HEALTH TIPS

No title

                ಪ್ರತಾಪನಗರದಲ್ಲಿ ಗೋ ಸಂರಕ್ಷಣೆಯ ಸಂಕಲ್ಪ ನಿಮಿತ್ತ ವಿಶ್ವಮಾತಾ ಗೋಮಾತಾ ಮತ್ತು ಸತ್ಸಂಗ
     ಉಪ್ಪಳ: ಭಾರತದ ಕಣಕಣವೂ ಪವಿತ್ರವಾದದ್ದೂ, ಭಾರತ ನಮ್ಮೆಲ್ಲರ ಭವ್ಯ ಸಂಪತ್ತು, ಭಾರತ ಇನ್ನಷ್ಟು ಸಂಪದ್ಭರಿತವಾಗಬೇಕಾದರೆ ಗೋ ಸಂರಕ್ಷಣೆ, ಗೋ ಪಾಲನೆಯನ್ನು ಪ್ರತಿಯೊಬ್ಬರು ತಮ್ಮ ಜೀವನದ ಅಮೂಲ್ಯ ಕರ್ತವ್ಯವೆಂದು ಮಾಡಬೇಕು ಎಂದು ಶ್ರೀ ಶಕ್ತಿದರ್ಶನ ಯೋಗಾಶ್ರಮ ಕಿನ್ನಿಗೋಳಿಯ ಯೋಗಾಚಾರ್ಯರಾದ ಪರಮಪೂಜ್ಯ ದೇವಬಾಬ ಆಶೀರ್ವಚನದಲ್ಲಿ ತಿಳಿಸಿದರು.
   ಅವರು  ಪ್ರತಾಪನಗರದ ಶ್ರೀ ಗೌರಿಗಣೇಶ ಭಜನಾ ಮಂದಿರ, ಗ್ರಾಮವಿಕಾಸ ಸಮಿತಿ ಮತ್ತು ಹಿಂದೂ ಐಕ್ಯ ವೇದಿಕೆ ಇದರ ಜಂಟಿ ಆಶ್ರಯದಲ್ಲಿ ಗೌರಿ ಗಣೇಶ ಭಜನಾ ಮಂದಿರ ಹಾಗೂ ಗ್ರಾಮವಿಕಾಸ ಕಾಯರ್ಾಲಯದ ಜೀಣರ್ೊದ್ಧಾರದ ಸಹಾಯಾರ್ಥ  ಸಗ್ರಹ ಶನೈಶ್ಚರ ಹವನ ಮತ್ತು ಸಾಮೂಹಿಕ ಶನೈಶ್ಚರ ಕಲ್ಪೋಕ್ತ ಪೂಜೆ ಮತ್ತು 33 ಕೋಟಿ ದೇವತೆಗಳ ಆವಾಸಸ್ಥಾನ, ಭಾರತದ ರಾಷ್ಟ್ರೀಯತೆ ಹಿಂದುತ್ವದ ಪರಮ ಶ್ರದ್ಧಾ ಬಿಂದು ಪವಿತ್ರ ಗೋಕುಲದ ಶ್ರೇಷ್ಠತೆ ಅನಿವಾರ್ಯತೆಯ ಜಾಗ್ರತಿ ಮತ್ತು ಸಂಕಲ್ಪಕ್ಕಾಗಿ ವಿಶ್ವಮಾತಾ ಗೋಮಾತಾ ಎಂಬ ನೃತ್ಯ ನಾಟಕ ಕಾರ್ಯಕ್ರಮದ  ಪ್ರಯುಕ್ತ ಶನಿವಾರ ನಡೆದ ಧಾಮರ್ಿಕ ಸತ್ಸಂಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
  ಭಾರತೀಯ ಗೋ ತಳಿಯ ಶ್ರೇಷ್ಠತೆಯ ಬಗ್ಗೆ ಮತ್ತು ಗೋತಳಿಯ ಮಹತ್ವ  ವೈಜ್ಞಾನಿಕ ಶ್ರೇಷ್ಠತೆಯ ಬಗ್ಗೆ ವಿವರಿಸಿ ಪ್ರತಿಯೊಬ್ಬರೂ ಗೋಸೇವೆಯನ್ನು ಮಾಡಿ ಜೀವನದಲ್ಲಿ ಕೃತಾರ್ಥರಾಗೋಣ ಎಂದರು.
   ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ನೀಡಿ  ನಾವೆಲ್ಲರೂ ಕತ್ತಲಿನಿಂದ ಬೆಳಕಿನೆಡೆಗೆ ಸಾಗೋಣ, ಸುಸಂಸ್ಕೃತ ರಾಗೋಣ ಆ ಮೂಲಕ ಪ್ರತಿಯೊಬ್ಬರೂ ಗೋವಿಗೆ ಆಶ್ರಯ ನೀಡೋಣ ಎಂದರು.
  ಕಾರ್ಯಕ್ರಮದಲ್ಲಿ ದಿಕ್ಸೂಚಿ ಬಾಷಣವನ್ನು ನಡೆಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಗೋಪಾಲ ಚೆಟ್ಟಿಯಾರ್ ಮಾತನಾಡಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯ ಮೂಲಕ ವ್ಯಕ್ತಿ ನಿಮರ್ಾಣ ಆ ಮೂಲಕ ಆದರ್ಶ ಗ್ರಾಮ, ಆದರ್ಶ ಸಮಾಜ ನಿಮರ್ಾಣವೇ ಸಂಘದ  ಉದ್ದೇಶ. ಸದೃಢ ಸಮಾಜಕ್ಕೆ ಡಾಕ್ಟರ್, ಎಂಜಿನಿಯರ್ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ರೈತ, ಅಧ್ಯಾಪಕ, ಮತ್ತು ಯೋಧ ಎಂಬುದನ್ನು ನೆನಪಿಸಿದರು. ಶೈಕ್ಷಣಿಕ ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣವನ್ನು ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ನೀಡಬೇಕು ಎಂದರು.
  ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನೆರುಲ್ ಶ್ರೀ ಮಣಿಕಂಠ ಸೇವಾ ಸಂಘ ಮುಂಬಯಿ ಇಲ್ಲಿನ ಅಧ್ಯಕ್ಷ ಸಂಜೀವ ಶೆಟ್ಟಿ ತಿಂಬರ, ಗೌರಿಗಣೇಶ ಭಜನಾ ಮಂದಿರದ ಜೀಣರ್ೊದ್ದಾರ ಸಮಿತಿ ಅಧ್ಯಕ್ಷ ರಮೇಶ್ ಆಳ್ವ ತಿಂಬರ, ಗೌರಿಗಣೇಶ ಭಜನಾ ಸಂಘದ ಅಧ್ಯಕ್ಷ ದಯಾನಂದ ಪೂಜಾರಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿಮರ್ಾಣಕ್ಕಾಗಿ ಸಾಮೂಹಿಕ ರಾಮ ತಾರಕ ಮಂತ್ರವನ್ನು ಜಪಿಸಲಾಯಿತು ಮತ್ತು ವಿಶ್ವಮಾತಾ ಗೋಮಾತಾ ನೃತ್ಯ ನಾಟಕದ ಸಂದರ್ಭದಲ್ಲಿ ಗೋ ಸಂರಕ್ಷಣೆಗಾಗಿ ಸಾಮೂಹಿಕವಾಗಿ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು.
  ಭಜನಾ ಮಂದಿರದ ಜೀಣರ್ೊದ್ದಾರ ಸಮಿತಿ ಪ್ರಧಾನ ಕಾರ್ಯದಶರ್ಿ ಪುರುಷೋತ್ತಮ ಪ್ರತಾಪನಗರ ಸ್ವಾಗತ ಪರಿಚಯ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜೇಶ್ ಪ್ರತಾಪನಗರ ವಂದೇ ಮಾತರಂ ಹಾಡಿದರು. ಪ್ರವೀಣ ಪ್ರತಾಪನಗರ ವಂದಿಸಿದರು. ನಿತೇಶ್ ಪ್ರತಾಪನಗರ ಮತ್ತು ಜಗದೀಶ್ ಪ್ರತಾಪನಗರ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಪ್ರತಾಪನಗರ ಶಿವಶಕ್ತಿ ಮೈದಾನದಲ್ಲಿ  ಶಕ್ತಿದರ್ಶನ ಯೋಗಾಶ್ರಮ ಕಿನ್ನಿಗೋಳಿ ಪ್ರಸ್ತುತ ಪಡಿಸಿದ ಕೆ.ವಿ.ರಮಣ್ ಮಂಗಳೂರು ಮತ್ತು ಡಾ.ಎಂ.ಪ್ರಭಾಕರ ಜೋಷಿ ರಚಿಸಿದ ಬಹುಮಾಧ್ಯಮ ಬಳಕೆಯ ವಿಶ್ವಮಾತಾ ಗೋಮಾತಾ ಎಂಬ ಅದ್ದೂರಿ ನೃತ್ಯ ನಾಟಕ ಜರಗಿತು.
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries