HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಯಕ್ಷಗಾನ ತಾಳಮದ್ದಳೆ
     ಕುಂಬಳೆ: ಮುಜುಂಗಾವು ಸಮೀಪದ ಕಾವು ಕನ್ನಿಮೂಲೆ ಶ್ರೀ ಕೊರಗಜ್ಜ ಹಾಗೂ ಶ್ರೀ ಕಲ್ಲುಟರ್ಿ ದೈವಸ್ಥಾನದ ವಾಷರ್ಿಕೋತ್ಸವ ವಿವಿಧ ಧಾಮರ್ಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
    ಕಾರ್ಯಕ್ರಮದ ಅಂಗವಾಗಿ ಶ್ರೀ ಗಣಪತಿ ಹೋಮ, ದೈವಗಳಿಗೆ ತಂಬಿಲ ಸೇವೆ, ಮಂಗಳಾರತಿ, ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಶ್ರೀ ಗುಳಿಗ ದೈವದ ಕೋಲ, ಶ್ರೀ ಕಲ್ಲುಟರ್ಿ ಅಮ್ಮನ ಕೋಲ, ಶ್ರೀ ಕೊರಗಜ್ಜ ದೈವದ ಕೋಲ ಮೊದಲಾದವು ಜರಗಿತು.
   ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಜಲು ಉದಯಶಂಕರ `ಟ್ ಮತ್ತು ಬಳಗದವರಿಂದ `ಗದಾಯುದ್ಧ' ಎಂಬ ಕಥಾಭಾಗದ ಯಕ್ಷಗಾನ ತಾಳಮದ್ದಳೆ ಜರಗಿತು.
   ಮಧೂರು ಶ್ರೀ ಬೊಡ್ಡಜ್ಜ ಯಕ್ಷ ಭಾರತಿ ಕಲಾಸಂಘದ ಅಧ್ಯಕ್ಷ ಬಿ.ಬಾಲಕೃಷ್ಣ ಅಗ್ಗಿತ್ತಾಯ ಉದ್ಘಾಟಿಸಿದರು. ವಿಶ್ವನಾಥ ಮುಜುಂಗಾವು ಸ್ವಾಗತಿಸಿದರು.
ಹಿಮ್ಮೇಳದಲ್ಲಿ ಹರೀಶ ಪಂಜತ್ತೊಟ್ಟಿ(ಹಾಡುಗಾರಿಕೆ), ಬಾಲಕೃಷ್ಣ ಆಚೆಗೋಳಿ, ಲಕ್ಷ್ಮೀಶ ಬೇಂಗ್ರೋಡಿ, ರಿತೇಶ್ ಮಂಜತ್ತೊಟ್ಟಿ(ಚೆಂಡೆ ಮತ್ತು ಮದ್ದಳೆ), ಅರ್ಥಗಾರಿಕೆಯಲ್ಲಿ ಉದಯಶಂಕರ ಭಟ್ ಮಜಲು, ಗಣೇಶ ಪ್ರಸಾದ್ ಪೆರಡಾಲ, ಕಾತರ್ಿಕ್ ಪಡ್ರೆ, ವಿಷ್ಣು ಪ್ರಕಾಶ್ ಪೆರ್ವ, ಜಯರಾಮ ದೇವಸ್ಯ, ಬಿ.ಬಾಲಕೃಷ್ಣ ಅಗ್ಗಿತ್ತಾಯ ಮಧೂರು, ಸದಾಶಿವ ಆಚೆಗೋಳಿ ಮೊದಲಾದವರು ಸಹಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries