾಗಿರುವ ಮಧೂರಿನ ಮಿತ್ರ ಕಲಾವೃಂದದ ಸಾಧನೆ ಸ್ತುತ್ಯರ್ಹವಾದುದು ಎಂದು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಹೇಳಿದರು.
    ಮಿತ್ರ ಕಲಾವೃಂದದ 42 ನೇ ವಾಷರ್ಿಕೋತ್ಸವದಂಗವಾಗಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
      ದೇಶ ರಕ್ಷಣೆಗಾಗಿ ಪ್ರಾಣವನ್ನೇ ಪಣವಾಗಿಟ್ಟು ಹೋರಾಡುತ್ತಿರುವ ಯೋಧರನ್ನು ಗುರುತಿಸಿ ಗೌರವಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಮಧೂರಿನಲ್ಲಿ ಹುಟ್ಟಿ ಬೆಳೆದ ವಿಶ್ವನಾಥ ಗಟ್ಟಿಯವರು ಭಾರತೀಯ ಸೈನ್ಯವನ್ನು ಸೇರಿ ಸುಬೇದರ್ ಮೇಜರ್ ಆಗಿ ದಕ್ಷ, ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತರಾದರು. ಅವರ ಅನುಭವವೇ ಒಂದು ರೋಚಕ. ಅಂಥವರನ್ನು ಗುರುತಿಸಿ ಸಮ್ಮಾನಿಸಿದ ಮಿತ್ರ ಕಲಾವೃಂದವು ಸಮಾಜಮುಖೀ ಕೆಲಸ ಕಾರ್ಯಗಳಿಂದ ಉನ್ನತ ಸ್ಥಾನವನ್ನು ಪಡೆದುಕೊಂಡಿದೆ ಎಂದು ಮಿತ್ರ ಕಲಾವೃಂದದ ಗೌರವಾಧ್ಯಕ್ಷರೂ ಆಗಿರುವ ಉಳಿಯತ್ತಾಯ ವಿಷ್ಣು ಆಸ್ರ ಹೇಳಿದರು.
   ವಿಶ್ವನಾಥ ಗಟ್ಟಿ ಅವರ ಆತ್ಮೀಯರೂ, ಗುರುಗಳೂ ಆದ ಡಾ.ಕೆ.ಕಮಲಾಕ್ಷ ಅಭಿನಂದನಾ ಭಾಷಣ ಮಾಡಿದರು. ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಸಮ್ಮಾನ ಪತ್ರವನ್ನು ವಾಚಿಸಿದರು. ಡಾ.ಗುರುಪ್ರಸಾದ್ ಅಗ್ಗಿತ್ತಾಯ, ಶಾಜಿ ಕೆ. ಶುಭಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಧೂರು ಶಾಲಾ ಮುಖ್ಯೋಪಾಧ್ಯಾಯ ವಿನೋದ್ ಕುಮಾರ್ ಬಹುಮಾನ ವಿತರಿಸಿದರು. ಸಮ್ಮಾನಕ್ಕೆ ಉತ್ತರಿಸಿದ ವಿಶ್ವನಾಥ ಗಟ್ಟಿ ಅವರು ವೃತ್ತಿ ಜೀವನದ ಅನುಭವಗಳನ್ನು ಮಂಡಿಸಿದರು.
   ಕಲಿಕೆ ಮತ್ತು ಕ್ರೀಡೆಯಲ್ಲಿ ಪ್ರತಿಭಾನ್ವಿತರಾದವರನ್ನು ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷ ಕಿಶೋರ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯದಶರ್ಿ ಮೌನೇಶ್ ಎಂ.ಎನ್. ವರದಿ ಮಂಡಿಸಿದರು. ಹಿರಿಯ ಸದಸ್ಯ ಮಧುಕರ ಗಟ್ಟಿ ಸ್ವಾಗತಿಸಿ, ಚಂದ್ರಗೋಪಾಲ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ವಂದಿಸಿದರು. ವಿವಿಧ ವಿನೋದಾವಳಿ ಜರಗಿತು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries