HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಮಣಿಯಂಪಾರೆ ಭಜನಾ ಮಂದಿರದಲ್ಲಿ ನಿಧಿ ಸಂಗ್ರಹ ಅದೃಷ್ಟ ಚೀಟಿ ಬಿಡುಗಡೆ
    ಪೆರ್ಲ: ಮಣಿಯಂಪಾರೆ ಶ್ರೀ ದುಗರ್ಾಪರಮೇಶ್ವರೀ ಭಜನಾ ಮಂದಿರ ದುಗರ್ಾನಗರದ ಅಭಿವೃದ್ಧಿ ಕಾರ್ಯ ಹಾಗೂ ನೂತನ ಸಭಾ ಭವನ ನಿಮರ್ಾಣದ ಅಂಗವಾಗಿ ನಿಧಿ ಸಂಗ್ರಹ ಯೋಜನೆಯಂತೆ ವಿನಂತಿ ಪತ್ರ ಹಾಗೂ ಅದೃಷ್ಟ ಚೀಟಿ ಬಿಡುಗಡೆ ಜರಗಿತು.
   ಸಭೆಯನ್ನು ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಆಶೀರ್ವಚನ ನೀಡುತ್ತಾ ಸನಾತನ ಧರ್ಮ ಸಮೃದ್ಧವಾಗಿದ್ದು ಇತ್ತೀಚಿನ ದಿನಗಳಿಂದ ಆತಂಕಕಾರಿ ವಾತಾವರಣ ನಿಮರ್ಾಣವಾಗಿದೆ. ನಮ್ಮ ಸದ್ವಿಚಾರಗಳ ಆಚರಣೆ, ಪೂಜೆ ಪುನಸ್ಕಾರ, ಭಜನೆಗಳನ್ನು ಹಾಗೂ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸುವ ಮೂಲಕ ಸಮಾಜದ ಬಗ್ಗೆ ಹಾಗೂ ಧಾಮರ್ಿಕ ಆಚರಣೆಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು. ದುಗರ್ಾಪರಮೇಶ್ವರೀ ಭಜನಾ ಮಂದಿರದ ಅಧ್ಯಕ್ಷ ಆನಂದ ಅರೆಮಂಗಿಲ ಸಭೆಯ ಅಧ್ಯಕ್ಷತೆ ವಹಿಸಿದ್ದರು.
   ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ವಿನಂತಿ ಪತ್ರ ಹಾಗೂ ಅದೃಷ್ಟ ಚೀಟಿ ಬಿಡುಗಡೆಗೊಳಿಸಿ ಮಾತನಾಡುತ್ತಾ ಹಿಂದುತ್ವದ ಪ್ರತಿಪಾದನೆ ಪ್ರತಿಯೊಬ್ಬ ಹಿಂದುವಿನ ಜನ್ಮಸಿದ್ಧ ಹಕ್ಕು, ಇದಕ್ಕೆ ಚ್ಯುತಿ ಬಂದರೆ ಸಿಡಿದೇಳಲು ಹಾಗೂ ಹೋರಾಟ ನಡೆಸಲು ಅಸಂಖ್ಯಾತ ಸಂಘಟನೆಗಳು, ಯುವ ತಲೆಮಾರುಗಳು ಸನ್ನದ್ಧವಾಗಿದೆ. ಆದ್ದರಿಂದ ರಾಜಕೀಯ ಪ್ರೇರಿತವಾಗಿ ಹಿಂದುತ್ವಕ್ಕೆ ಧಕ್ಕೆ ತರುವ ಕೆಲಸವನ್ನು ಪ್ರತಿಯೊಬ್ಬರೂ ಖಂಡಿಸಲೇಬೇಕು. ಒಗ್ಗಟ್ಟಿನಿಂದ ಮುನ್ನಡೆದರೆ ಯಾವುದೇ ಧಾಮರ್ಿಕ ಶ್ರದ್ಧಾ ಕೇಂದ್ರದ ಅಭಿವೃದ್ಧಿ ಸಾಧ್ಯ ಎಂದರು. ಮಂದಿರದ ಹಿರಿಯ ಸದಸ್ಯ ಗೋವಿಂದ ನಾಯ್ಕ ಅರೆಮಂಗಿಲ ಅವರಿಗೆ ಪ್ರಥಮ ಅದೃಷ್ಟ  ಚೀಟಿಯನ್ನು ವಿತರಿಸಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರನಾಥ ನಾಯಕ್ ಶೇಣಿ ತೋಟದ ಮನೆ, ನಿವೃತ್ತ ಮುಖ್ಯೋಪಾಧ್ಯಾಯ ಕುಂಞಣ್ಣ ಮಾಸ್ತರ್ ನೆಕ್ಕರೆಪದವು, ಶೇಣಿ ಶ್ರೀ ಅಯ್ಯಪ್ಪ ಭಜನಾ ಮಂದಿರದ ಕಾರ್ಯದಶರ್ಿ ಶರತ್ಚ್ಚಂದ್ರ ಶೆಟ್ಟಿ ಶೇಣಿ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿದ್ದರು. ಗೋಪಾಲಕೃಷ್ಣ ಭಟ್ ಮಣಿಯಂಪಾರೆ ನಿಧಿ ಸಂಗ್ರಹ ಅದೃಷ್ಟ ಚೀಟಿ ಬಗ್ಗೆ ವಿವರಣೆ ನೀಡಿದರು. ನಿಶಿತಾ,ಪೂಜಾ, ಶುಭಾ, ಜಿತೇಶ್, ನಿತೇಶ್ ಪ್ರಾರ್ಥನೆಗೈದರು. ಹಿರಿಯ ಪತ್ರಕರ್ತ ಬಿ.ಪಿ.ಶೇಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೇಬಿ ಜಯರಾಮ್ ಸ್ವಾಗತಿಸಿ, ಎ.ಆರ್.ಕುಮಾರ್ ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries